ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾದ ನೂತನ ಸಂಸತ್ ಭವನ, ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

ಲೋಕತಂತ್ರ ಅಥವಾ ಪ್ರಜಾಪ್ರಭುತ್ವದ ಸೊಬಗೇ ಅದು. ಚುನಾವಣಾ ಪ್ರಚಾರದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾರೆ. ಆದರೆ, ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಳ್ಳುವ ವಿಧಾನಸೌಧ ಮತ್ತು ಸಂಸತ್ ಭವನದಲ್ಲಿ ಚುನಾಯಿತ ಸದಸ್ಯರು ಜನ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡುತ್ತಾರೆ.

ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾದ ನೂತನ ಸಂಸತ್ ಭವನ, ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
|

Updated on: Jun 26, 2024 | 4:05 PM

ನವದೆಹಲಿ: ನೂತನ ಸಂಸತ್ ಭವನವು ಇಂದು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ ಭವನದಲ್ಲಿ ಕೈ ಕುಲುಕಿದರಲ್ಲದೆ ಜೊತೆಯಾಗಿ ಸ್ಪೀಕರ್ ಪೀಠದವರೆಗೆ ನಡೆದು ಹೋದರು. ನಿರೀಕ್ಷೆಯಂತೆ ಲೋಕಸಭಾಧ್ಯಕ್ಷರಾಗಿ ಹಿಂದಿನ ಸ್ಪೀಕರ್ ಓಂ ಬಿರ್ಲಾ (Om Birla) ಅಯ್ಕೆಯಾದ ಬಳಿಕ ಪ್ರಧಾನಿ ಮೋದಿ ಬಿರ್ಲಾ ಅವರು ಕುಳಿತಿದ್ದ ಆಸನದ ಕಡೆ ನಡೆದು ಹೋಗಿ ಅವರ ಕೈ ಕುಲುಕಿ ಅಭಿನಂದಿಸಿದರು. ಅವರ ಎಡಭಾಗದಿಂದ ರಾಹುಲ್ ಗಾಂಧಿ ಸಹ ಬಿರ್ಲಾ ಅವರ ಬಳಿ ಹೋದಾಗ ಬನ್ನಿ ಎಂದು ಅವರನ್ನು ಪ್ರಧಾನಿ ಮೋದಿ ಕರೆಯುತ್ತಾರೆ. ಸ್ಪೀಕರ್ ಬಿರ್ಲಾ ಅವರ ಕೈಕುಲುಕಿ ಅಭಿನಂದಿಸಿದ ಬಳಿಕ ಕಾಂಗ್ರೆಸ್ ನಾಯಕ ಪ್ರಧಾನಿ ಮೋದಿಯವರ ಜೊತೆ ಸಹ ಹ್ಯಾಂಡ್ ಶೇಕ್ ಮಾಡುತ್ತಾರೆ. ಅವರೊಂದಿಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಹ ಇರುತ್ತಾರೆ. ನಂತರ ಆ ನಾಲ್ವರು ಸಭಾಧ್ಯಕ್ಷರ ಪೀಠದ ಕಡೆ ನಡೆದು ಹೋಗುತ್ತಾರೆ. ಮುಂದೆ ಸ್ಪೀಕರ್ ಬಿರ್ಲಾ, ಅವರ ಹಿಂದೆ ಪ್ರಧಾನಿ ಮೋದಿ, ಅವರ ಹಿಂದೆ ರಾಹುಲ್ ಗಾಂಧಿ ಮತ್ತು ರಾಹುಲ್ ಹಿಂದೆ ಕಿರಣ್. ಬಿರ್ಲಾರನ್ನು ಸ್ಪೀಕರ್ ಸ್ಥಾನದಲ್ಲಿ ಕುಳ್ಳರಿಸಿದ ಬಳಿಕ ಅವರನ್ನು ಮತ್ತೊಮ್ಮೆ ಅಭಿನಂದಿಸಿದ ಉಳಿದ ಮೂವರು ತಮ್ಮ ಸ್ಥಾನಗಳಿಗೆ ಹಿಂತಿರುಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿರೋಧಪಕ್ಷಗಳು ಒಂದು ದಶಕದಿಂದ ಭ್ರಷ್ಟಾಚಾರ ಹುಡುಕುವ ಪ್ರಯತ್ನ ಮಾಡುತ್ತಿವೆ: ಬಸನಗೌಡ ಯತ್ನಾಳ್

Follow us