Somavati Amavasya 2024: ಈ ವರ್ಷದ ಕೊನೆಯ ಅಮವಾಸ್ಯೆ; ಸೋಮಾವತಿ ಅಮವಾಸ್ಯೆಯ ಮಹತ್ವ ಮತ್ತು ಪೂಜಾ ವಿಧಾನವನ್ನು ತಿಳಿಯಿರಿ
ಹಿಂದೂ ಧರ್ಮದಲ್ಲಿ ಸೋಮಾವತಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಸೋಮವಾರದಂದು ಬರುವ ಅಮವಾಸ್ಯೆಯನ್ನು ಸೋಮಾವತಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ಪುಣ್ಯ ಸ್ನಾನ ಮಾಡುವುದಕ್ಕೆ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಈ ವರ್ಷದ ಕೊನೆಯ ಸೋಮಾವತಿ ಅಮವಾಸ್ಯೆಯನ್ನು ಡಿಸೆಂಬರ್ 30 ಅಂದರೆ ನಾಳೆ ಆಚರಿಸಲಾಗುತ್ತಿದ್ದು, ಈ ದಿನದ ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ವಿಶೇಷವಾಗಿ ಸೋಮವಾರದ ದಿನ ಬರುವಂತಹ ಸೋಮಾವತಿ ಅಮವಾಸ್ಯೆಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಈ ವಿಶೇಷ ಅಮವಾಸ್ಯೆಯು ಶಿವನಿಗೆ ಸಮರ್ಪಿತವಾಗಿರುವುದರಿಂದ ಶಿವ ಭಕ್ತರು ಸೋಮಾವತಿ ಅಮವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಈ ದಿನ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅರಳಿ ಮರವನ್ನು ಸಹ ಪೂಜಿಸಲಾಗುತ್ತದೆ ಜೊತೆಗೆ ಈ ದಿನದಂದು ಪುಣ್ಯ ಸ್ನಾನ ಮಾಡುವುದಕ್ಕೆ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಈ ವರ್ಷದ ಕೊನೆಯ ಸೋಮಾವತಿ ಅಮವಾಸ್ಯೆಯನ್ನು ಡಿಸೆಂಬರ್ 30 ಅಂದರೆ ನಾಳೆ ಆಚರಿಸಲಾಗುತ್ತಿದ್ದು, ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಸೋಮಾವತಿ ಅಮವಾಸ್ಯೆಯ ಮುಹೂರ್ತ:
- ಅಮವಾಸ್ಯೆ ತಿಥಿ ಆರಂಭ- ಡಿಸೆಂಬರ್ 30 ಬೆಳಗ್ಗೆ 06:31
- ಅಮವಾಸ್ಯೆ ತಿಥಿ ಮುಕ್ತಾಯ- ಡಿಸೆಂಬರ್ 31 ಬೆಳಗ್ಗೆ 06:26
ಪೂಜಾ ವಿಧಾನ:
ಸೂರ್ಯೋದಯಕ್ಕೂ ಮುಂಚೆ ಎದ್ದು, ಪವಿತ್ರ ಸ್ನಾನ ಮಾಡಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಸ್ನಾನದ ನೀರಲ್ಲಿ ಗಂಗಾಜಲ ಬೆರೆಸಿ ಮನೆಯಲ್ಲಿಯೂ ಸ್ನಾನ ಮಾಡಬಹುದು. ನಂತರ ದೇವರ ಕೋಣೆಯಲ್ಲಿ ದೀಪ ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿ ಶಿವ ಪಾರ್ವತಿಗೆ ಆರತಿ ಮಾಡಿ. ಸಾಧ್ಯವಾದರೆ ಉಪವಾಸವನ್ನು ಆಚರಿಸಿ, ಪೂರ್ವಜರನ್ನೂ ಪೂಜಿಸಿ ಮತ್ತು ಬಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಪೂರ್ವಜರ ಆಶಿರ್ವಾದವನ್ನು ಪಡೆಯುವುದ ಜೊತೆಗೆ ಪಾಪಗಳಿಂದ ಮುಕ್ತ ಪಡೆಯಬಹುದು.
ಅಮವಾಸ್ಯೆಯ ಮಹತ್ವ:
ಗರುಡ ಪುರಾಣದ ಪ್ರಕಾರ, ಸೋಮಾವತಿ ಅಮಾವಾಸ್ಯೆಯಂದು ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಪೂರ್ವಜರಿಗೆ ತರ್ಪಣ ಅರ್ಪಿಸುವುದರಿಂದ ಪಿತ್ರಾ ದೋಷದಿಂದ ಮುಕ್ತಿ ದೊರೆಯುತ್ತದೆ ಮತ್ತು ಅವರ ಆಶೀರ್ವಾದವನ್ನು ಪಡೆಯುತ್ತೀರಿ. ಇದಲ್ಲದೆ, ಉಪವಾಸ, ಪೂಜೆ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ.
ಇದನ್ನೂ ಓದಿ: 2025ರಲ್ಲಿ ಈ ರಾಶಿಯವರ ಕಾರು-ಮನೆ ಖರೀದಿಸುವ ಕನಸು ನನಸಾಗಲಿದೆ
ಸೋಮಾವತಿ ಅಮವಾಸ್ಯೆಯ ಶುಭ ಸಂದರ್ಭದಲ್ಲಿ ಗಂಗಾ ಅಥವಾ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ತುಂಬಾ ಪುಣ್ಯ. ಸೂರ್ಯೋದಯಕ್ಕೂ ಮುಂಚಿತವಾಗಿ ಪುಣ್ಯ ಸ್ನಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಸೂರ್ಯನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ ಈ ದಿನದಂದು ಅಗತ್ಯವಿರುವವರಿಗೆ ಅಥವಾ ಬಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಆಕೆಯ ಆಶೀರ್ವಾದವೂ ನಿಮ್ಮ ಮೇಲೆ ಇರುತ್ತದೆ ಎಂಬ ನಂಬಿಕೆಯಿದೆ. ಸೋಮಾವತಿ ಅಮವಾಸ್ಯೆಯಂದು ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯಕ್ಕಾಗಿ ಶಿವ ಪಾರ್ವತಿಯ ಜೊತೆಗೆ ಅರಳಿ ಮರವನ್ನು ಪೂಜಿಸಬೇಕು. ಈ ದಿನದಂದು ಸರಿಯಾದ ಪೂಜೆ ಮತ್ತು ಪರಿಹಾರಗಳನ್ನು ಮಾಡಿದರೆ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ