AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪೇಗೌಡ ಜಯಂತಿ ನಿಮಿತ್ತ ಸರ್ಕಾರೀ ಆಹ್ವಾನ ಪತ್ರಿಕೆಯಲ್ಲಿ ದೇವೇಗೌಡ ಹಾಗೂ ನನ್ನ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ

ಕೆಂಪೇಗೌಡ ಜಯಂತಿ ನಿಮಿತ್ತ ಸರ್ಕಾರೀ ಆಹ್ವಾನ ಪತ್ರಿಕೆಯಲ್ಲಿ ದೇವೇಗೌಡ ಹಾಗೂ ನನ್ನ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 26, 2024 | 6:13 PM

Share

ಕುಡಿಯುವ ನೀರಿಗಾಗಿ ಬೆಂಗಳೂರಲ್ಲಿ ಈಗಲೇ ಹಾಹಾಕಾರ ಶುರುವಾಗಿದೆ, ಮುಂದಿನ 20 ವರ್ಷಗಳಲ್ಲಿ ಪರಿಸ್ಥಿತಿ ಏನಾಗಬೇಡ ಅನ್ನೋದನ್ನು ಈಗಿನ ಸರ್ಕಾರ ಯೋಚಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. ತಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರಕ್ಕೆ ಏನು ಮಾಡಿದ್ದೆ ಅನ್ನೋದು ಸರ್ಕಾರೀ ಕಡತಗಳಲ್ಲಿದೆ ಎಂದು ಕೇಂದ್ರ ಸಚಿವ ಹೇಳಿದರು.

ದೆಹಲಿ: ನಾಳೆ ನಾಡಪ್ರಭು ಕೆಂಪೇಗೌಡರ ಜಯಂತಿ (Kempegowda Jayanti) ಆಚರಣೆ ನಡೆಯಲಿದ್ದು ರಾಜ್ಯ ಸರ್ಕಾರದ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (former PM HD Devegowda) ಮತ್ತು ಕೇಂದ್ರ ಸಚಿವ  ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಬ್ಬರ ಹೆಸರಿಲ್ಲದಿರುವುದು ಹೊಸ ವಿವಾದ ಸೃಷ್ಟಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ, ದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ, ವಿಷಯಕ್ಕೆ ಅಷ್ಟು ಮಹತ್ವ ನೀಡಬೇಕಾದ ಅವಶ್ಯಕತೆ ಇಲ್ಲ, ಕೆಂಪೇಗೌಡರು ಯಾರೊಬ್ಬರ ಸೊತ್ತಲ್ಲ, ಅವರ ದಿನಾಚರಣೆಯನ್ನು ಎಲ್ಲರೂ ತಮಗೆ ತಿಳಿದ ರೀತಿಯಲ್ಲಿ ಆಚರಿಸುತ್ತಾರೆ. ಪಕ್ಷದ ಕಾರ್ಯಕರ್ತರಿಗೆ ಅವರ ಮನೆಗಳಲ್ಲಿ, ತಮ್ಮ ಏರಿಯಾಗಳಲ್ಲಿ ಆಚರಿಸುವಂತೆ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಅದರೆ ವಿಷಯ ಅದಲ್ಲ, ಕೆಂಪೇಗೌಡರ ದಿನಾಚರಣೆಯನ್ನು ಎಷ್ಟು ಅರ್ಥಪೂರ್ಣವಾಗಿ ಸರ್ಕಾರ ಆಚರಿಸಲಿದೆ ಅನ್ನೋದು ಮುಖ್ಯ. ಸುಮಾರು 500 ವರ್ಷಗಳ ಹಿಂದೆ ಆ ಮಾಹಾನುಭಾವ ಬೆಂಗಳೂರಿನ ಬಗ್ಗೆ ಕಂಡ ಕನಸು ಏನು ಅಂತ ಸರ್ಕಾರ ಯೋಚಿಸಬೇಕಿದೆ. ಅವರ ಕಾಲದಲ್ಲಿದ್ದ ಕರೆಗಳಲ್ಲಿ ಎಷ್ಟು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ? ಕನಿಷ್ಟಪಕ್ಷ ಈಗ ಉಳಿದಿರುವ ಕೆರೆಗಳನ್ನಾದರೂ ಸಂರಕ್ಷಿಸಿ ನಗರದಲ್ಲಿ ಸುರಿಯುವ ಮಳೆ ನೀರನ್ನು ಆ ಕೆರೆಗಳಿಗೆ ಹರಿದು ಹೋಗುವ ಕೆಲಸ ಮಾಡಿದರೆ ಈ ಸರ್ಕಾರಕ್ಕೆ ತಾನು ಸೆಲ್ಯೂಟ್ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿಯವರ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣನ ಫೋಟೋಗೆ ಜಾಗವಿಲ್ಲ!  

Published on: Jun 26, 2024 06:11 PM