ಅನ್ನಭಾಗ್ಯ ಯೋಜನೆ ಜಾರಿಮಾಡಿದ್ದು ಯಾಕೆ ಅಂತ ಮತ್ತೊಮ್ಮೆ ವಿವರಿಸಿದ ಸಿಎಂ ಸಿದ್ದರಾಮಯ್ಯ
ಅನ್ನಭಾಗ್ಯ ಯೋಜನೆ 2013 ರಲ್ಲಿ ಜಾರಿಮಾಡಿದಾಗ ಒಬ್ಬ ಬಿಜೆಪಿ ಶಾಸಕ ಇದೇ ಪ್ರಶ್ನೆಯನ್ನು ಕೇಳಿದ್ದರು ಮತ್ತು ಯೋಜನೆಯಿಂದ ಜನ ಸೋಂಬೇರಿಗಳಾಗಿರುವುದರಿಂದ ಕೂಲಿ ಮಾಡಲು ಜನ ಸಿಗುತ್ತಿಲ್ಲ ಎಂದಿದ್ದರು. ಅದಕ್ಕೆ ತಾನು ಅವರಿಗೆ, ಜನ ಸೋಂಬೇರಿಗಳಾದರೇನಂತೆ? ನೀವು ಹೋಗಿ ಕೆಲಸ ಮಾಡಿ ಎಂದಿದ್ದೆ ಅಂತ ಸಿಎಂ ಸಿದ್ದರಾಮಯ್ಯ ನಗುತ್ತಾ ಹೇಳಿದರು.
ಬೆಂಗಳೂರು, ಜುಲೈ 12: ನಗರದಲ್ಲಿಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, (CM Siddaramaiah) ತಾನು 2013 ರಿಂದ 2018 ಮತ್ತು 2023ರಿಂದ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶೋಷಿತ ವರ್ಗಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಿರುವುದಾಗಿ ಹೇಳಿದರು. ಅದರೆ ಕೆಲವರು ತಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜನ ಸೋಂಬೇರಿಗಳಾಗುತ್ತಿದ್ದಾರೆ ಅನ್ನುತ್ತಾರೆ, ರಾಜಕೀಯಕ್ಕೆ ಹಾಗೆ ಹೇಳುತ್ತಾರೋ ಅಥವಾ ತನ್ನೊಂದಿಗಿನ ವೈರತ್ವಕ್ಕೆ ಹಾಗೆ ಮಾತಾಡುತ್ತಾರೋ ಗೊತ್ತಿಲ್ಲ. ಅಸಲು ವಿಷಯವೆಂದರೆ ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಮಾರಿಗಳಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ನಂತರ ಮುಖ್ಯಮಂತ್ರಿ ತಾನು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದು ಯಾಕೆ ಅನ್ನೋದನ್ನು ತಮ್ಮ ಬದುಕಿನ ಅನುಭವಗಳ ಮೂಲಕ ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆ ಕೇಸ್ಗೆ ತಡೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
