Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಫ್ಲೋರಿಡಾದಲ್ಲಿ ಹೈಸ್ಪೀಡ್ ರೈಲೊಂದು ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಅಗ್ನಿಶಾಮಕ ಸಿಬ್ಬಂದಿ ಹಾಗೂ 15 ರೈಲು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಡೌನ್‌ಟೌನ್ ಡೆಲ್ರೇ ಬೀಚ್‌ನಲ್ಲಿ ಬೆಳಗ್ಗೆ 10.45 ಕ್ಕೆ ಕ್ರಾಸಿಂಗ್‌ನಲ್ಲಿ ಹೈಸ್ಪೀಡ್ ಪ್ಯಾಸೆಂಜರ್ ರೈಲು ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ರೈಲು ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಡೆಲ್ರೇ ಬೀಚ್ ಫೈರ್ ರೆಸ್ಕ್ಯೂ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೂವರು ಡೆಲ್ರೇ ಬೀಚ್ ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದು ಸ್ಥಿರ ಸ್ಥಿರವಾಗಿದೆ ಎಂದು ತಿಳಿಸಿದೆ.
ಫ್ಲೋರಿಡಾದಲ್ಲಿ ಹೈಸ್ಪೀಡ್ ರೈಲೊಂದು ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಅಗ್ನಿಶಾಮಕ ಸಿಬ್ಬಂದಿ ಹಾಗೂ 15 ರೈಲು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಡೌನ್‌ಟೌನ್ ಡೆಲ್ರೇ ಬೀಚ್‌ನಲ್ಲಿ ಬೆಳಗ್ಗೆ 10.45 ಕ್ಕೆ ಕ್ರಾಸಿಂಗ್‌ನಲ್ಲಿ ಹೈಸ್ಪೀಡ್ ಪ್ಯಾಸೆಂಜರ್ ರೈಲು ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ರೈಲು ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಡೆಲ್ರೇ ಬೀಚ್ ಫೈರ್ ರೆಸ್ಕ್ಯೂ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೂವರು ಡೆಲ್ರೇ ಬೀಚ್ ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದು ಸ್ಥಿರ ಸ್ಥಿರವಾಗಿದೆ ಎಂದು ತಿಳಿಸಿದೆ. ರೈಲಿನ ಮುಂಭಾಗದಲ್ಲಿ ಅಗ್ನಿಶಾಮಕ ಟ್ರಕ್‌ನ ಕೆಲವು ಭಾಗಗಳು ಸಹ ಅಂಟಿಕೊಂಡಿವೆ.
ಜುಲೈ 2017 ರಲ್ಲಿ ಬ್ರೈಟ್‌ಲೈನ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 100 ಕ್ಕೂ ಹೆಚ್ಚು ಜನರು ರೈಲುಗಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಹಿಂದಿನ ಸಾವುಗಳಲ್ಲಿ ಬ್ರೈಟ್‌ಲೈನ್‌ನ ದೋಷ ಕಂಡುಬಂದಿಲ್ಲ. ಕೆಲವರು ರೈಲು ಬರುವಾಗ ರೈಲು ಹಳಿಯಲ್ಲಿ ಓಡುವ ಪ್ರಯತ್ನ ಮಾಡಿದರೆ, ಇನ್ನೂ ಕೆಲವರು ರೈಲು ಹಾದುಹೋಗುವುದನ್ನು ಕಾಯುವ ಬದಲು ಗೇಟ್ಗಳನ್ನು ದಾಟಿ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ