ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗಿಲ್ಲ ಆಹ್ವಾನ; ಮಧು ಬಂಗಾರಪ್ಪಗೆ ಅಸಮಾಧಾನ
ಮುಂದುವರಿದು ಮಾತಾಡಿದ ಮಧು ಬಂಗಾರಪ್ಪ, ಬಿಎಸ್ ಯಡಿಯೂರಪ್ಪ ಕುಟುಂಬದ ನಾಯಕರು ಜಿಲ್ಲಾಸ್ಪತ್ರೆಯನ್ನು ಶಿಕಾರಿಪುರಕ್ಕೆ ವರ್ಗಾಯಿಸಿಕೊಂಡಿದ್ದು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಮೊದಲು ಒತ್ತುವರಿ ಮಾಡಿಕೊಂಡು ಅಮೇಲೆ ಹಿಂತಿರುಗಿಸಿದ್ದನ್ನು ಹೇಳಿದರು. ಹೊಳೆಬಾಗಿಲು-ಕಳಸವಳ್ಳಿ ಸೇತುವೆ ಅಂತಲೂ ಕರೆಸಿಕೊಳ್ಳುವ ಸಿಗದೂರು ಬ್ರಿಡ್ಜ್ ಅನ್ನು ಜುಲೈ 14 ರಂದು ಕೇಂದ್ರ ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ.
ಶಿವಮೊಗ್ಗ, ಜುಲೈ 12: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸದಿರುವುದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರನ್ನು ರೊಚ್ಚಿಗೆಬ್ಬಿಸಿದೆ. ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ, ಸೇತುವೆ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ, ಅದರ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ಬಂದಿರುವುದರಿಂದ ರಾಜ್ಯದ ಮುಖ್ಯಮಂತ್ರಿಯವರನ್ನು ಯಾಕೆ ಆಹ್ವಾನಿಸಬೇಕು ಅಂತ ಅಂದುಕೊಂಡಿರಬಹುದು, ಮುಖ್ಯಮಂತ್ರಿಯನ್ನೇ ಆಹ್ವಾನಿಸದವರು ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ತನ್ನನ್ನು ಆಹ್ವಾನಿಸಿಯಾರೇ? ಎಂದು ಮಧು ಬಂಗಾರಪ್ಪ ಪರೋಕ್ಷವಾಗಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮೇಲೆ ದಾಳಿ ನಡೆಸಿದರು. ಸೇತುವೆ ಉದ್ಘಾಟನೆ ನಂತರ ಬಹಳಷ್ಟು ಸಂಗತಿಗಳನ್ನು ಮಾತಾಡುವುದಿದೆ ಎಂದು ಸಚಿವ ಹೇಳಿದರು.
ಇದನ್ನೂ ಓದಿ: SSLC, ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ಗೆ ಅವಕಾಶ ನೀಡುವ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

