ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್‌ವೆಲ್
Glenn Maxwell catch: ಬಿಗ್ ಬ್ಯಾಷ್ ಲೀಗ್ (ಬಿಬಿಎಲ್)ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅದ್ಭುತವಾದ ಒಂದು ಕೈ ಕ್ಯಾಚ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಹಿಡಿದ ಕ್ಯಾಚ್ ಎಲ್ಲರನ್ನು ನಿಬ್ಬೇರಗಾಗಿಸಿದೆ.ಬಿಬಿಎಲ್ನ ಈ ಸೀಸನ್ ಇಲ್ಲಿಯವರೆಗೆ ಮ್ಯಾಕ್ಸ್‌ವೆಲ್‌ಗೆ ವಿಶೇಷವಾದದ್ದೇನೂ ಆಗಿರಲಿಲ್ಲ. ಈ ಪಂದ್ಯಕ್ಕೂ ಮುನ್ನ ಆಡಿದ 3 ಪಂದ್ಯಗಳಲ್ಲಿ ಕೇವಲ 53 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಸ್ಫೋಟಕ ಬ್ಯಾಟಿಂಗ್ ಹೊರತಾಗಿ ಚಾಣಾಕ್ಷ ಫಿಲ್ಡಿಂಗ್ಗೂ ಹೆಸರುವಾಸಿಯಾಗಿದ್ದಾರೆ. ಅವರು ಇದುವರೆಗೆ ಕ್ರಿಕೆಟ್ ಮೈದಾನದಲ್ಲಿ ಹಲವು ಅದ್ಭುತ ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇದೀಗ ಬಿಗ್ ಬ್ಯಾಷ್ ಲೀಗ್ ಇಂತಹದೊಂದು ಕ್ಯಾಚ್ ಹಿಡಿದಿದ್ದು ಎಲ್ಲರ ಗಮನ ಸೆಳೆದಿದೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ ಈ ಕ್ಯಾಚ್ ತೆಗೆದುಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮ್ಯಾಕ್ಸ್‌ವೆಲ್ ಅಚ್ಚರಿಯ ಕ್ಯಾಚ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ದೊಡ್ಡ ಕಾರಣ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಫೀಲ್ಡಿಂಗ್. ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯದಲ್ಲಿ ಒಟ್ಟು 4 ಕ್ಯಾಚ್‌ಗಳನ್ನು ಹಿಡಿದರು. ಈ ಅವಧಿಯಲ್ಲಿ, ಅವರ ಕೊನೆಯ ಕ್ಯಾಚ್ ಅತ್ಯಂತ ಅದ್ಭುತವಾಗಿತ್ತು. ವಾಸ್ತವವಾಗಿ, ಬ್ರಿಸ್ಬೇನ್ ಹೀಟ್‌ನ ಇನ್ನಿಂಗ್ಸ್‌ನ 17 ನೇ ಓವರ್ ಅನ್ನು ಸ್ಟಾರ್ಸ್ ಬೌಲರ್ ಡೇನಿಯಲ್ ಲಾರೆನ್ಸ್ ಬೌಲ್ ಮಾಡಿದರು. ಈ ಓವರ್‌ನ ಮೊದಲ ಎಸೆತದಲ್ಲಿ, ಬ್ಯಾಟ್ಸ್‌ಮನ್ ವಿಲ್ ಪ್ರೆಸ್ಟೀಜ್ ಲಾಂಗ್ ಆನ್ ಕಡೆಗೆ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು.
ವಿಲ್ ಪ್ರೆಸ್ಟೀಜ್ ಅವರ ಆ ಶಾಟ್ ಅನ್ನು ನೋಡಿದವರಿಗೆ ಅದು ಸಿಕ್ಸರ್ ಆಗುವುದು ಖಚಿತ ಎಂದು ತೋರುತ್ತಿತ್ತು. ಆದರೆ ಅಲ್ಲಿಯೇ ನಿಂತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲಕ್ಕೆ ಜಿಗಿದು ಒಂದೇ ಕೈಯಿಂದ ಚೆಂಡನ್ನು ಹಿಡಿದರು. ಆದರೆ ತಾವು ಬೌಂಡರಿ ಲೈನ್ ದಾಟುವ ಸಂದರ್ಭ ಬಂದಾಗ ಚೆಂಡನ್ನು ಮೇಲಕ್ಕೆ ಎಸೆದು ಆ ನಂತರ ಬೌಂಡರಿ ಲೈನ್ ಒಳಗೆ ಬಂದು ಕ್ಯಾಚ್ ಪೂರ್ಣಗೊಳಿಸಿದರು.
ಬಿಬಿಎಲ್ನಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ
ಬಿಬಿಎಲ್ನ ಈ ಸೀಸನ್ ಇಲ್ಲಿಯವರೆಗೆ ಮ್ಯಾಕ್ಸ್‌ವೆಲ್‌ಗೆ ವಿಶೇಷವಾದದ್ದೇನೂ ಆಗಿರಲಿಲ್ಲ. ಈ ಪಂದ್ಯಕ್ಕೂ ಮುನ್ನ ಆಡಿದ 3 ಪಂದ್ಯಗಳಲ್ಲಿ ಕೇವಲ 53 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅದೇ ವೇಳೆ ಬೌಲಿಂಗ್‌ನಲ್ಲೂ ಕೇವಲ ಒಂದು ವಿಕೆಟ್ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ