ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ, ಅವರು ರೈತ ವಿರೋಧಿಗಳು: ಡಿಕೆ ಶಿವಕುಮಾರ್

ಪ್ರಿಯಾಂಕ್ ಖರ್ಗೆ ಅವರು ಯಾರು ಬೇಕಾದರೂ ಡಿಸಿಎಂ ಅಗಬಹುದು ಎಂದಿದ್ದಾರೆ ಅಂತ ಪತ್ರಕರ್ತರು ಹೇಳಿದ್ದಕ್ಕೆ ಶಿವಕುಮಾರ್ ಅವರು ಹೇಳಿಕೊಳ್ಳಲಿ ಬಿಡಿ, ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಯಾಗಲಿ ಎಂದರು. ಅದರೆ ಖರ್ಗೆ ಹೇಳಿದ್ದೇ ಬೇರೆ, ಹೆಚ್ಚುವರಿ ಡಿಸಿಎಂ ಬೇಕೆನ್ನುವವರು ಹೈಕಮಾಂಡ್ ಮುಂದೆ ಹೋಗಿ ಮಾತಾಡಲಿ ಅಂತ ಅವರು ಹೇಳಿದ್ದಾರೆ.

ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ, ಅವರು ರೈತ ವಿರೋಧಿಗಳು: ಡಿಕೆ ಶಿವಕುಮಾರ್
|

Updated on: Jun 26, 2024 | 7:08 PM

ರಾಮನಗರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸುವ ಕೆಲಸ ಮಾಡಿದರು. ಕೆಲವು ಸಲ ಅವರ ಮಾತುಗಳಲ್ಲಿ ವೈರಾಗ್ಯದ ಛಾಯೆ ಕೂಡ ಕಾಣಿಸಿತು. ಉಪ ಚುನಾವಣೆಗಳಿಗೆ (Assembly by polls) ಸಂಬಂಧಿಸಿದಂತೆ ಅವರ ಗಮನ ಕೇವಲ ಚನ್ನಪಟ್ಟಣದ ಮೇಲೆ ಮಾತ್ರ ಇದೆ ಎಂದು ಕೇಳಿದ ಪ್ರಶ್ನೆಗೆ ಅವರು, ಇಲ್ಲ ಎಲ್ಲ ಕಡೆ ಗಮನವಿದೆ, ಶಿಗ್ಗಾಂವ್ ಗೂ ಹೋಗ್ತೇನೆ ಎಂದು ಹೇಳಿದರು. ಹಾಲಿನ ಬೆಲೆ (milk price) ಏರಿಸಿದ್ದಕ್ಕೆ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅವರು, ಹಾಲಿನ ಬೆಲೆ ಏರಿಸಿದ್ದು ಕೆಎಂಎಫ್, ಸರ್ಕಾರವಲ್ಲ. ಹೆಚ್ಚಳವಾಗಿರುವ ಹಣ ನೇರವಾಗಿ ರೈತರಿಗೆ ಹೋಗುತ್ತದೆ, ಅಂದರೆ ಬಿಜೆಪಿಯವರಿಗೆ ರೈತರಿಗೆ ಹಣ ಹೊಗುವುದು ಬೇಕಿಲ್ಲ, ಅವರು ಯಾವತ್ತಿಗೂ ರೈತರ ವಿರೋಧಿಗಳು, ಅವರಿಗೆ ರೈತರ ಹಿತಾಸಕ್ತಿಗಿಂತ ವರ್ತಕರ ಹಿತಾಸಕ್ತಿ ಮುಖ್ಯ ಎಂದು ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ, ಸರಕಾರ ಉರುಳೋದು ನಿಶ್ಚಿತ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ ಅಂದಿದ್ದಕ್ಕೆ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದು ಶಿವಕುಮಾರ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾವೇರಿ ನದಿ ಮಾಲಿನ್ಯದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಆದೇಶ

Follow us