‘ವಿವಾಹದ ಬಳಿಕ ಹರಿಪ್ರಿಯಾ ಮೇನ್ಸ್ಟ್ರೀಮ್ನಿಂದ ದೂರ ಸರಿದರು’; ಭಾವನಾ ರಾಮಣ್ಣ ಬೇಸರ
ಸಿನಿಮಾ ರಂಗದಲ್ಲಿ ಆ್ಯಕ್ಟ್ ಮಾಡೋರು ಮದುವೆ ಆದರೆ ಕಷ್ಟಗಳು ಹೆಚ್ಚು. ಅವರು ವಿವಾಹ ಆದ ಬಳಿಕ ಬೇಡಿಕೆ ಕಡಿಮೆ ಆಗುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇದನ್ನು ನಟಿ ಭಾವನಾ ರಾಮಣ್ಣ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ವಿವಾಹ ಆಗದೆ ಅವರು ಮಗು ಪಡೆಯುತ್ತಾ ಇದ್ದಾರೆ.
ಭಾವನಾ ರಾಮಣ್ಣ (Bhavana Ramanna) ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮದುವೆ ಆಗದೆ ಮಗು ಪಡೆಯುತ್ತಿದ್ದಾರೆ. ಚಿತ್ರರಂಗದವರು ಮದುವೆ ಆದರೆ ಎದುರಾಗುವ ಸಮಸ್ಯೆ ಬಗ್ಗೆ ಅವರು ಹೇಳಿದ್ದಾರೆ. ‘ಚಿತ್ರರಂಗದವರಿಗೆ ಎಲ್ಲಾ ಕ್ಷೇತ್ರದವರ ಜೊತೆ ಬಾಂಧವ್ಯ ಬೆಳೆದಿರುತ್ತದೆ. ನಾವು ಹಣ ನೋಡಿರುತ್ತೇವೆ. ಕೆಲಸ ಮಾಡುವವರ ಜೊತೆ ಆಪ್ತತೆ ಬೆಳೆದಿರುತ್ತದೆ. ಅದನ್ನು ಯಾರೂ ಮುಚ್ಚುಮರೆ ಮಾಡಲ್ಲ. ನಾವು ಆಪ್ತರಿಗೆ ಹಗ್ ನೀಡುತ್ತೇವೆ. ಪುರುಷನಿಗೆ ಪತ್ನಿ ಕಲಾವಿದೆ ಅನ್ನೋದು ಮರೆತು ಹೋಗಿರುತ್ತದೆ. ಅವಳು ಕೇವಲ ಪತ್ನಿ ಆಗಿ ಮಾತ್ರ ಕಾಣುತ್ತಾ ಇರುತ್ತಾರೆ. ಹರಿಪ್ರಿಯಾ ಇನ್ನೂ ಯಂಗ್. ಅವರು ಮೇನ್ಸ್ಟ್ರೀಮ್ನಿಂದ ಹೊರ ಹೋಗಿದ್ದಾರೆ. ಮದುವೆ ಆದ ಬಳಿಕ ಅವರು ಸೈಡ್ಲೈನ್ ಆದರು’ ಎಂದು ಬೇಸರ ಹೊರಹಾಕಿದ್ದಾರೆ ಭಾವನಾ ರಾಮಣ್ಣ .
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!

ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು

ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು

ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
