ಹೈಕಮಾಂಡ್ ಹಿಂದೆ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ, ಅಷ್ಟೇ: ಕೆಎನ್ ರಾಜಣ್ಣ, ಸಹಕಾರ ಸಚಿವ
ಲಿಂಗಾಯತ ಸಮುದಾಯದವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ ರಾಜಣ್ಣ ಎಲ್ಲ ಸಮುದಾಯಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯರಾಗಿರುವ ಮುಖಂಡರಿದ್ದಾರೆ ಎಂದರು. ಅದು ಸರಿ ಇವರು ಯಾಕೆ ಎಲ್ಲ ಸಮುದಾಯಗಳ ಪರ ರಾಜಣ್ಣ ಬ್ಯಾಟ್ ಮಾಡುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ!
ಬೆಂಗಳೂರು: ನಾಕ್ ಮೇ ದಂ ಕರ್ ರಖಾ ಹೈ ಅಂತಾರಲ್ಲ, ಸಹಕಾರ ಸಚಿವ ಕೆಎನ್ ರಾಜಣ್ಣರನ್ನು (KN Rajanna) ನೋಡಿದರೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಹಾಗನ್ನಿಸುತ್ತಿರಬಹುದು. ಹೆಚ್ಚುವರಿ ಡಿಸಿಎಂಗಳು (additional DCMs ) ಬೇಕೆಂಬ ಕೂಗು ಶುರವಾಗೋದೇ ರಾಜಣ್ಣನಿಂದ. ನೀವು ಪದೇಪದೆ ಮುಂದುಡಿತ್ತಿರುವ ಬೇಡಿಕೆಯಿಂದ ಬೇಸತ್ತ್ತಿರುವ ಶಾಸಕ ಹೆಚ ಸಿ ಬಾಲಕೃಷ್ಣ ಪ್ರತಿಭಟನೆ ನಡೆಸುತ್ತೇನೆ ಅಂದಿದ್ದಾರೆ ಅಂತ ಹೇಳಿದ್ದಕ್ಕೆ ಅವರು, ಮಾಡಲಿ ಅವರನ್ನು ತಡೆದವರು ಯಾರು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ಮಂಡಿಸುವ ಹಕ್ಕಿದೆ ಎಂದು ಹೇಳಿದರು. ಅಸೆಂಬ್ಲಿ ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ಏನು ಹೇಳಿತ್ತು? ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಎರಡನೇಯದಾಗಿ ಶಿವಕುಮಾರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಗಳಾಗುತ್ತಾರೆ. ಅವರು ಇನ್ನೊಂದು ಘೋಷಣೆಯನ್ನೂ ಮಾಡಿದ್ದರು, ಅದೇನೆಂದರೆ ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ತಾನೀಗ ಅದನ್ನೇ ಹೈಕಮಾಂಡ್ ಮತ್ತು ರಾಜ್ಯದ ನಾಯಕರಿಗೆ ತಾನು ಜ್ಞಾಪಿಸುತ್ತಿರುವುದಾಗಿ ರಾಜಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಸನದಲ್ಲಿ ಶ್ರೀಲಂಕಾ ಮಾದರಿ ಆನೆ ಧಾಮ: ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಭರವಸೆ