ನಮ್ಮನ್ನು ಅವಮಾನಿಸಿರುವ ಹರಿಪ್ರಸಾದ್ ಕ್ಷಮೆಯಾಚಿಸದಿದ್ದರೆ ಹೋರಾಟ: ಅಧ್ಯಕ್ಷೆ, ಕಿನ್ನರ್ ಸಮಾಜ
ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತಾಡುವಾಗ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್, ಬಿಜೆಪಿ ನಾಯಕರಿಗೆ ಎರಡು ವರ್ಷ ಕಳೆದರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷನನ್ನು ಆಯ್ಕೆ ಮಾಡೋದು ಸಾಧ್ಯವಾಗಿಲ್ಲ, ಈ ಬಾರಿ ಮಹಿಳಾ ಅಧ್ಯಕ್ಷನನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ, ಮಹಿಳೆ ಬದಲು ಅರ್ಧನಾರೀಶ್ವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಸಂತೋಷ ಅಂತ ಹೇಳಿದ್ದರು.
ಬೆಂಗಳೂರು, ಜುಲೈ 12: ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ (BK Hari Prasad, MLC) ತಮ್ಮ ಬಗ್ಗೆ ಹಗುರವಾಗಿ ಮಾತಾಡಿದ್ದು ಮಂಗಳಮುಖಿ ಸಮಾಜದವರನ್ನು ರೊಚ್ಚಿಗೆಬ್ಬಿಸಿದೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕಿನ್ನರ್ ಸಮಾಜದ ಅಧ್ಯಕ್ಷೆ, ಹರಿಪ್ರಾಸಾದ್ ಅವಮಾನಕರ ರೀತಿಯಲ್ಲಿ ಮಾತಾಡಿರುವುದು ಅತ್ಯಂತ ಖಂಡನೀಯ, ಮಂಗಳಮುಖಿಯರು ಹರಿಪ್ರಸಾದ್ ಹುಟ್ಟುವ ಮೊದಲು ಕೂಡ ಇದ್ದರು ಮತ್ತು ಮುಂದೆಯೂ ಇರುತ್ತಾರೆ, ತೃತೀಯ ಲಿಂಗಿಗಳಿಗೆ ನ್ಯಾಯಾಲಯ ವಿಶೇಷ ಸ್ಥಾನಮಾನ ಕಲ್ಪಿಸಿದೆ, ನಮ್ಮ ಸಮಾಜದ ಆಡಳಿತವನ್ನು ಹರಿಪ್ರಸಾದ್ರಂಥ ರಾಜಕಾರಣಿಗಳಿಗಿಂತ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರಿಗೆ ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು ನೇಮಕ ಮಾಡಲಾಗಲಿಲ್ಲ, ಹರಿಪ್ರಸಾದ್ ತಮ್ಮ ನಾಯಕಿ ಸೋನಿಯ ಗಾಂಧಿಗೆ ಹೇಳಿ ಆ ಕೆಲಸ ಮಾಡಿಸಲಿ, ರಾಜ್ಯಸಭಾ ಸದಸ್ಯರಾಗಿದ್ದ ಅವರು ಮಂಗಳಮುಖಿಯರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಅಕ್ಷಮ್ಯ, ಕೂಡಲೇ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ ಎಂದು ಅವರು ಹೇಳಿದರು.
ಇದನ್ನೂ ಓದಿ: ಅನುದಾನ ಸಿಕ್ಕಿಲ್ಲ ಅಂತೇನೂ ಇಲ್ಲ ಆದರೆ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದೆ: ಬಿಕೆ ಹರಿಪ್ರಸಾದ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

