ಮಳೆಯಿಂದ ಶಿಥಿಲಗೊಂಡಿರುವ ಸೇತುವೆಗಳ ದುರಸ್ತಿ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಲಾಗುವುದು: ಸತೀಶ್ ಜಾರಕಿಹೊಳಿ

ಮಳೆಯಿಂದ ಶಿಥಿಲಗೊಂಡಿರುವ ಸೇತುವೆಗಳ ದುರಸ್ತಿ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಲಾಗುವುದು: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 01, 2025 | 4:25 PM

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಿದ ಸತೀಶ್ ಜಾರಕಿಹೊಳಿ, ಅದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ದೆಹಲಿ ವರಿಷ್ಠರು, ಈಗಿರುವವರನ್ನೇ ಮುಂದುವರಿಸಬೇಕೋ ಅಥವಾ ಹೊಸಬರನ್ನು ನೇಮಕ ಮಾಡಬೇಕೋ ಅನ್ನೋದು ಹೈಕಮಾಂಡ್​ಗೆ ಬಿಟ್ಟ ವಿಚಾರ, ತಾನು ಅದರ ಬಗ್ಗೆ ಯೋಚಿಸುವ ಗೋಜಿಗೆ ಹೋಗಿಲ್ಲ ಎಂದರು.

ಬೆಳಗಾವಿ: ಜಿಲ್ಲೆಯಲ್ಲಿ ಅನಾಹುತಕಾರಿ ಮಳೆಯಿಂದಾಗಿ ಬಹಳಷ್ಟು ಸೇತುವೆಗಳು ಶಿಥಿಲಗೊಂಡಿವೆ, ಅವುಗಳ ದುರಸ್ತಿ ಆಗಬೇಕಿದೆ, ಈ ಬಾರಿಯ ಬಿಜೆಟ್ ನಲ್ಲಿ ವಿಶೇಷ ಅನುದಾನ ಪಡೆಯುವ ಪ್ರಯತ್ನ ಮಾಡಿ ಬ್ರಿಜ್ ಗಳ ರಿಪೇರಿ ಕಾಮಗಾರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ರಸ್ತೆಗಳ ದುರಸ್ತಿಗೆ ಈಗಾಗಲೇ ₹ 4,000 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ ಸಚಿವ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಪಕ್ಷಾತೀತವಾಗಿ ಅಭ್ಯರ್ಥಿಯೊಬ್ಬರ ಹೆಸರು ಅಂತಿಮಗೊಳಿಸಲಾಗಿದೆ, ಅವರ ಹೆಸರು ಅನುಮೋದನೆ ಪಡೆಯುವ ನಿರೀಕ್ಷೆ ಇದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್​ಗೆ ನೂತನ ಅಧ್ಯಕ್ಷರ ಆಯ್ಕೆ, ಸತೀಶ್ ಜಾರಕಿಹೊಳಿ ಕೈ ಮೇಲುಗೈ