ಸರ್ಕಾರಿ ನೌಕರರನ್ನು ಗುಲಾಮರು ಎಂದ ಕುಮಾರಸ್ವಾಮಿ, ಕ್ಷಮೆಯಾಚಿಸಿದ ಡಿಕೆ ಶಿವಕುಮಾರ್
ಇಂದು(ಜೂ.26) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 24 ಇಲಾಖೆಗಳ ಕೌಂಟರ್ ಮೂಲಕ ಜನರ ಅರ್ಜಿ ಸ್ವೀಕಾರ ಮಾಡಿ, ಅವರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿ, ‘ಕೇಂದ್ರ ಸಚಿವ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಭೇಟಿ ನಿಡಿದ್ದಾಗ ಸರ್ಕಾರಿ ಅಧಿಕಾರಿ ಸಭೆಯಲ್ಲಿ ಅವರಿಗೆ ಗುಲಾಮರು ಎಂದು ಕರೆದಿದ್ದರು. ಇದೀಗ ಕುಮಾರಸ್ವಾಮಿ ಪರವಾಗಿ ಸರ್ಕಾರಿ ಅಧಿಕಾರಿಗಳ ಬಳಿ ಕ್ಷಮೆಯಾಚನೆ ಮಾಡಿದ್ದಾರೆ.
ರಾಮನಗರ, ಜೂ.26: ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸರ್ಕಾರಿ ನೌಕರರನ್ನು ಗುಲಾಮರು ಎಂದಿದಕ್ಕೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಕ್ಷಮೆಯಾಚಿಸಿದ್ದಾರೆ. ಹೌದು, ಮೊನ್ನೆಯಷ್ಟೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದಾಗ ಸರ್ಕಾರಿ ಅಧಿಕಾರಿ ಸಭೆಯಲ್ಲಿ ಅವರಿಗೆ ಗುಲಾಮರು ಎಂದು ಕರೆದಿದ್ದರು. ಇದೀಗ ಡಿಸಿಎಂ ಅದನ್ನು ಪಸ್ತಾಪಿಸಿ ಮಾಜಿ ಶಾಸಕರ ಕಡೆಯಿಂದ ಸರ್ಕಾರಿ ಅಧಿಕಾರಿಗಳ ಬಳಿ ಕ್ಷಮೆಯಾಚನೆ ಮಾಡಿದ್ದಾರೆ.
ಇಂದು(ಜೂ.26) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 24 ಇಲಾಖೆಗಳ ಕೌಂಟರ್ ಮೂಲಕ ಜನರ ಅರ್ಜಿ ಸ್ವೀಕಾರ ಮಾಡಿ, ಅವರ ಸಮಸ್ಯೆ ಆಲಿಸಿದರು. ಇದೇ ವೇಳೆ ಮಾತನಾಡಿದ ಅವರು, ‘ಸ್ಥಳೀಯ ಅಧಿಕಾರಿಗಳನ್ನು ನಾನು ಗುಲಾಮರು ಅಂತ ನಾನು ಕರೆಯಲ್ಲ, ಸಮಾಜಕ್ಕೆ ಸೇವೆ ಮಾಡುವುದಕ್ಕೆ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಸರಕಾರದ ಕೆಲಸ ದೇವರ ಕೆಲಸ ಎಂದು ಕೆಂಗಲ್ ಹನುಮಂತಯ್ಯನವರು ಬರೆಸಿದ್ದಾರೆ ಎಂದರು.
ಇದನ್ನೂ ಓದಿ:ಕಾವೇರಿ ನದಿ ಮಾಲಿನ್ಯದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಆದೇಶ
ಇನ್ನು ಇದು ಸರಕಾರದ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಹಾಗಾಗಿ ಜವಾಬ್ದಾರಿ ಇರುವವರನ್ನು ಮಾತ್ರ ವೇದಿಕೆ ಮೇಲೆ ಕೂರಿಸಲು ಹೇಳಿದ್ದೆ. ಅದಕ್ಕೆ ನಮ್ಮ ಪಕ್ಷದ ನಾಯಕರು ಕ್ಷಮಿಸಬೇಕು. ನಾವು ಐದು ಗ್ಯಾರೆಂಟಿಗಾಗಿಯೇ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಅದಕ್ಕೆ ಐದು ಸದಸ್ಯರನ್ನೂ ಮಾಡಲಾಗಿದೆ. ಬೇವೂರಿಗೆ ಬಂದಾಗ, ಬಿ ಕೆ ಪುಟ್ಟರಾಮಯ್ಯ ನೆನಪಾಗುತ್ತಾರೆ. ವಿರೋಧ ಪಕ್ಷದವರಾಗಿ ಅವರು ಕೆಲಸ ಮಾಡಿದ್ದರು ಎಂದು ನೆನಪಿಸಿಕೊಂಡರು.
ಇದೇ ವೇಳೆ ಚನ್ನಪಟ್ಟಣಕ್ಕೆ 100 ರಿಂದ 150 ಕೋಟಿ ಗ್ರಾಂಟ್ ತರಿಸಿ ಕೆಲಸ ಮಾಡ್ತೇನೆ, ನೀರಾವರಿ ಬಗ್ಗೆನೂ ಏನೇನು ಕೆಲಸ ಮಾಡಬೇಕು ಮಾಡುತ್ತೇನೆ. 540 ಕೋಟಿ ರೂ. ಡಿಕೆ ಸುರೆಶ್ ರವರ ಯೋಜನೆ ಆಗಿದೆ. ನಮ್ಮ ಇಲಾಖೆಯಿಂದಲೇ ಆ ಹಣ ಬಿಡುಗಡೆ ಮಾಡಿದ್ದೇನೆ. ನಿಮಗಿರುವ ಸೌಲಭ್ಯ ಯಾರಿಗೂ ಮಾಡಿಲ್ಲ. ಇವೆಲ್ಲ ಡಿಕೆ ಸುರೇಶ್ ಎಮ್ಪಿ ಹಾಗೂ ನಾನು ಪವರ್ ಮಿನಿಸ್ಟರ್ ಇದ್ದಾಗ ಮಾಡಿದ್ದು, ಯಾರ ಬೇಕಾದರೂ ಈ ಕುರಿತು ಪ್ರಶ್ನೆ ಮಾಡಬಹುದು. ನಮ್ಮ- ನಿಮ್ಮ ಸಂಬಂಧ ದೇವರ ಸಂಬಂಧ ಇದ್ದ ಹಾಗೆ. ನೀವು ಬರೀ ಆಶ್ವಾಸನೆಯಿಂದ ಇದ್ರಿ, ಈಗ ಬರೀ ಆಶ್ವಾಸನೆ ಮಾತ್ರವಲ್ಲ, ಅಲ್ಲೇ ನಿಮ್ಮ ಕಷ್ಟವನ್ನು ಕೇಳಲು ಬರುತ್ತೀನಿ ಎಂದು ಹೇಳಿದರು. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಎಸ್‌ಪಿ ಕಾರ್ತಿಕ್ ರೆಡ್ಡಿ ಉಪಸ್ಥಿತಿ ಇದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ