Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನನ್ನು ಮದುಮಗನಾಗಿ ನೋಡುವ ತವಕದಲ್ಲಿದ್ದ ತಾಯಿಗೆ ದಿವಿನ್ ಸಿಕ್ಕಿದ್ದು ಶವವಾಗಿ!

ಮಗನನ್ನು ಮದುಮಗನಾಗಿ ನೋಡುವ ತವಕದಲ್ಲಿದ್ದ ತಾಯಿಗೆ ದಿವಿನ್ ಸಿಕ್ಕಿದ್ದು ಶವವಾಗಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 01, 2025 | 7:35 PM

ಫೆಬ್ರುವರಿ 22 ರಂದು ದಿವಿನ್ ಮದುವೆಯಾಗುವವರಿದ್ದರು ಮತ್ತು ಅದೇ ತಿಂಗಳು 15 ರಿಂದ ರಜೆ ಪಡೆದು ಊರಿಗೆ ಬರುವವರಿದ್ದರು. ಅದರೆ ಶವವಾಗಿ ಬರುತ್ತಾನೆ ಅಂತ ತಾನೆಣಿಸಿರಲಿಲ್ಲ ಎಂದು ತಾಯಿ ರೋದಿಸುತ್ತಾರೆ. 23 ಡಿಸೆಂಬರ್, ಮಂಗಳವಾರದಂದು ಅವರು ಕೊನೆಯ ಬಾರಿಗೆ ತಮ್ಮ ಮಗನೊಂದಿಗೆ ಮಾತಾಡಿದ್ದರಂತೆ. ಅವರ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ ಮತ್ತು ಈಗ ಇದ್ದೊಬ್ಬ ಮಗ ಹುತಾತ್ಮ.

ಮಡಿಕೇರಿ: ಡಿಸೆಂಬರ್ 29ರಂದು ಕಾಶ್ಮೀರದ ಉಧಂಪುರ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯೋಧ ದಿವಿನ್ ಅವರ ಅಮ್ಮನಿಗೆ ಅತ್ತು ಅತ್ತು ಕಣ್ಣೀರು ಬತ್ತಿ ಹೋಗಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡು ಅವರು ಅಕ್ಷರಶಃ ಕಂಗಾಲಾಗಿದ್ದಾರೆ. ಡಿಸೆಂಬರ್ 24ರಂದು ಜಮ್ಮುವಿನ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ ಅಪಘಾತಕ್ಕೀಡಾದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಸೋಮವಾರಪೇಟೆ ತಾಲ್ಲೂಕಿನ ಮಾಲಂಬಿ ಗ್ರಾಮದ ದಿವಿನ್ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ಉಧಂಪುರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು. ಅವರ ಹುಟ್ಟೂರಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ; ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಮಾಹಿತಿ