ಮುಡಾ ಹಗರಣ: ಸರ್ವೆ ನಂಬರ್​ ಹುಡುಕಿಸಿ ನಾನೇ ಬಹಿರಂಗಪಡಿಸ್ತೇನೆ, ಸರ್ಕಾರಕ್ಕೆ ಸಾರಾ ಮಹೇಶ್ ಸವಾಲು

ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ ನಾಯಕರ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನನ್ನ ಹೆಸರು ಹೇಗೆ ಬಂತು ಅನ್ನುವುದೇ ಗೊತ್ತಿಲ್ಲ. ನಾನು ಶಿಫಾರಸು ಪತ್ರ ಕೊಟ್ಟಿದ್ದೇ ನಿಜವಾದ್ರೆ ಬಹಿರಂಗಪಡಿಸಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.

ಮುಡಾ ಹಗರಣ: ಸರ್ವೆ ನಂಬರ್​ ಹುಡುಕಿಸಿ ನಾನೇ ಬಹಿರಂಗಪಡಿಸ್ತೇನೆ, ಸರ್ಕಾರಕ್ಕೆ ಸಾರಾ ಮಹೇಶ್ ಸವಾಲು
ಮುಡಾ ಹಗರಣ: ಸರ್ವೆ ನಂಬರ್​ ಹುಡುಕಿಸಿ ನಾನೇ ಬಹಿರಂಗಪಡಿಸ್ತೇನೆ, ಸರ್ಕಾರಕ್ಕೆ ಸಾರಾ ಮಹೇಶ್ ಸವಾಲು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2024 | 6:07 PM

ಮೈಸೂರು, ಜುಲೈ 27: ಮುಡಾಗೆ (muda) ನಾನು ಒಂದೇ ಒಂದು ಶಿಫಾರಸು ಪತ್ರ ಕೊಟ್ಟಿಲ್ಲ. ಪಟ್ಟಿಯಲ್ಲಿ ನನ್ನ ಹೆಸರು ಹೇಗೆ ಬಂತು ಅನ್ನೋದೆ ಗೊತ್ತಿಲ್ಲ. ನಾನು ಶಿಫಾರಸು ಪತ್ರ ಕೊಟ್ಟಿದ್ದೇ ನಿಜವಾದರೆ ಬಹಿರಂಗಪಡಿಸಿ ಎಂದು ಜೆಡಿಎಸ್​ (JDS) ಮಾಜಿ ಶಾಸಕ ಸಾ.ರಾ.ಮಹೇಶ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಹೇಳಿರುವ ಸರ್ವೆ ನಂಬರ್ ನಾನೇ ಹುಡುಕಿಸುತ್ತೇನೆ. ಆರ್​ಟಿಐಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದು ಬಹಿರಂಗಪಡಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ನಿನ್ನೆ ನಗರಾಭಿವೃದ್ಧಿ ಸಚಿವರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ನಾನೇ ಅಷ್ಟು ಜಮೀನು ಸ್ವಂತ ಹಣದಲ್ಲಿ ಖರೀದಿಸಿ ಪ್ರಾಧಿಕಾರಕ್ಕೆ ವಾಪಸ್ ಕೊಡುತ್ತೇನೆ. ಸುಮ್ಮನೇ ವಿಚಾರ ಡೈವರ್ಟ್ ಮಾಡಲು ಸುಳ್ಳು ಹೇಳಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಸೈಟ್​ ಪಡೆದ ಬಿಜೆಪಿ-ಜೆಡಿಎಸ್​ ನಾಯಕರ ಪಟ್ಟಿ ಬಿಡುಗಡೆ ಮಾಡಿದ ಸಚಿವ ಬೈರತಿ ಸುರೇಶ್

ಮುಡಾದಲ್ಲಿ ನಡೆದಿರುವ ಎಲ್ಲ ಅವ್ಯವಹಾರ ನನಗೆ ಗೊತ್ತು. ಯಾರು ಯಾರು ಎಷ್ಟು ಸೈಟ್​​ ಪಡೆದಿದ್ದಾರೆ ಎಲ್ಲವೂ ಗೊತ್ತಿದೆ. ಆದರೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ವಿಶ್ರಾಂತಿ ಪಡೆಯಿರಿ ಎಂದು ಜನರು ನನ್ನ ಸೋಲಿಸಿದ್ದಾರೆ. ವಿಶ್ರಾಂತಿ ಪಡೀತಿದ್ದೇನೆ, ಸುಮ್ಮನೆ ನನ್ನ ಹೆಸರು ತರ್ತೀರಾ? ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಜಿ.ಟಿ.ದೇವೇಗೌಡ ವಾಗ್ದಾಳಿ

ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದ್ದು, ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ 2 ಪತ್ರ ಬರೆದಿದ್ದೆ. ಅದನ್ನೇ ನೆಪ ಮಾಡಿಕೊಂಡು ಸೈಟ್ ಕೊಟ್ಟಿದ್ದೇವೆಂದು ಹೇಳಿದ್ದಾರೆ. ಶಿವಮೂರ್ತಿ ಎಂಬುವರ ಜಾಗವನ್ನು ಮುಡಾ ಬಳಸಿಕೊಂಡಿತ್ತು. ವೀರನಗೆರೆ ಗ್ರಾಮದ ರೈತನಿಗೂ ಇದೇ ರೀತಿಯ ಸಮಸ್ಯೆ ಆಗಿತ್ತು. ಕಾನೂನಾತ್ಮಕವಾಗಿದ್ದರೆ ಪರಿಹಾರ ಕೊಡಿ ಅಂತ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ, ಹಣ ವಾಪಾಸ್ ನೀಡುವಂತೆ SIT ಒತ್ತಡ

ಮಂತ್ರಿಗಳು ಯಾವುದನ್ನು ಕೂಡ ನೋಡದೇ ಹೇಳಿಕೆ ‌ನೀಡಿದ್ದೀರಿ. ಕಲೆಕ್ಷನ್ ಮಾಡಲು ಇಟ್ಟುಕೊಂಡವರ ಮಾತು ಕೇಳಿ ಹೇಳಿಕೆ ನೀಡಿದ್ದಾರೆ. ನಿಮ್ಮ ತಪ್ಪಿನಿಂದಾಗಿ ಈಗ ಮುಖ್ಯಮಂತ್ರಿಗಳ ತಲೆಗೆ ಬಂದಿದೆ. ಪ್ರಾಧಿಕಾರಗಳು ಸಂಬಳ ಕೊಡಲೂ ಕಾಸಿಲ್ಲದ ಸ್ಥಿತಿಗೆ ಬಂದಿವೆ. ಒಳಚರಂಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೂ ದುಡ್ಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು