IND vs ENG: ಇಲ್ಲದ ರನ್ ಕದಿಯಲು ಹೋಗಿ ರನೌಟ್ಗೆ ಬಲಿಯಾದ ರಿಷಭ್ ಪಂತ್; ವಿಡಿಯೋ ನೋಡಿ
Rishabh Pant Run-Out:ಲಾರ್ಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ಗಾಯದ ನಡುವೆಯೂ 74 ರನ್ ಬಾರಿಸಿದರು. ಅಲ್ಲದೆ ಕೆ.ಎಲ್. ರಾಹುಲ್ ಜೊತೆಗಿನ ಅವರ ಅದ್ಭುತ ಜೊತೆಯಾಟ ಭಾರತಕ್ಕೆ ಉತ್ತಮ ಮೊತ್ತವನ್ನು ತಂದುಕೊಟ್ಟಿತು. ಆದರೆ, ನಿರ್ಣಾಯಕ ಸಮಯದಲ್ಲಿ ರನ್ ಕದಿಯುವ ಪ್ರಯತ್ನದಲ್ಲಿ ಬೆನ್ ಸ್ಟೋಕ್ಸ್ ಅವರ ಅದ್ಭುತ ಥ್ರೋಗೆ ಬಲಿಯಾಗಿ ರನ್ ಔಟ್ ಆದರು. ಇದು ಇಂಗ್ಲೆಂಡ್‌ಗೆ ಉಚಿತ ವಿಕೆಟ್ ಆಯಿತು.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕೈ ಬೆರಳಿನ ಗಾಯದ ನಡುವೆಯೂ ರಿಷಭ್ ಪಂತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಅರ್ಧಶತಕ ಬಾರಿಸಿದರು. ಆದರೆ ನಿರ್ಣಾಯಕ ಸಮಯದಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ಗೆ ಬಲಿಯಾದರು. ಇಂಗ್ಲಿಷ್ ನಾಯಕ ಬೆನ್ ಸ್ಟೋಕ್ಸ್ ಅವರ ಅದ್ಭುತ ಫೀಲ್ಡಿಂಗ್ ಮತ್ತು ಅತ್ಯುತ್ತಮ ಥ್ರೋನಿಂದ ಪಂತ್ ಪೆವಿಲಿಯನ್ ದಾರಿ ಹಿಡಿಯಬೇಕಾಯಿತು. ಈ ಪಂದ್ಯದಲ್ಲಿ 74 ರನ್ ಬಾರಿಸಿದ ರಿಷಭ್ ಪಂತ್, ಕೆಎಲ್ ರಾಹುಲ್ ಜೊತೆಗೆ ಶತಕದ ಜೊತೆಯಾಟವನ್ನಾಡಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು.
ಇಂಗ್ಲೆಂಡ್‌ಗೆ ಉಚಿತ ವಿಕೆಟ್
ಲಾರ್ಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮೊದಲ ಸೆಷನ್ನಲ್ಲಿ ಭಾರತ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ರಾಹುಲ್ ಹಾಗೂ ರಿಷಭ್ ಪಂತ್ ಆಂಗ್ಲ ಬೌಲರ್ಗಳನ್ನು ವಿಕೆಟ್ಗಾಗಿ ಹವಣಿಸುವಂತೆ ಮಾಡಿದರು. ಆದರೆ ಊಟಕ್ಕೆ ಕೆಲವೇ ಸೆಕೆಂಡುಗಳು ಬಾಕಿ ಇರುವಾಗ ರಿಷಭ್ ಪಂತ್, ಶೋಯೆಬ್ ಬಶೀರ್ ಅವರ ಬೌಲಿಂಗ್‌ನಲ್ಲಿ ರನೌಟ್ ಆದರು. ವಾಸ್ತವವಾಗಿ ಬಶೀರ್ ಅವರ ಚೆಂಡನ್ನು ಸಿಲ್ಲಿ ಮಿಡ್ ಆನ್ ಕಡೆಗೆ ಆಡಿದರು. ಇತ್ತ ರಾಹುಲ್ ರನ್ ತೆಗೆದುಕೊಳ್ಳಲು ಓಡಿದರು ಆದರೆ ರಿಷಭ್ ಪಂತ್ ಸ್ವಲ್ಪ ತಡವಾಗಿ ಓಡಲು ಆರಂಭಿಸಿದರು. ಈ ಮಧ್ಯೆ, ಬೆನ್ ಸ್ಟೋಕ್ಸ್ ಕೂಡ ಚೆಂಡನ್ನು ಹಿಡಿದು ನಾನ್-ಸ್ಟ್ರೈಕರ್ ಎಂಡ್ ಕಡೆಗೆ ಎಸೆದರು. ಪಂತ್ ಸಮಯಕ್ಕೆ ಕ್ರೀಸ್ ತಲುಪಲು ಸಾಧ್ಯವಾಗದೆ ರನ್ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ