ವಿವಾಹ ವಿಚ್ಛೇದನಕ್ಕಾಗಿ ಸವದತ್ತಿ ನ್ಯಾಯಾಲಯಕ್ಕೆ ಬಂದ ವ್ಯಕ್ತಿಯಿಂದ ಪತ್ನಿ ಮತ್ತು ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಐಶ್ವರ್ಯ ದೊಡ್ಡಮ್ಮ ಮಾಧ್ಯಮಗಳೊಂದಿಗೆ ಮಾತಾಡಿದ್ದು ಐಶ್ವರ್ಯ ತಲೆಗೆ ಮಚ್ಚಿನೇಟು ಬಿದ್ದಿದೆ ಮತ್ತು ಆಕೆಯ ಕೈ ಮೇಲೂ ಗಣಾಚಾರಿ ಹಲ್ಲೆ ಮಾಡಿದ್ದಾನೆ ಅಂತ ಹೇಳುತ್ತಾರೆ. ಐಶ್ವರ್ಯ ಬಲಗೈಯ ಬೆರಳುಗಳು ಕಟ್ ಆಗಿವೆ ಎಂದು ಅವರು ಹೇಳುತ್ತಾರೆ. ಅನುಸೂಯ ಮತ್ತು ಐಶ್ವರ್ಯ ದೇಹಸ್ಥಿತಿ ಹೇಗಿದೆ, ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಏನು ಹೇಳಿದ್ದಾರೆ ಅಂತ ಗೊತ್ತಿಲ್ಲ ಎಂದು ಐಶ್ವರ್ಯ ದೊಡ್ಡಮ್ಮ ಹೇಳುತ್ತಾರೆ.
ಹುಬ್ಬಳ್ಳಿ, ಜುಲೈ 22: ವ್ಯಕ್ತಿಯೊಬ್ಬ ಮಚ್ಚನ್ನು ತಾನು ಉಟ್ಟ ಬಟ್ಟೆಯಲ್ಲಿ ಬಚ್ಚಿಟ್ಟಕೊಂಡು ನ್ಯಾಯಾಲಯವೊಂದಕ್ಕೆ ಬರುತ್ತಾನೆಂದರೆ ಪೊಲೀಸರ ಕರ್ತವ್ಯನಿಷ್ಠೆ, ಕರ್ತವ್ಯಪ್ರಜ್ಞೆ ಬಗ್ಗೆ ಅನುಮಾನಗಳು ಏಳೋದು ಸಹಜ. ಇವತ್ತು ಬೆಳಗಾವಿ ಜಿಲ್ಲೆ ಸವದತ್ತಿಯ ತಾಲೂಕು ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಕಾಗದಗಳ ಮೇಲೆ ಸಹಿ ಮಾಡಲು ಬಂದಿದ್ದ ಗಣಾಚಾರಿ ಹೆಸರಿನ ವ್ಯಕ್ತಿ ತನ್ನ ಪತ್ನಿ ಐಶ್ವರ್ಯ ಗಣಾಚಾರಿ ಮತ್ತು ಆಕೆಯ ತಾಯಿ ಅನುಸೂಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪೊಲೀಸರು ಅವನನ್ನು ಬಂಧಿಸಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿರುವ ಐಶ್ವರ್ಯ ಮತ್ತು ಅನುಸೂಯರನ್ನು ಹುಬ್ಳಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ: ಮಂಡ್ಯ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

