ಮುಸ್ಲಿಂ ವೋಟುಗಳೆಲ್ಲ ವನ್ ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ನಾನು ಹೇಳಿದ್ದು: ಜಮೀರ್ ಅಹ್ಮದ್ ಖಾನ್, ಸಚಿವ
ವಿಧಾನ ಪರಿಷತ್ ಸದಸ್ಯ ಸಿಟಿ ರವಿಯನ್ನು ತರಾಟೆಗೆ ತೆಗೆದುಕೊಂಡ ಜಮೀರ್ ಅಹ್ಮದ್, ತನ್ನನ್ನು ಹಿಂದೂ ವಿರೋಧಿ ಅಂತ ಅವರು ಹೇಳುತ್ತಾರೆ. ಚಾಮರಾಜಪೇಟೆಯಲ್ಲಿ ಮುಸಲ್ಮಾನರಿಗಿಂತ ಹೆಚ್ಚು ಹಿಂದೂ ವೋಟುಗಳು ತನಗೆ ಸಿಕ್ಕಿವೆ, ರವಿ ಇಂಥ ಹೇಳಿಕೆಗಳನ್ನು ನೀಡಿಯೇ ತಮ್ಮ ಕ್ಷೇತ್ರದಲ್ಲಿ ಸೋತಿದ್ದು ಎಂದು ಸಚಿವ ಹೇಳಿದರು.
ಬೀದರ್: ಆವೇಶದಲ್ಲಿ ಏನೋ ಒಂದು ಹೇಳೋದು, ಅದರಿಂದ ವಿವಾದ ಸೃಷ್ಟಿಯಾದರೆ ತಿಪ್ಪೇ ಸಾರಿಸುವ ಕೆಲಸ ಮಾಡೋದು. ನಮ್ಮ ಸೋ ಕಾಲ್ಡ್ ನಾಯಕರ ಜಾಯಮಾನವೇ ಅಂಥದ್ದು. ವಿವಾದಾತ್ಮಕ ಹೇಳಿಕೆ ನಿಡೋದ್ರಲ್ಲಿ ಎತ್ತಿದ ಕೈ ಅನಿಸಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ನಿನ್ನೆ ಬೀದರ್ ನಲ್ಲಿ ಸಾಗರ್ ಖಂಡ್ರೆ (Sagar Khandre) ಮುಸಲ್ಮಾನರ ವೋಟುಗಳಿಂದಲೇ (Muslim votes) ಗೆದ್ದಿದ್ದು, ಅವರ ತಂದೆ ಈಶ್ವರ್ ಖಂಡ್ರೆ ಸಮುದಾಯದವರ ಮುಂದೆ ತಲೆಬಾಗಿ ಅವರ ಕೆಲಸ ಮಾಡಬೇಕು ಅಂದಿದ್ದರು.ಇವತ್ತು ಇದೇ ಬೀದರ್ ನಲ್ಲಿ ಅವರು ನಾನು ಹಾಗೆ ಹೇಳಿಲ್ಲ, ನಾನು ಹೇಳಿದ್ದೇ ಬೇರೆ ಎಂದರು. ತಾನು ಮುಸ್ಲಿಂ ಸಮುದಾಯದ ವೋಟುಗಳು ಒನ್ ಸೈಡೆಡ್ ಆಗಿವೆ, ಅದರರ್ಥ ಸಾಗರ್ಗೆ ಹಿಂದೂಗಳ ಸಿಕ್ಕಿಲ್ಲ ಅಂತಲ್ಲ, ಹೆಚ್ಚಿನ ಮುಸಲ್ಮಾನರು ಸಾಗರ್ ಗೆ ವೋಟು ಹಾಕಿರುವುದರಿಂದ ಅವರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಅಂತ ತಾನು ಹೇಳಿರಿವುದಾಗಿ ಜಮೀರ್ ಅಹ್ಮದ್ ಹೇಳಿದರು. ಸಾಗರ್ ಗೆ ಎರಡು ಲಕ್ಷ ಮುಸಲ್ಮಾನರ ವೋಟು ಬಿದ್ದಿವೆ, ಅಷ್ಟು ವೋಟುಗಳಿಂದ ಗೆಲ್ಲೋದು ಸಾಧ್ಯವೇ? ಅವರು ಒಟ್ಟು ಆರು ಲಕ್ಷ ವೋಟು ಪಡೆದಿದ್ದು ಎಂದು ಸಚಿವ ಜಮೀರ್ ಹೇಳಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

