ಮನೆಯಲ್ಲಿ ಸಂಭವಿಸುವ ವಿದ್ಯುತ್​ ಅವಘಡ ತಡೆಯಲು, ಬಳಕೆ ಕುರಿತು ಇಂಧನ ಇಲಾಖೆ ಮಾಹಿತಿ

ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷಿತಾ ಸಪ್ತಾಹ ಕಾರ್ಯಕ್ರಮವನ್ನು ಇಂಧನ ಸಚಿವ ಕೆಜೆ ಜಾರ್ಜ್ ​ ಉದ್ಘಾಟಿಸಿದರು. ಬಳಿಕ ಸಪ್ತಾಹ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಕೆಜೆ ಜಾರ್ಜ್​ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗೃಹ ಬಳಕೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಸುರಕ್ಷತಾ ನಿಯಮಗಳ ಬಗ್ಗೆ ತಿಳಿಸಲಾಯಿತು.

ಮನೆಯಲ್ಲಿ ಸಂಭವಿಸುವ ವಿದ್ಯುತ್​ ಅವಘಡ ತಡೆಯಲು, ಬಳಕೆ ಕುರಿತು ಇಂಧನ ಇಲಾಖೆ ಮಾಹಿತಿ
ರಾಷ್ಟ್ರೀಯ ವಿದ್ಯುತ್​​ ಸಾಕ್ಷರತಾ ಸಪ್ತಾಹ
Follow us
|

Updated on:Jun 26, 2024 | 11:16 AM

ಬೆಂಗಳೂರು, ಜೂನ್​ 26: ಇಂಧನ ಇಲಾಖೆಯಿಂದ‌ ಇಂದು (ಜೂ.26) ಬೆಂಗಳೂರಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷಿತಾ ಸಪ್ತಾಹ-2024 ಕಾರ್ಯಕ್ರಮ ಆಯೋಜಿಸಲಾಗಿದೆ. ಜೂನ್​ 26 ರಿಂದ ಜುಲೈ 02ರ ವರೆಗೆ ಈ ಸಪ್ತಾಹ ನಡೆಯಲಿದೆ. ವಿಧಾನಸೌಧದ (Vidhan Soudha) ಮುಂಭಾಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷಿತಾ ಸಪ್ತಾಹ ಕಾರ್ಯಕ್ರಮವನ್ನು ಇಂಧನ ಸಚಿವ ಕೆಜೆ ಜಾರ್ಜ್ (KJ George)​ ಉದ್ಘಾಟಿಸಿದರು. ಬಳಿಕ ಸಪ್ತಾಹ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಕೆಜೆ ಜಾರ್ಜ್​ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ‌ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ ಎಂಡಿ ಪಂಕಜ್ ಕುಮಾರ್ ಪಾಂಡ್ಯ, ಅಪರ್ಣಾ ಪಾವಟೆ ಭಾಗಿಯಾಗಿದ್ದರು.

ಎಲೆಕ್ಟ್ರಾನಿಕ್ ವಾಹನಗಳಿಂದ ಆಗುತ್ತಿರುವ ಅವಘಡಗಳನ್ನು ತಪ್ಪಿಸುವ ಸಲುವಾಗಿ ಆಯೋಜಿಸಿರುವ ಸಪ್ತಾಹ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮೆನೆಯಲ್ಲಿ ವಿದ್ಯುತ್​ ಅವಘಡ ಸಂಭವಿಸಿದಂತೆ ಹೇಗೆ ನೋಡಿಕೊಳ್ಳಬೇಕು, ಅಪಾಯದಿಂದ ಹೇಗೆ ದೂರವಿರಬೇಕು? ಸೇರಿದಂತೆ ಹಲವು ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಗೃಹ ಬಳಕೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳು

  1. ಎಲ್ಲ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ, ಪರಿಣಿತ ವ್ಯಕ್ತಿಗಳಿಂದಲೇ ನಿರ್ವಹಿಸಬೇಕು.
  2. ಭಾರತೀಯ ಗುಣಮಟ್ಟ ಸಂಸ್ಥೆಯ (ISI) ಪ್ರಮಾಣೀಕೃತ ವಿದ್ಯುತ್ ಉಪಕರಣ, ಕೇಬಲ್, ವೈರ್ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಬೇಕು.
  3. ವಿದ್ಯುತ್ ಸ್ಥಾವರದಲ್ಲಿ ಪರಿಣಾಮಕಾರಿ ಭೂಸಂಪರ್ಕ ವ್ಯವಸ್ಥೆಯನ್ನು (ಅರ್ಥಿಂಗ್​) ಕಲ್ಪಸಿ, ನಿರ್ವಹಿಸಬೇಕಾಗಿರುತ್ತದೆ.
  4. ಜೀವ ರಕ್ಷಕ ಆರ್‌ಸಿಡಿಗಳನ್ನು ಬಳಸಿ ವಿದ್ಯುತ್ ಸೋರಿಕೆಯಿಂದ ಉಂಟಾಗುವ ಅಪಾಯವನ್ನು ತಪ್ಪಿಸುವುದು.
  5. ಭಾರಿ ವಿದ್ಯುತ್ ಪರಿಕರಗಳಾದ ರೆಫ್ರಿಜರೇಟರ್, ಮಿಕ್ಸರ್, ಘೀಸರ್, ವಾಷಿಂಗ್ ಮಷಿನ್ ಮುಂತಾದವುಗಳಿಗೆ ಮೂರು ಪಿನ್​ ಪ್ಲಗ್ ಸಾಕೆಟ್ಸ್‌ಗಳಿರುವ ಪ್ರತ್ಯೇಕ ಸ್ವಿಚ್ ನಿಯಂತ್ರಣದಿಂದಲೇ ವಿದ್ಯುತ್ ಸರಬರಾಜು ಕಲ್ಪಿಸಿ, ಮೂರನೇ ಪಿನ್‌ಗೆ ಭೂಸಂಪರ್ಕ ಕಲ್ಪಿಸಬೇಕಾಗಿರುತ್ತದೆ.
  6. ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್‌ಗಳನ್ನು ಕೈಗೆ ಎಟುಕುವ ಎತ್ತರದಲ್ಲಿ ಮಕ್ಕಳಿಗೆ ಸಿಗದ ಹಾಗೆ ಅಳವಡಿಸಬೇಕು.
  7. ಒದ್ದೆಯಾದ ಕೈಗಳಿಂದ ವಿದ್ಯುತ್‌ ಸ್ವಿಚ್‌ಗಳನ್ನು ಮುಟ್ಟಬಾರದು.
  8. ವಿದ್ಯುತ್ ಪ್ಲಗ್​ಅನ್ನು ಸಾಕೆಟ್‌ನಲ್ಲಿ ಅಳವಡಿಸುವ ಅಥವಾ ಅದರಿಂದ ತೆಗೆಯುವ ಮುಂಚಿತವಾಗಿ ಸ್ವಿಚ್‌ ಅನ್ನು ಆಫ್ ಮಾಡಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬೇಕು.
  9. ಬಳಸದೇ ಇರುವ ಸಾಕೆಟ್‌ಗಳಿಗೆ ಡಮ್ಮಿ ಸುರಕ್ಷಾ ಮುಚ್ಚಳವನ್ನು ಅಳವಡಿಸಬೇಕು.
  10. ಒಡೆದುಹೋಗಿರುವ ಅಥವಾ ಕೃಷವಾಗಿರುವ ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್‌ಗಳು ಕಂಡಬಂದ ಸಂದರ್ಭದಲ್ಲಿಯೇ ಹೊಸದರೊಂದಿಗೆ ಬದಲಾಯಿಸುವುದು.
  11. ನಿಯತಕಾಲಿಕವಾಗಿ ವಿದ್ಯುತ್ ಸ್ಥಾವರವನ್ನು ಪರಿಶೀಲಿನೆಗೆ ಒಳಪಡಿಸಿ ಸುಸ್ಥಿತಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು, ರಾಮನಗರದ ಈ ಪ್ರದೇಶಗಳಲ್ಲಿ ಇಂದು ಸಾಯಂಕಾಲವರೆಗೆ ವಿದ್ಯುತ್​ ಕಟ್

ಗೃಹ ಬಳಕೆ ವಿದ್ಯುತ್ ನಿರ್ವಹಿಸುವ ಅಂಶಗಳು

  1. ಅತಿಯಾದ ವಿಶ್ವಾಸದಿಂದ ವಿದ್ಯುತ್ ಕಾಮಗಾರಿಗಳನ್ನು ಸ್ವತಃ ನಿರ್ವಹಿಸಬಾರದು.
  2. ನಿಯಂತ್ರಣ ಸ್ವಿಚ್‌ ಅನ್ನು ಆಫ್ ಮಾಡದೇ ನ್ಯೂಸ್ ಔಟ್ ಆಗಿರುವ ಬಲ್ಟ್ ಅನ್ನು ಬದಲಾಯಿಸಬಾರದು.
  3. ಎಕ್ಸ್‌ಟೆನ್ನನ್ ಕಾರ್ಡ್‌ಗಳನ್ನು ಬಳಸಿ ವಿದ್ಯುತ್ ಮಂಡಲದ ಮೇಲೆ ಹೆಚ್ಚು ಭಾರವನ್ನು ಹಾಕಬಾರದು.
  4. ಮನೆಯ ಛಾವಣೆಯ ಮೇಲೆ ಬಟ್ಟೆಯನ್ನು ಒಣಗಿಸಲು, ಆಂಟೆನಾಗಳನ್ನು ಅಳವಡಿಸಲು ಬಳಸಲಾಗುವ ಕಂಬಗಳಿಗೆ ಸ್ಟೇ ತಂತಿಗಳನ್ನು ಸರ್ವಿಸ್ ಪೋಲ್ ಅಥವಾ ವಿದ್ಯುತ್ ದೀಪದ ಫಿಟ್ಟಿಂಗ್ ಇರುವ ಪೋಲ್‌ಗಳಿಗೆ ಬಿಗಿಯಬಾರದು.
  5. ವಿದ್ಯುತ್ ಕಂಬಗಳನ್ನು ಆಧಾರವಾಗಿ ಬಳಸಿ ಬಟ್ಟೆ ಒಣಗಿಸಲು ಸ್ಟೇ ತಂತಿಯನ್ನು ಬಿಗಿಯಬಾರದು

ಸಾರ್ವಜನಿಕರಿಗೆ ವಿದ್ಯುತ್‌ ಸುರಕ್ಷಿತ ಮಾರ್ಗಸೂಚಿಗಳು

  1. ತುಂಡಾಗಿ ನೆಲದಲ್ಲಿ ಬಿದ್ದಿರುವ, ತುಂಡಾಗಿ ಮರದ ಮೇಲೆ ಬಿದ್ದಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಕಂಡುಬಂದಲ್ಲಿ, ಅದನ್ನು ಸ್ಥಳಾಂತರಿಸುವ ಪ್ರಯತ್ನ ಮಾಡಬಾರದು ಹಾಗೂ ತಂತಿಯಿಂದ ಕನಿಷ್ಟ 10 ಮೀಟರ್ ಅಂತರದಲ್ಲಿರಬೇಕು. ಕೂಡಲೇ ಸ್ಥಳೀಯ ವಿದ್ಯುತ್ ಸರಬರಾಜುದಾರರ ಕಚೇರಿಗೆ ವಿಷಯ ತಿಳಿಸಬೇಕು.
  2. ವಿದ್ಯುತ್ ಮಾರ್ಗವನ್ನು ಹೊತ್ತ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು.
  3. ಜಾತ್ರಾ ಮಹೋತ್ಸವದ ಸಮಯದಲ್ಲಿ ರಥಗಳನ್ನು ಬೀದಿಯಲ್ಲಿ ಸಾಗಿಸುವ ಮುಂಚಿತವಾಗಿ ಸ್ಥಳೀಯ ವಿದ್ಯುತ್ ಸರಬರಾಜುದಾರರ ಸಹಾಯವನ್ನು ಪಡೆದುಕೊಳ್ಳತಕ್ಕದ್ದು.
  4. ವಿದ್ಯುತ್ ಮಾರ್ಗಗಳ ಎತ್ತರಕ್ಕಿಂತ ಹೆಚ್ಚು ಇರುವ ವಾಹನ / ಎತ್ತಿನಗಾಡಿ, ಏಣಿ, ಇತರೆ ವಸ್ತುಗಳನ್ನು ವಿದ್ಯುತ್ ಮಾರ್ಗದ ಕೆಳಗೆ ಸಾಗಿಸಬಾರದು.
  5. ವಿದ್ಯುತ್ ಮಾರ್ಗಗಳ ಸಮೀಪ ಗಾಳಿಪಟ ಅಥವಾ ಡ್ರೋನ್‌ಗಳನ್ನು ಹಾರಿಸಬಾರದು.
  6. ದ್ಯುತ್ ಮಾರ್ಗದ ಕಂಬಗಳನ್ನು ಜಾಹೀರಾತು ಫಲಕ / ಕಾರ್ಯಕ್ರಮದ ಪೆಂಡಾಲ್​ಗಳಿಗೆ ಆಧಾರವನ್ನಾಗಿ ಬಳಸಬಾರದು.
  7. ವಿದ್ಯುತ್ ಮಾರ್ಗದ ಸಮೀಪದಲ್ಲಿ ಕಟ್ಟಡವನ್ನು ಒಂದು ವೇಳೆ ನಿರ್ಮಾಣ ಮಾಡಲೇ ಬೇಕಾದರೆ, ಸ್ಥಳೀಯ ವಿದ್ಯುತ್ ಸರಬರಾಜುದಾರರ ಸಲಹೆಯನ್ನು ಪಡೆದುಕೊಂಡು ಸುರಕ್ಷತಾ ಅಂತರವನ್ನು ನಿಯಮಾನುಸಾರ ಕಾಯ್ದಿರಿಸಿ ಮುಂದುವರಿಯಬೇಕು.
  8. ವಿದ್ಯುತ್ ಮಾರ್ಗದ ಸಮೀಪ ನಿಯಮಾನುಸಾರ ಅಂತರದೊಳಗೆ ಮರ ಗಿಡಗಳನ್ನು ಬೆಳಸಬಾರದು.
  9. ವಿದ್ಯುತ್ ಮಾರ್ಗದ ಸಮೀಪ ಬೆಳೆಯಲಾಗಿದ್ದ ಮರಗಳಲ್ಲಿ ಫಲಗಳನ್ನು ಕೀಳುವ ಮುಂಚಿತವಾಗಿ, ಸ್ಥಳೀಯ ವಿದ್ಯುತ್ ಸರಬರಾಜುದಾರರ ಗಮನಕ್ಕೆ ವಿಷಯ ತಿಳಿಸಿ, ಅವರ ಸಲಹೆಯ ಮೇರೆಗೆ ವಿದ್ಯುತ್ ಮಾರ್ಗವನ್ನು ನಿಶ್ಚತನಗೊಳಿಸಿ ಮುಂದುವರಿಯಬೇಕು.
  10. ವಿದ್ಯುತ್ ಪರಿವರ್ತಕ ಕೇಂದ್ರದ ಸುತ್ತ ಅಳವಡಿಸಿರುವ ಸುರಕ್ಷತಾ ಬೇಲಿಯನ್ನು ಹತ್ತಬಾರದು
  11. ವಿದ್ಯುತ್ ಮಾರ್ಗದ ಕಂಬ ಅಥವಾ ಪರಿವರ್ತಕ ಕೇಂದ್ರದ ಕಂಬದ ಹತ್ತಿರ ಮೂತ್ರ ವಿಸರ್ಜನೆ ಮಾಡಬಾರದು.
  12. ತಂತಿ ಬೇಲಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ನೀಡಬಾರದು. ಬದಲಾಗಿ ಭಾರತೀಯ ಮಾನಕ ಬ್ಯೂರೋ ಪ್ರಮಾಣೀಕೃತ ಫೆನ್ಸ್ ಎನೆರೈಸರ್‌ ಅನ್ನು ಬಳಸಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕವನ್ನು ಅಧಿಕೃತವಾಗಿ ನೀಡಬಹುದು.
  13. ಶಾಲೆಗೆ ಸಾಗುವ ದಾರಿಯಲ್ಲಿ ಮತ್ತು ಶಾಲೆಯ ಆವರಣದಲ್ಲಿ ಅಳವಡಿಸಲಾಗುವ ಡಿಸ್ಟ್ರಿಬ್ಯೂಷನ್ ಬೋರ್ಡ್, ಜಂಕ್ಷನ್ ಬಾಕ್ಸ್ ಅಥವಾ ಬೀದಿ ದೀಪದ ಕಂಟ್ರೋಲ್ ಬಾಕ್ಸ್‌ ಅನ್ನು ಮುಚ್ಚಿರುವಂತೆ ನಿರ್ವಹಿಸಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:15 am, Wed, 26 June 24

ತಾಜಾ ಸುದ್ದಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ