New Year 2025: ಕುಡಿದು ಮೆಟ್ಟಿಲು ಇಳಿಯಲಾಗದವಳನ್ನು ಬಾಯ್ಫ್ರೆಂಡ್ ಎತ್ತಿಕೊಂಡು ಹೋಗಿ ಆಸರೆಯಾದ!
ಪಬ್ ನಿಂದ ಹೊರಬರುವ ಯುವಕ ಯುವತಿಯರೆಲ್ಲ ತೂರಾಡಲ್ಲ, ಕೆಲವರು ಮಾತ್ರ ಅಪವಾದ ಎನಿಸಿಕೊಳ್ಳುತ್ತಾರೆ. ಯುವ ಜನಾಂಗದ ಮಧ್ಯೆ ಒಬ್ಬ ಆಂಟಿ ಕೂಡ ಇದ್ದಾರೆ, ಆಂಟಿಯೆಂದರೆ ತಪ್ಪಾದೀತು...ಒಬ್ಬ ಮಧ್ಯವಯಸ್ಕ ಮಹಿಳೆ ಇದ್ದಾರೆ, ಪ್ರಾಯಶಃ ಅವರು ತಮ್ಮ ಮಗ ಹಾಗೂ ಅವನ ಗರ್ಲ್ಫ್ರೆಂಡ್ ಜೊತೆ ಪಬ್ಗೆ ಬಂದಿದ್ದಾರೆ. ಕುಡಿದು ತೂರಾಡುತ್ತಿರುವ ಮಗನನ್ನು ಗರ್ಲ್ಫ್ರೆಂಡ್ ಹಿಡಿದುಕೊಂಡಿದ್ದಾಳೆ.
ಬೆಂಗಳೂರು: ಅಗಲೇ ಹೇಳಿದಂತೆ ನಿನ್ನೆ ರಾತ್ರಿ ನಗರದ ಪಬ್ಗಳ ಮುಂದೆ ಇಂಥ ದೃಶ್ಯಗಳು ಸಾಮಾನ್ಯವಾಗಿದ್ದವು, ಅಳತೆಮೀರಿ ಕುಡಿದವರ ಅವಾಂತರಗಳು! ಪಬ್ಬೊಂದರಿಂದ ಹೊರಬೀಳುತ್ತಿರುವ ಈ ಯುವತಿಯ ಸ್ಥಿತಿಯನ್ನೊಮ್ಮೆ ನೋಡಿ. ತಾನೆಲ್ಲಿದ್ದೇನೆ ಎಂಬ ಪರಿವೆಯೇ ಆಕೆಗಿಲ್ಲ. ಸ್ನೇಹಿತೆಯೊಬ್ಬಳ ಹೆಗಲ ಮೇಲೆ ಕೈಹಾಕಿ ತೂರಾಡುತ್ತಾ ಪಬ್ ನಿಂದ ಹೊರಗೇನೋ ಬರುತ್ತಾಳೆ, ಆದರೆ ಮೆಟ್ಟಲಿಳಿಯುವುದಕ್ಕೆ ಸಾಧ್ಯವಾಗಲ್ಲ. ಅಷ್ಟರಲ್ಲಿ ಪ್ರಾಯಶಃ ಆಕೆಯ ಬಾಯ್ಫ್ರೆಂಡ್ ಇರಬಹುದು, ಧಾವಿಸಿ ಬಂದು ಆಕೆಯನ್ನು ಎತ್ತಿಕೊಳ್ಳುತ್ತಾನೆ. ಸ್ವಲ್ಪ ದೂರ ಹೋದ ನಂತರ ಅವನು ಆಕೆಯನ್ನು ಕೆಳಗಿಳಿಸುತ್ತಾನೆ ಆದರೆ ಯುವತಿ ಮಾತ್ರ ಅವನನ್ನು ಬಿಡಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: New Year 2025: ಪಬ್ನಲ್ಲಿ ಕುಡಿದು ಹೊರಬಂದ ಆರ್ಸಿಬಿ ಅಭಿಮಾನಿಯೊಬ್ಬ ಈ ಸಲ ಕಪ್ ನಮ್ದೇ ಅಂದ!
Latest Videos