AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ರಾಮನಗರದ ಈ ಪ್ರದೇಶಗಳಲ್ಲಿ ಇಂದು ಸಾಯಂಕಾಲವರೆಗೆ ವಿದ್ಯುತ್​ ಕಟ್

ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು (ಜೂ.26) ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ಬೆಂಗಳೂರು, ರಾಮನಗರದ ಈ ಪ್ರದೇಶಗಳಲ್ಲಿ ಇಂದು ಸಾಯಂಕಾಲವರೆಗೆ ವಿದ್ಯುತ್​ ಕಟ್
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Jun 26, 2024 | 9:43 AM

Share

ಬೆಂಗಳೂರು, ಜೂನ್​ 26: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (KPTCL) ದುರಸ್ತಿ ಅಥವಾ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು (ಜೂ.26) ವಿದ್ಯುತ್​ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (BESCOM) ಮಾದ್ಯಮ ಪ್ರಕಟಣೆ ಹೊರಡಿಸಿದೆ. ಹಾಗೆ, ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 10:30 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್​​ ವ್ಯತ್ಯಯವಾಗಲಿದೆ. ರಾಮನಗರ ಮತ್ತು ಮಾಗಡಿಯಲ್ಲಿ ಬೆಳಗ್ಗೆ 10:30 ರಿಂದ 3 ಗಂಟೆಯವರೆಗೆ ಮತ್ತು ಕನಕಪುರದಲ್ಲಿ 4 ಗಂಟೆಯವರೆಗೆ ವಿದ್ಯುತ್​ ಕಡಿತವಾಗಲಿದೆ.

ವಿದ್ಯುತ್​ ವ್ಯತ್ಯಯವಾಗುವ ಏರಿಯಾಗಳು

ಬೆಂಗಳೂರಿನ, ಆರ್​ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುವಲ್​ ರಸ್ತೆ, ಕರಿಯಪ್ಪ ಲೇಔಟ್​, ಆಶ್ರಮ ರಸ್ತೆ, ಆನಂದನಗರ ಮೊದಲನೇ ಬ್ಲಾಕ್​​, ಗುಡ್ಡಪ್ಪರೆಡ್ಡಿ ಲೇಔಟ್​, ಹೆಬ್ಬಾಳ, ಜಯಮಹಲ್ ಮೊದಲನೇ ಬ್ಲಾಕ್​​, ನಂದಿದುರ್ಗ ರಸ್ತೆ, ಮರಪ್ಪ ಗಾರ್ಡನ್​​, ಜೆಸಿನಗರ, ಮಿಲ್ಲರ್ಸ್​ ರಸ್ತೆ, ಗಂಗಾನಗರ, ಚಾಮುಂಡಿನಗರ, ದಿನ್ನುರ, ಪಿ&ಟಿ ಕಾಲೋನಿ, ಇಎಕ್ಸ್​​ ಸರ್ವಿಸ್​​ ಮೆನ್​ ಕಾಲೋನಿ, ಎಮ್​ಎಲ್​​ಎ ಲೇಔಟ್​, ಗಂಗಾನಗರ, ಆರ್​ಬಿವೈ ಕಾಲೋನಿ, ಹೆಚ್​ಎಮ್​​ಟಿ ಲೇಔಟ್​, ವಸಂತಪ್ಪ ಬ್ಲಾಕ್​​ ಇತ್ಯಾದಿ.

ಇದನ್ನೂ ಓದಿ: ಜಮೀನಲ್ಲಿ ಕರೆಂಟ್ ಕಂಬ ಹಾಕಿಸಿದ್ದರೆ ಪರಿಹಾರ ಸಿಗುತ್ತೆ ಎಂಬ ಸುದ್ದಿ ಸುಳ್ಳು -ಬೆಸ್ಕಾಂ ಸ್ಪಷ್ಟನೆ

ರಾಮನಗರ ವಿದ್ಯುತ್​ ವ್ಯತ್ಯಯ

ಮಾಗಡಿ ಉಪವಿಭಾಗ ಪ್ರದೇಶದ ಮತ್ತೀಕೆರೆ, ಹೆಲಿಗೆಹಳ್ಳಿ ಉಪವಿಭಾಗ, ಬಸಪಾನ ದೊಡ್ಡಿ, ಎಲಿಗೆಹಳ್ಳಿ, ಗೆಜ್ಜೆಗರಗುಪ್ಪೆ.

ಕನಕಪುರ: ಕೊಳ್ಳಿಗನಹಳ್ಳಿ ಪಂಚಾಯಿತಿ, ಟಿ-ಹೊಸಹಳ್ಳಿ ಪಂಚಾಯತಿ ಮತ್ತು ಚೇಳೂರು ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಟೌನ್​, ಹಾರೋಹಳ್ಳಿ ಕೈಗಾರಿಗಾ ಪ್ರದೇಶ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ.

ರಾಮನಗರ: ಹುನ್ನಾಸಹನಹಳ್ಳಿ, ಕೊನಗಲ, ಯರಬನಗರದಲ್ಲಿ ವಿದ್ಯುತ್​ ಕಟ್​ ಆಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Wed, 26 June 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ