ಕೈಹಿಡಿದು ಕರೆದೊಯ್ಯುವವರ ಜೊತೆ ಹೋಗುತ್ತೇನೆ ಅನ್ನುವಷ್ಟು ಮುಗ್ಧರೇ ಮಾಜಿ ಸಚಿವ ಮಾಧುಸ್ವಾಮಿ?
ಕಾಂಗ್ರೆಸ್ ಪಕ್ಷ ಸೇರೋದಿಲ್ಲ ಅಂತಲೂ ಖಡಾಖಂಡಿತವಾಗಿ ಮಾಧುಸ್ವಾಮಿ ಹೇಳಲ್ಲ. ಸಂತೆಯಲ್ಲಿ ತಪ್ಪಿಸಿಕೊಂಡ ವ್ಯಕ್ತಿ ನಾನು, ಯಾರು ಕೈಹಿಡಿದು ಬಸ್ ಹತ್ತಿಸ್ತಾರೋ ಅವರ ಹಿಂದೆ ಹೋಗ್ತೀನಿ ಅಂತ ಹೇಳುತ್ತಾ ತಮ್ಮ ಅಮಾಯಕತೆಯನ್ನು ಪ್ರದರ್ಶಿಸುತ್ತಾರೆ. ಮಾಜಿ ಸಚಿವರು ಜನರನ್ನು ಪೆದ್ದರು ಅಂದುಕೊಂಡಿರುವಂತಿದೆ, ಯಾರೋ ಕೈ ಹಿಡಿದು ಕರೆದೊಯ್ಯುವಲ್ಲಿಗೆ ಹೋಗುವಷ್ಟು ಮುಗ್ಧರೇನೂ ಅವರಲ್ಲ, ಹಿಂದೆ ಕಾನೂನು ಸಚಿವರಾಗಿದ್ದವರು ಅಷ್ಟು ಅಮಾಯಕರೇ?
ತುಮಕೂರು, ಜುಲೈ 12: ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜೆಸಿ ಮಾಧುಸ್ವಾಮಿ (JC Madhu Swamy) ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದು ಚರ್ಚೆಗೆ ಗ್ರಾಸವಾಗಿದ್ದರೂ ತಮ್ಮ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ತಮ್ಮ ಸಮಾಜದ ಹಾಸ್ಟೆಲ್ವೊಂದರ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಅವರನ್ನು ಭೇಟಿಯಾಗಿದ್ದು, ರಾಜಕೀಯದ ಚರ್ಚೆ ನಡೆದಿಲ್ಲ, ಅವರು ತನ್ನನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಮತ್ತು ತಾನು ಅದರ ಬಗ್ಗೆ ಪ್ರಸ್ತಾಪವೂ ಮಾಡಿಲ್ಲ ಎಂದು ಮಾಧುಸ್ವಾಮಿ ಹೇಳಿದರು. ಮುಚ್ಚುಮರೆ ಮಾಡಿ ಮಾತಾಡುವ ಜಾಯಮಾನ ತನ್ನದಲ್ಲ, ಅಷ್ಟಾಗಿಯೂ ಸಿದ್ದರಾಮಯ್ಯರನ್ನು ಒಂದು ಪಕ್ಷದ ಮುಖಂಡರನ್ನಾಗಿ ನೋಡೋದು ಯಾಕೆ? ಅವರು ಈ ರಾಜ್ಯದ ಮುಖ್ಯಮಂತ್ರಿ ಎಂದು ಮಾಧುಸ್ವಾಮಿ ಹೇಳಿದರು.
ಇದನ್ನೂ ಓದಿ: ಮುದ್ದಹನುಮೇಗೌಡರು ಆತುರದ ನಿರ್ಣಯ ತೆಗೆದುಕೊಂಡಿದ್ದಾರೆ, ತಾಳ್ಮೆ ಪ್ರದರ್ಶಿಸಬೇಕಿತ್ತು: ಜೆಸಿ ಮಾಧುಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

