ಸಿದ್ದರಾಮಯ್ಯ ತಾವು ಹೇಳಬೇಕಿರುವುದನ್ನು ರಾಯರೆಡ್ಡಿ ಮೂಲಕ ಹೇಳಿಸುತ್ತಿದ್ದಾರೆ: ವಿಜಯೇಂದ್ರ
ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೂ ತೀರ ಹದಗೆಟ್ಟು ಹೋಗಿದೆ, ಹಾಸನದಲ್ಲಿ ಯುವಕರು ಹೃದಯಾಘಾತಗಳಿಗೆ ಬಲಿಯಾಗುತ್ತಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮೂರು ತಿಂಗಳಿಂದ ಹಾಸನಕ್ಕೆ ಹೋಗಿಲ್ಲ, ಇಂಥ ಬೇಜವಾಬ್ದಾರಿತನ ಕೇವಲ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾತ್ರ ಸಾಧ್ಯ, ಆದರೆ ಸಿಎಂ ಮಾತ್ರ ಎಲ್ಲವೂ ಸರಿಯಿದೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಶಿವಮೊಗ್ಗ, ಜುಲೈ 7: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಕ್ಷೇತ್ರಗಳಲ್ಲಿ ರಸ್ತೆಗಳಾಗಬೇಕಾದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಹೇಳಿರುವಾಗ ರಾಜ್ಯದ ಆರ್ಥಿಕ ಸ್ಥಿತಿ ಯಾವಮಟ್ಟಿಗೆ ಕುಸಿದಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಅಸಲಿಗೆ, ರಾಯರೆಡ್ಡಿಯವರಿಂದ ಸಿದ್ದರಾಮಯ್ಯ ಈ ಮಾತುಗಳನ್ನು ಹೇಳಿಸುತ್ತಿದ್ದಾರೆ, ಅವರಿಗೆ ಗ್ಯಾರಂಟಿ ಯೋಜನೆಗಳನ್ನು ನಿಯಮಿತವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ, ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ದುಡ್ಡಿಲ್ಲ ಅಂತ ಬಿಜೆಪಿ ಹೇಳಿದರೆ ಅದೆಲ್ಲ ಸುಳ್ಳು ಅಂತ ಮುಖ್ಯಮಂತ್ರಿ ಹೇಳುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ: ವಿಜಯೇಂದ್ರ ಮುಂದುವರಿಯದಂತೆ ಭಿನ್ನರ ಪಡೆ ವ್ಯೂಹ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ