AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಶ್ರೀಲಂಕಾ ಮಾದರಿ ಆನೆ ಧಾಮ: ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಭರವಸೆ

ಬೆಳಗಾವಿ ಅದಿವೇಶನದ ವೇಳೆಯಲ್ಲಿ ಚರ್ಚೆ ಮಾಡಿದಂತೆ ಶ್ರೀಲಂಕಾ ಮಾದರಿಯಲ್ಲಿ ಹಾಸನ ಜಿಲ್ಲೆಯಲ್ಲು ಕೂಡ ಆನೆ ಧಾಮ ಮಾಡೋ ಬಗ್ಗೆ ಚಿಂತನೆ ಇದ್ದು ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಹಾಸನ ಉಸ್ತವಾರಿ ಸಚಿವ ಕೆಎನ್ ರಾಜಣ್ಣ ಹೇಳಿದರು.

ಹಾಸನದಲ್ಲಿ ಶ್ರೀಲಂಕಾ ಮಾದರಿ ಆನೆ ಧಾಮ: ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಭರವಸೆ
ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ ವಸಂತ್ ಕುಟುಂಬಸ್ಥರ ಆಕ್ರಂದನ
ಮಂಜುನಾಥ ಕೆಬಿ
| Updated By: Ganapathi Sharma|

Updated on: Jan 06, 2024 | 5:49 PM

Share

ಹಾಸನ, ಜನವರಿ 6: ಜಿಲ್ಲೆಯ ಕಾಡಂಚಿನ ಭಾಗದ ಜನರನ್ನ ಅಕ್ಷರಶಃ ಜೀವ ಭಯದಲ್ಲಿ ಮುಳುಗಿಸಿರುವ ಕಾಡಾನೆ ಹಾವಳಿಗೆ (Wild Elephant Attack) ಸರಣಿಯಾಗಿ ಜನರು ಬಲಿಯಾಗುತ್ತಿದ್ದಾರೆ. ಸತತ ಎರಡು ದಶಕಗಳಿಂದ ಕಾಡಾನೆ ಜೊತೆಗೆ ಸಂಘರ್ಷ ಮಾಡಿಕೊಂಡೇ ಜೀವನ ಸಾಗಿಸಿದ ಜನರು ಇದೀಗ ಹಿಂಡು ಹಿಂಡಾಗಿ ದಾಳಿಯಿಡುತ್ತಾ ಅಪಾಯ ತಂದೊಡ್ಡುತ್ತಿರೊ ಗಜಪಡೆಯನ್ನ ನಿಯಂತ್ರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶುಕ್ರವಾರ ಬೇಲೂರು (Belur) ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಕಾರ್ಮಿಕ ಕಾಡಾನೆ ದಾಳಿಗೆ ಬಲಿಯಾದ ಬಳಿಕ ನಡೆದ ಬೃಹತ್ ಹೋರಾಟ ಆರಂಭವಾಗಿದೆ. ನಂತರ ಶನಿವಾರ ಮೃತ ಕಾರ್ಮಿಕನ ಮನೆಗೆ ಆಗಮಿಸಿದ್ದ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಹಾಸನ ಜಿಲ್ಲೆಯಲ್ಲೂ ಶ್ರೀಲಂಕಾ ಮಾದರಿಯಲ್ಲಿ ಆನೆ ಧಾಮ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜತೆಗೆ, ಭಾನುವಾರದಿಂದಲೇ ಜಿಲ್ಲೆಯ ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಿಸೋದಾಗಿ ಹೇಳಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಫುರ, ಆಲೂರು ಹಾಗೂ ಬೇಲೂರು ತಾಲ್ಲೂಕಿನ ಕಾಡಂಚಿನ ಜನರನ್ನ ಆತಂಕಕ್ಕೆ ದೂಡಿರುವ ಕಾಡಾನೆಗಳ ಸಮಸ್ಯೆಗೆ ಮುಕ್ತಿಹಾಡೋ ಬಗ್ಗೆ ಕಡೆಗೂ ಸರ್ಕಾರ ಮನಸ್ಸು ಮಾಡಿರೊದಾಗಿ ಹೇಳಿಕೊಂಡಿದೆ. ಜನವರಿ 4ರ ಸಂಜೆ ಕಾಡಾನೆ ದಾಳಿಗೆ ಬಲಿಯಾಗಿದ್ದ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದ ಕಾರ್ಮಿಕ ವಸಂತ್ ಮನೆಗೆ ಇಂದು ಬೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಆನೆ ಹಾವಳಿ ತಡೆ ಬಗ್ಗೆ ಅದಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ವಸಂತ್ ಮನೆ ಬಳಿ ಅವರ ಪತ್ನಿ ಮಕ್ಕಳನ್ನ ಬೇಟಿಯಾದ ರಾಜಣ್ಣರಿಗೆ ಜನರು ನಿತ್ಯವೂ ಕಾಡಾನೆಯಿಂದ ಜನರು ಎದುರಿಸುತ್ತಿರೊ ಸಮಸ್ಯೆಯನ್ನ ತೆರೆದಿಟ್ಟರು. ಜನರು ಕೂಲಿ ಕೆಲಸಕ್ಕೆ ಹೋಗಲು ಆಗ್ತಿಲ್ಲ, ಫಸಲಿಗೆ ಬಂದ ಬೆಳೆಯನ್ನ ಕಟಾವು ಮಾಡಲಾಗ್ತಿಲ್ಲ, ಗ್ರಾಮದೊಳಗೆ ಎಂಟ್ರಿಯಾಗಿ ಮನೆಗಳ ಮುಂದೆಯೇ ಪ್ರತ್ಯಕ್ಷವಾಗೋ ಸಲಗಗಳು ಜೀವ ಭಯ ತಂದೊಡ್ಡುತ್ತಿವೆ ಎಂದು ಅಳಲು ತೋಡಿಕೊಂಡ್ರು.

ಕಾಡು ಪ್ರಾಣಿಗಳ ದಾಳಿಗೆ ಜನರು ಬಲಿಯಾಗುತ್ತಿರೋದು ಎಲ್ಲರಿಗೂ ಬೇಸರದ ಸಂಗತಿ ಎಂದ ಸಚಿವರು ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಕಾಡಾನೆ ದಾಳಿಗೆ ಬಲಿಯಾಗೋ ಜನರು ಭೂ ರಹಿತರಾಗಿದ್ದರೆ ಅವರಿಗೆ ಸರ್ಕಾರದಿಂದ 2 ಎಕರೆ ಭೂಮಿ ನೀಡೋ ಬಗ್ಗೆ ಕಾನೂನು ಮಾಡೋ ಬಗ್ಗೆ ಚಿಂತನೆ ಮಾಡೋದಾಗಿ ತಿಳಿಸಿದ್ದಾರೆ. ಮೃತ ವಸಂತ್ ಮಗನಿಗೆ ಗ್ರಾಮಪಂಚಾಯ್ತಿಯಲ್ಲಿ ಕೆಲಸ ನೀಡಲು ಸೂಚನೆ ನೀಡಲಾಗಿದ್ದು ಬೆಳಗಾವಿ ಅದಿವೇಶನದ ವೇಳೆಯಲ್ಲಿ ಚರ್ಚೆ ಮಾಡಿದಂತೆ ಶ್ರೀಲಂಕಾ ಮಾದರಿಯಲ್ಲಿ ಹಾಸನ ಜಿಲ್ಲೆಯಲ್ಲು ಕೂಡ ಆನೆ ಧಾಮ ಮಾಡೋ ಬಗ್ಗೆ ಚಿಂತನೆ ಇದ್ದು ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದರು.

ಇದನ್ನೂ ಓದಿ: ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ: ಬೇಲೂರಿನ ಮತ್ತಾವರದಲ್ಲಿ ಘಟನೆ

ಹಾಸನ ಜಿಲ್ಲೆಯಲ್ಲಿ ಎರಡುವರೆ ದಶಕಗಳ ಹಿಂದೆ ಆರಂಬವಾದ ಕಾಡಾನೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದೆ. ಇದುವರೆಗೆ ಆನೆ ದಾಳಿಗೆ 79 ಜನರು ಬಲಿಯಾಗಿದ್ದರೆ, ಸಾಕಷ್ಟು ಸಂಖ್ಯೆಯ ಕಾಡಾನೆಗಳು ಕೂಡ ಪ್ರಾಣ ಕಳೆದುಕೊಂಡಿವೆ.

ಒಟ್ಟಿನಲ್ಲಿ ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿರುವ ಜನರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಎರಡೂವರೆ ದಶಕದ ಸಮಸ್ಯೆಗೆ ಆನೆ ಧಾಮ ಮುಕ್ತಿ ನೀಡುತ್ತಾ? ದಶಕಗಳಿಂದ ಇಂದು ನಾಳೆ ಎಂದು ಮುಂದೂಡಿದ ಸರ್ಕಾರ ಈಗಲಾದ್ರು ಎಚ್ಚೆತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ