AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Metro Yellow Line: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ಆಗಸ್ಟ್​ನಲ್ಲಿ ನಡೆಯುವ ನಿರೀಕ್ಷೆ ಇದೆ. ಯೆಲ್ಲೋ ಲೈನ್​​ನ ಸುರಕ್ಷತಾ ಪರಿಶೀಲನೆ ಜುಲೈ 22-25ರ ನಡುವೆ ನಡೆಯಲಿದ್ದು, ಆ ನಂತರ ಉದ್ಘಾಟನೆ ದಿನಾಂಕ ಅಂತಿಮಗೊಳಿಸುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಟ್ರೋಗೆ ಚಾಲನೆ ನೀಡುವ ಸಾಧ್ಯತೆಯಿದೆ.

Metro Yellow Line: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ
ಮೆಟ್ರೋ ಹಳದಿ ಮಾರ್ಗ
Ganapathi Sharma
|

Updated on: Jul 19, 2025 | 12:26 PM

Share

ಬೆಂಗಳೂರು, ಜುಲೈ 19: ಕೊನೆಗೂ ಬೆಂಗಳೂರು ನಮ್ಮ ಮೆಟ್ರೋ (Namma Metro ಹಳದಿ ಮಾರ್ಗದಲ್ಲಿ (Namma Metro Yellow Line) ರೈಲು ಸಂಚಾರಕ್ಕೆ ಚಾಲನೆ ನೀಡುವ ದಿನ ಸಮೀಪಿಸುವ ಸುಳಿವು ದೊರೆತಿದೆ. ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಜುಲೈ 22 ರಿಂದ 25 ರವರೆಗೆ ಸುರಕ್ಷತಾ ಪರಿಶೀಲನೆ ನಡೆಯಲಿದೆ ಎಂದು ವರದಿಯಾಗಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಸುರಕ್ಷತಾ ಪರೀಕ್ಷೆ ನಡೆಸಲಿದ್ದು, ಎಲ್ಲವೂ ಸರಿಯಿದ್ದರೆ ಆ ನಂತರ ಸಂಚಾರಕ್ಕೆ ಅನುಮತಿ ನೀಡುವ ನಿರೀಕ್ಷೆ ಇದೆ. 19.15 ಕಿಮೀ ಉದ್ದದ ಈ ಮೆಟ್ರೋ ಮಾರ್ಗದ ಸುರಕ್ಷತಾ ಪರಿಶೀಲನೆ ಬಹು ಹಂತಗಳಲ್ಲಿ ನಡೆಯಲಿದ್ದು, ಆರ್‌ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದವರೆಗಿನ ಹೊಸ ವಿಭಾಗದ ತಪಾಸಣೆ ಜುಲೈ 22 ಮತ್ತು 24 ರ ನಡುವೆ ನಡೆಯಲಿದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಅನುಸರಣಾ ಪರಿಶೀಲನೆ ಮತ್ತು ಪರಿಶೀಲನೆಯನ್ನು ಜುಲೈ 25 ರಂದು ನಿಗದಿಪಡಿಸಲಾಗಿದೆ ಎಂದು ಸಿಎಂಆರ್​​ಎಸ್ ಮೂಲಗಳು ತಿಳಿಸಿವೆ.

16 ನಿಲ್ದಾಣಗಳನ್ನು ಹೊಂದಿರುವ ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿರುವ ಹಳದಿ ಮಾರ್ಗವನ್ನು ಆರಂಭದಲ್ಲಿ ಡಿಸೆಂಬರ್ 2021 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು, ಆದರೆ ವಿವಿಧ ಕಾರಣಗಳಿಂದಾಗಿ ಯೋಜನೆಯು ಗಮನಾರ್ಹ ವಿಳಂಬವಾಯಿತು.

ಹಳದಿ ಮಾರ್ಗದ ಸುರಕ್ಷತಾ ಪರಿಶೀಲನೆ ಪ್ರಕ್ರಿಯೆಯಲ್ಲಿ ಏನೇನಿರಲಿವೆ?

ಮುಂಬರುವ ಸುರಕ್ಷತಾ ಪರಿಶೀಲನೆಯು ಟ್ರ್ಯಾಕ್ ಮೂಲಸೌಕರ್ಯ, ವಯಾಡಕ್ಟ್‌ಗಳು, ನಿಲ್ದಾಣ ಸೌಲಭ್ಯಗಳು, ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ಇತರ ಉಪ-ಘಟಕಗಳು ಸೇರಿದಂತೆ ಎಲ್ಲಾ ನಿರ್ಣಾಯಕ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ. ಮಾರ್ಗವು ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಪೂರೈಸಿರುವುದನ್ನು ಸಂಪೂರ್ಣ ಖಾತರಿಪಡಿಸಿಕೊಂಡ ನಂತರ ಸಿಎಂಆರ್​​ಎಸ್ ಕಾರ್ಯಾಚರಣೆಗೆ ಅನುಮೋದನೆ ನೀಡಲಿದೆ.

ಸಿಎಂಆರ್​​ಎಸ್ ಅನುಮೋದನೆ ದೊರೆತ ನಂತರ, ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳೊಂದಿಗೆ ಬಿಎಂಆರ್​​ಸಿಎಲ್ ಸಮಾಲೋಚನೆ ನಡೆಸಲಿದ್ದು, ನಂತರ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಚಾಲನೆ ದಿನಾಂಕ ನಿಗದಿಪಡಿಸಲಿದೆ.

ಹಳದಿ ಮಾರ್ಗ ಮೆಟ್ರೋ: ಪ್ರಧಾನಿ ಮೋದಿ ಉದ್ಘಾಟಿಸುವ ಸಾಧ್ಯತೆ

ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಅದ್ಧೂರಿ ಚಾಲನೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ಹಳದಿ ಮಾರ್ಗದ ಪ್ರಯಾಣ, ನಿಲ್ದಾಣದ ವಿಡಿಯೋಗಳು ಮತ್ತು ಡ್ರೋನ್ ದೃಶ್ಯಗಳನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟನೆ ನಡೆಯುವ ಸಾಧ್ಯತೆಯಿದೆ. ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಎಂಆರ್​ಸಿಎಲ್ ಆಹ್ವಾನ ನೀಡುವ ನಿರೀಕ್ಷೆ ಇದೆ ಎಂದು ‘ಮನಿ ಕಂಟ್ರೋಲ್’ ವರದಿ ಮಾಡಿದೆ.

ಇದನ್ನೂ ಓದಿ: ಹಳದಿ ಲೈನ್ ಮೆಟ್ರೋ ವಿಳಂಬ: ಬಿಎಂಆರ್​ಸಿಎಲ್​ಗೆ ಸಾಲು ಸಾಲು ಪ್ರಶ್ನೆ ಕೇಳಿದ ತೇಜಸ್ವಿಸೂರ್ಯ

ನಮ್ಮ ಮೆಟ್ರೋ ಹಳದಿ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಕೇಂದ್ರಗಳಿಗೆ ಮೆಟ್ರೋ ಸಂಪರ್ಕವನ್ನು ಸುಧಾರಿಸಲಿದೆ. ದಟ್ಟಣೆಯ ರಸ್ತೆಗಳಲ್ಲಿ ಸಂಚಾರ ಹೊರೆ ಕಡಿಮೆ ಮಾಡಲಿದೆ ಮತ್ತು ಗ್ರೀನ್ ಮತ್ತು ಪಿಂಕ್ ಮಾರ್ಗಗಳೊಂದಿಗೆ ಸರಾಗವಾಗಿ ಸಂಪರ್ಕ ಕಲ್ಪಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ