ಬೆಂಗಳೂರು: ಕನ್ನಡ ಮತ್ತು ಕರ್ನಾಟಕದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಹಿಂದಿವಾಲಾ ಅರೆಸ್ಟ್!
ಬೆಂಗಳೂರಿನಲ್ಲಿ ಕನ್ನಡ ಡೆಲಿವರಿ ಬಾಯ್ ಒಬ್ಬನಿಗೆ ಬಂಗಾಳಿ ಮೂಲದ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರವೇ ಪ್ರವೀಣ್ ಬಣದ ಬೊಮ್ಮನಹಳ್ಳಿ ಘಟಕದ ಅಧ್ಯಕ್ಷ ಮಹೇಶ್ ಗೌಡ ದೂರು ದಾಖಲಿಸಿದ್ದರು.

ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ಇತ್ತೀಚಿಗೆ ವಲಸಿಗರ ಹಾವಳಿ ಮಿತಿ ಮೀರುತ್ತಿದೆ. ಕನ್ನಡಿಗರ (Kannada) ಮೇಲೆ ದಬ್ಬಾಳಿಕೆ, ಮಾರಣಾಂತಿಕ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಗಳೇ ಹೆಚ್ಚಾಗಿವೆ. ಇದೀಗ ಮತ್ತೊಬ್ಬ ಹಿಂದಿವಾಲಾ (Hindiwala) ಕನ್ನಡಿಗ ಡೆಲಿವರಿ ಬಾಯ್ ಮೇಲೆ ಬಾಯಿಗೆ ಬಂದಂತೆ ನಿಂದಿಸಿರುವ ಆಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು, ಇದೀಗ ಆತ ಪೋಲಿಸರ ಅಥಿತಿಯಾಗಿದ್ದಾನೆ.
ನಾಡ ಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು, ಧೀಮಂತ ಹೋರಾಟಗಾರಿಂದ ರಚನೆಯಾದ ಕರುನಾಡಲ್ಲಿ, ಇದೀಗ ಹಿಂದಿವಾಲಾಗಳು ದರ್ಬಾರ್ ನಡೆಸಲು ಮುಂದಾಗ್ತಿದ್ದಾರೆ. ವೈರಲ್ ಆದ ಆಡಿಯೋ ಕೆಚ್ಚೆದೆಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅಂದಹಾಗೆ ಈ ಆಡಿಯೋದಲ್ಲಿರುವ ವ್ಯಕ್ತಿ ಹೆಸರು ಮಿಥುನ್ ಸರ್ಕಾರ್ ಅಂತ. ಬೆಂಗಾಲಿ ಮೂಲದವನಾಗಿರುವ ಇವನು ಬೊಮ್ಮನಹಳ್ಳಿಯ ಬೇಗೂರಿನಲ್ಲಿ ವಾಸವಿದ್ದಾನೆ.
ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ: ಕೇಂದ್ರಕ್ಕೆ ಪತ್ರ ಬರೆದ ಸಚಿವ ಶಿವರಾಜ್ ತಂಗಡಗಿ
ಈತ ಆನ್ಲೈನ್ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ. ಈ ಸಂಬಂಧ ಕೋರಿಯರ್ ಬಾಯ್ ರಂಜಿತ್ ಎಂಬ ಯುವಕ ಈತನ ವಿಳಾಸ ಕೇಳೋಕೆ ಅಂತ ನಿನ್ನೆ ಬೆಳಗ್ಗೆ 9 ಗಂಟೆ ವೇಳೆ ಕಾಲ್ ಮಾಡಿದ್ದಾನೆ. ಭಾಷೆ ವಿಚಾರಕ್ಕೆ ಖ್ಯಾತೆ ತೆಗೆದ ಮಿಥುನ್ ಸರ್ಕಾರ್ ಕನ್ನಡಿಗನಾಗಿರುವ ರಂಜಿತ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಾಯಿಗೆ ಬಂದಂತೆ ಕನ್ನಡಿಗರನ್ನ ಬೈದಿದ್ದಾನೆ. ರೆಕಾರ್ಡ್ ಆಗ್ತಿದೆ ಕನ್ನಡಿಗರನ್ನ ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡಬೇಡಿ ಅಂತ ರಂಜಿತ್ ಕೇಳಿಕೊಂಡ್ರೂ ದುರಹಂಕಾರಿ ಹಿಂದಿವಾಲ ಮಿಥುನ್ ಮಿತಿಮೀರಿ ಕನ್ನಡಿಗರ ವಿರುದ್ದ ವರ್ತಿಸಿದ್ದಾನೆ.
ಬೆಂಗಳೂರಲ್ಲಿ 70% ಹಿಂದಿಯವರು ಇದ್ದೇವೆ. ನಾವ್ ಇಲ್ಲಿಂದ ಹೋದರೆ ಕನ್ನಡಿಗರ ಬಳಿ ಟೊಮೆಟೊ ತೆಗೆದುಕೊಳ್ಳೋಕು 10 ರೂ ಗತಿ ಇರೋಲ್ಲ ಅಂತ ನಾಲಿಗೆ ಹರಿಬಿಟ್ಟಿದ್ದಾನೆ. ಸದ್ಯ ಮನ ಬಂದಂತೆ ನಾಲಿಗೆ ಹರಿಬಿಟ್ಟಿರುವ ಮಿಥುನ್ ಸರ್ಕಾರ್ ವಿರುದ್ಧ ಕರವೇ ಪ್ರವೀಣ್ ಬಣದ ಬೊಮ್ಮನಹಳ್ಳಿ ಘಟಕದ ಅಧ್ಯಕ್ಷ ಮಹೇಶ್ ಗೌಡ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ ಪೋಲಿಸರು ರಾತ್ರಿಯಿಡೀ ಆತನ ಟವರ್ ಲೋಕೆಷನ್ ಕ್ಯಾಚ್ ಮಾಡಿ ಬೆಳಿಗ್ಗೆ 4 ಸುಮಾರಿಗೆ ಹೊಂಗಸಂದ್ರ ಮನೆಯೊಂದರಲ್ಲಿ ಲಾಕ್ ಮಾಡಿ ಠಾಣೆಗೆ ಎತ್ತಕೊಂಡು ಸರಿಯಾಗಿ ಬೆಂಡ್ ಎತ್ತಿದ್ದಾರೆ.
ಇದನ್ನೂ ಓದಿ: ಎಂದಿಗೂ ಕನ್ನಡ ಮಾತನಾಡಲ್ಲ ಅಂತ ದರ್ಪ ತೋರಿದ್ದ SBI ಬ್ಯಾಂಕ್ ಮ್ಯಾನೇಜರ್: ಸಿಎಂ ಖಂಡನೆ ಬೆನ್ನಲ್ಲೇ ಎತ್ತಂಗಡಿ
ಒಟ್ಟಿನಲ್ಲಿ ಎಲ್ಲಿಂದಲ್ಲೋ ಬಂದ ಈ ವಲಸಿಗರಿಗೆ ಕನ್ನಡಿಗರು ಕೆಲಸ, ಸ್ನೇಹ, ಪ್ರೀತಿ ಕೊಟ್ಟರೇ ಈ ದುರಂಹಕಾರಿಗಳು ಕನ್ನಡಿಗರ ಮೇಲೆ ದರ್ಪ ದೌರ್ಜನ್ಯ ತೋರುತ್ತಿರುವುದು ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:40 am, Sat, 19 July 25







