ಸಾರಾ ಮಹೇಶ್ ಮನೆ ಮಗಳಂತಿದ್ದ ಚಿಂಟು ಹೆಸರಿನ ಕೋತಿಗೆ ಇವತ್ತು 5ನೇ ವರ್ಷದ ಪುಣ್ಯಸ್ಮರಣೆ
ಮಹೇಶ್ ಕುದುರೆ ಹತ್ತಿ ಹೊರಟರೆ ಚಿಂಟು ಒಂದು ಕುರಿಯ ಬೆನ್ನೇರಿ ಅವರನ್ನು ಹಿಂಬಾಲಿಸುತಿತ್ತು. ಕುರಿ ಬೆನ್ನ ಮೇಲೆ ಚಿಂಟು ಇರುವಂಥ ವಿಗ್ರಹವನ್ನು ಮಹೇಶ್ ತಮ್ಮ ತೋಟದ ಮನೆಯಲ್ಲಿ ಕೆತ್ತಿಸಿ ಇಟ್ಟಿದ್ದಾರೆ. ಇವತ್ತಿನ ದಿನ ಮೂರ್ತಿಗೆ ಹೋಮ ಹವನ ಮತ್ತು ಪೂಜೆಯನ್ನು ಅವರು ಮಾಡಿಸುತ್ತಾರೆ. ಅಂದಹಾಗೆ ಈ ವಿಗ್ರಹವನ್ನು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಒಂದು ರೂಪಾಯಿ ಸಂಭಾವನೆ ಕೂಡ ತೆಗೆದುಕೊಳ್ಳದೆ ಕೆತ್ತಿದ್ದಾರೆ.
ಮೈಸೂರು: ಜೆಡಿಎಸ್ ಶಾಸಕ ಸಾರಾ ಮಹೇಶ್ ಒಬ್ಬ ಭಾವುಕ ಜೀವಿ ಅಂತ ಬಹಳಷ್ಟು ಗೊತ್ತಿರಲಾರದು. ಸಂಬಂಧಗಳ ಬಗ್ಗೆ ಅವರು ನೀಡುವ ವ್ಯಾಖ್ಯಾನ ಬಹಳ ಅರ್ಥಪೂರ್ಣವಾಗಿದೆ. ತಮ್ಮ ತೋಟದ ಮನೆಯಲ್ಲಿ ಅವರೊಂದು ಹೆಣ್ಣು ಕೋತಿಯನ್ನು ಸಾಕಿದ್ದರು ಮತ್ತು ಅದಕ್ಕೆ ಚಿಂಟು ಅಂತ ಹೆಸರಿಟ್ಟದ್ದರಂತೆ. ಆದರೆ 5 ವರ್ಷಗಳ ಹಿಂದೆ ಚಿಂಟು ಶಾಸಕರ ಕುಟುಂಬವನ್ನು ಇದೇ ದಿನದಂದು ಅಗಲಿದ್ದಾಳೆ. ಅಗ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ವಿದೇಶದಲ್ಲಿದ್ದ ಮಹೇಶ್, ಚಿಂಟು ನಿಧನದ ಸುದ್ದಿ ಕೇಳಿ ಪ್ರವಾಸ ಮೊಟಕುಗೊಳಿಸಿ ಊರಿಗೆ ಧಾವಿಸಿದ್ದರಂತೆ. ಒಬ್ಬ ಕುಟುಂಬದ ಸದಸ್ಯನಂತೆಯೇ ಚಿಂಟು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅವರು ತಮ್ಮ ತೋಟದ ಮನೆಯಲ್ಲಿ ಪ್ರತಿವರ್ಷ ನಡೆಸುತ್ತಾರೆ. ಶಾಸಕ ಬಂಧುಮಿತ್ರರು ಮತ್ತು ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಸರ್ವೆ ನಂಬರ್ ಹುಡುಕಿಸಿ ನಾನೇ ಬಹಿರಂಗಪಡಿಸ್ತೇನೆ, ಸರ್ಕಾರಕ್ಕೆ ಸಾರಾ ಮಹೇಶ್ ಸವಾಲು
Latest Videos