ದರ್ಶನ್ ತೂಗುದೀಪ​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ ರಾಮಣ್ಣ

ದರ್ಶನ್ ತೂಗುದೀಪ​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ ರಾಮಣ್ಣ

Malatesh Jaggin
| Updated By: Digi Tech Desk

Updated on:Jun 27, 2024 | 10:56 AM

ನಟಿ ಭಾವನಾ ರಾಮಣ್ಣ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ನಟ ದರ್ಶನ್​ ಜೊತೆ ಕೂಡ ಅವರು ನಟಿಸಿದ್ದಾರೆ. ಈಗ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್​ ಕುರಿತು ಭಾವನಾ ಅವರು ಮಾತನಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಏನೆಲ್ಲ ಆಗುತ್ತಿದೆ ಎಂಬುದರ ಬಗ್ಗೆ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಭಾರಿ ಸುದ್ದಿ ಆಗಿರುವ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ​ ಅವರು ಎ2 ಆಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರ ಜೊತೆ ಚಿತ್ರರಂಗದ ಅನೇಕರಿಗೆ ಒಡನಾಟ ಇದೆ. ಈಗ ದರ್ಶನ್​ ಜೈಲು ವಾಸ ಅನುಭವಿಸುತ್ತಿರುವುದು ಆಪ್ತರಿಗೆ ಬೇಸರ ತಂದಿದೆ. ನಟಿ ಭಾವನಾ ರಾಮಣ್ಣ ಅವರು ದರ್ಶನ್​ ಜೊತೆ ಅಭಿನಯಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಭಾವನಾ (Bhavana Ramanna) ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಾನು ಮತ್ತು ದರ್ಶನ್​ ಮೊದಲು ಭೇಟಿ ಆದಾಗ ಅವರು ಇನ್ನೂ ಹೀರೋ ಆಗಿರಲಿಲ್ಲ. ‘ಎಲ್ಲರ ಮನೆ ದೋಸೆನೂ’ ಸಿನಿಮಾದಲ್ಲಿ ನಾವು ಅಕ್ಕ-ತಮ್ಮ ಆಗಿದ್ದೆವು. ಹಾಗಾಗಿ ಬೇರೆ ಸಿನಿಮಾದಲ್ಲಿ ನಾವು ಹೀರೋ-ಹೀರೋಯಿನ್​ ಆಗಿ ನಟಿಸಲಿಲ್ಲ. ದರ್ಶನ್​  (Darshan) ಪ್ರಕರಣದ ಬಗ್ಗೆ ಮೊದಲು ಕೇಳಿದಾಗ ಬಹಳ ಕಸಿವಿಸಿ ಆಯಿತು. ಇದು ಘಟನೆಯ ಎರಡನೇ ಭಾಗ. ಆದರೆ ಆ ಮಹಿಳೆಗೆ ಕೆಟ್ಟ ಮೆಸೇಜ್​ ಬಂದಿದ್ದು ಮೊದಲ ಭಾಗ. ಆ ಭಾಗವನ್ನು ಯಾರೂ ಹೆಚ್ಚಾಗಿ ಹೇಳುತ್ತಿಲ್ಲ’ ಎಂದು ಭಾವನಾ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 26, 2024 10:07 PM