ರೆಡ್ಡಿ-ಶ್ರೀರಾಮುಲು ವೈಮನಸ್ಸು ಶಮನಕ್ಕಾಗಿ ಸೋಮಣ್ಣ ಪ್ರಯತ್ನ, ನಾನೂ ಕೈ ಜೋಡಿಸುವೆ: ವಿಜಯೇಂದ್ರ
ವಿಜಯಾನಂದ್ ಕಾಶಪ್ಪನವರ್ ಹೇಳಿರುವುದು ತನಗೆ ಗೊತ್ತಿಲ್ಲ ಎಂದ ವಿಜಯೇಂದ್ರ ಬಿಬಿಎಂಪಿ ಮತ್ತು ನಗರ ಪಾಲಿಕೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿದ್ದಾರೆ, ಹಾಗಾಗಿ ನಗರವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಅವರ ಸಮಸ್ಯೆಗಳ ಕಡೆ ಗಮನ ಹರಿಸಿ ಪರಿಹಾರ ಒದಗಿಸಬೇಕು ಎಂದ ವಿಜಯೇಂದ್ರ ಹೇಳಿದರು.
ದೇವನಹಳ್ಳಿ, ಜುಲೈ 12: ದೆಹಲಿಯಲ್ಲಿ ವರಿಷ್ಠರನ್ನು ಕಂಡು ಬೆಂಗಳೂರುಗೆ ವಾಪಸ್ಸಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra)ಎಲ್ಲರಿಗೂ ಒಳ್ಳೆಯದಾಗಲಿದೆ ಎಂದಷ್ಟೇ ಹೇಳಿದರು. ಗಾಲಿ ಜನಾರ್ಧನ ರೆಡ್ಡಿ ಮತ್ತು ಬಿ ಶ್ರೀರಾಮುಲು ನಡುವಿನ ವೈಮನಸ್ಸು ದೂರಮಾಡಿ ಒಂದುಗೂಡಿಸಲು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ ಪ್ರಯತ್ನಿಸುತ್ತಿದ್ದಾರೆ, ಮೊದಲು ಕಾಂಗ್ರೆಸ್ ಮತ್ತ ಜೆಡಿಎಸ್ ಪಕ್ಷದಲ್ಲಿದ್ದ ಅವರು ರಾಜಕಾರಣದಲ್ಲಿ ಅಪಾರ ಅನುಭವವುಳ್ಳವರು ಮತ್ತು ನಮ್ಮ ಪಕ್ಷದ ಟ್ರಬಲ್ ಶೂಟರ್; ರೆಡ್ಡಿ ಮತ್ತು ಶ್ರೀರಾಮುಲು ಮನಸ್ತಾಪವನ್ನು ಹೋಗಲಾಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ, ಅವರೊಂದಿಗೆ ತಾನೂ ಕೈಜೋಡಿಸುವುದಾಗಿ ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು: ವಿಜಯೇಂದ್ರ ಪ್ರಶ್ನೆ, ವಿರೋಧಿ ಬಣಕ್ಕೆ ಸಂದೇಶ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ