ಮುದ್ದಹನುಮೇಗೌಡರು ಆತುರದ ನಿರ್ಣಯ ತೆಗೆದುಕೊಂಡಿದ್ದಾರೆ, ತಾಳ್ಮೆ ಪ್ರದರ್ಶಿಸಬೇಕಿತ್ತು: ಜೆಸಿ ಮಾಧುಸ್ವಾಮಿ
ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಮತ್ತು ಅದು ಪ್ರಸ್ತುತವೂ ಅಲ್ಲ, ಯಾಕೆಂದರೆ ಇಲ್ಲಿ ಯಾರೇನೇ ಹೇಳಿದರೂ ಅದು ಗಣನೆಗೆ ಬರಲ್ಲ, ಅಭ್ಯರ್ಥಿಗಳ ಆಯ್ಕೆ ಮೇಲೆ ದೆಹಲಿಯಲ್ಲಿ ನಡೆಯುತ್ತದೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಧುಸ್ವಾಮಿ ಹೇಳಿದರು.
ತುಮಕೂರು: ಬಿಜೆಪಿಯ ಹಿರಿಯ ನಾಯಕ ಎಸ್ ಪಿ ಮುದ್ದಹನುಮೇಗೌಡ (SP Muddahanumegowda) ಅವರು ಕಾಂಗ್ರೆಸ್ ಪಕ್ಷ ಸೇರಿದ್ದಕ್ಕೆ ಮಾಜಿ ಶಾಸಕ ಜೆಸಿ ಮಾಧುಸ್ವಾಮಿ (JC Madhu Swamy) ವಿಷಾದ ವ್ಯಕ್ತಪಡಿಸಿದ್ದಾರೆ. ತುಮಕೂರುನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಧುಸ್ವಾಮಿ, ರಾಜಕಾರಣದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ತಾಳ್ಮೆ (patience) ಬಹಳ ಮುಖ್ಯ ಅಂತ ಬಹಳ ದಿನಗಳಿಂದ ತಾನು ಹೇಳುತ್ತಿದ್ದರೂ ಮುದ್ದಹನುಮೇಗೌಡ ಆತುರಪಟ್ಟಿದ್ದಾರೆ. ಯಾಕೆ ಈ ತೀರ್ಮಾನ ತೆಗೆದುಕೊಂಡರೋ ಗೊತ್ತಿಲ್ಲ ಎಂದು ಮಾಧುಸ್ವಾಮಿ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಮತ್ತು ಅದು ಪ್ರಸ್ತುತವೂ ಅಲ್ಲ, ಯಾಕೆಂದರೆ ಇಲ್ಲಿ ಯಾರೇನೇ ಹೇಳಿದರೂ ಅದು ಗಣನೆಗೆ ಬರಲ್ಲ, ಅಭ್ಯರ್ಥಿಗಳ ಆಯ್ಕೆ ಮೇಲೆ ದೆಹಲಿಯಲ್ಲಿ ನಡೆಯುತ್ತದೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ, ರಾಜ್ಯಸಭೆಗೆ ಅವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ನಾವು ನೋಡಿದ್ದೇವೆ; ಯಾರಿಗೆ ಎಲ್ಲಿಯ ಟಿಕೆಟ್ ಸಿಗುತ್ತೆ ಅಂತ ಯಾರಿಗೂ ಗೊತ್ತಿಲ್ಲ, ಹಾಗಾಗಿ ಮುದ್ದಹನುಮೇಗೌಡ ಅವರು ಕಾಯಬೇಕಿತ್ತು ಎಂದು ಮಾಧುಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ