AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗರಿಗೆ ಅಪಮಾನ ಕೇಸ್​​: ಮ್ಯಾನೇಜರ್ ಬಂಧನ, ಜಿಎಸ್​ ಸೂಟ್​ ಹೋಟೆಲ್​ ಸೀಜ್

ಕನ್ನಡಿಗರನ್ನು ಅವಮಾನಿಸಿದ್ದಕ್ಕಾಗಿ ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ ಜಿಎಸ್​​ ಸೂಟ್ ಹೋಟೆಲ್​ ಅನ್ನು ಇದೀಗ ಸೀಜ್ ಮಾಡಲಾಗಿದೆ. ಹೋಟೆಲ್‌ನ ಡಿಸ್ಪ್ಲೇ ಬೋರ್ಡ್‌ನಲ್ಲಿ ಅವಹೇಳನಕಾರಿ ಬರಹ ಪ್ರದರ್ಶಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮ್ಯಾನೇಜರ್ ಅನ್ನು ಬಂಧಿಸಲಾಗಿದ್ದು, ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕನ್ನಡಿಗರಿಗೆ ಅಪಮಾನ ಕೇಸ್​​: ಮ್ಯಾನೇಜರ್ ಬಂಧನ, ಜಿಎಸ್​ ಸೂಟ್​ ಹೋಟೆಲ್​ ಸೀಜ್
ಜಿ.ಎಸ್​.ಸೂಟ್​ ಹೋಟೆಲ್​ ಸೀಜ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: May 18, 2025 | 9:22 AM

Share

ಬೆಂಗಳೂರು, ಮೇ 18: ನಿನ್ನೆ ನಗರದ ಕೋರಮಂಗಲ (Koramangala) ಜಿ.ಎಸ್​.ಸೂಟ್​ ಹೋಟೆಲ್​ನಲ್ಲಿ (Hotel Gs Suites) ಕನ್ನಡಿಗರನ್ನ‌ ನಿಂದಿಸುವ ಡಿಸ್​ಪ್ಲೇ ಬೋರ್ಡ್‌ ಹಾಕಿ ಅವಮಾನಿಸಿರುವಂತಹ ಘಟನೆ ನಡೆದಿತ್ತು. ಇದು ಕನ್ನಡಿಗರನ್ನ ಮತ್ತೆ ಕೆರಳಿಸುವಂತೆ ಮಾಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮ್ಯಾನೇಜರ್ ಸರ್ಫಜ್​​ ಎಂಬಾತನನ್ನು ಬಂಧಿಸಲಾಗಿದ್ದು, ಕನ್ನಡಿಗರಿಗೆ ಅಪಮಾನ ಮಾಡಿದ್ದ ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ನಮ್ಮ‌ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ.‌ ಪದೆ-ಪದೇ ಕನ್ನಡಿಗರನ್ನ ಕೆರಳಿಸುತ್ತಿದ್ದಾರೆ.  ಕೋರಮಂಗಲದ‌‌ ನೆಕ್ಸಸ್ ಮಾಲ್ ಸಮೀಪದಲ್ಲಿ ಜಿ.ಎಸ್​.ಸೂಟ್​ ಹೋಟೆಲ್​ ಇದೆ. ಈ ಹೋಟೆಲ್​​ನ ಹೊರಭಾಗದ ಡಿಸ್​ಪ್ಲೇ ಬೋರ್ಡ್​ನಲ್ಲಿ ನಿನ್ನೆ ರಾತ್ರಿ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು. ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾರೆ. ಬಳಿಕ ವಿಡಿಯೋ ನೋಡ್ತಿದ್ದಂತೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ.

ಇದನ್ನೂ ಓದಿ: ಮತ್ತೊಮ್ಮೆ ಕನ್ನಡಿಗರಿಗೆ ಅವಮಾನ, ಕೋರಮಂಗಲದ ಹೋಟೆಲೊಂದರ ವಿರುದ್ಧ ದೂರು ದಾಖಲು

ಇದನ್ನೂ ಓದಿ
Image
ರಾತ್ರಿ ಸುರಿದ ಭಾರಿ ಮಳೆಗೆ ನಡುಗಿದ ಬೆಂಗಳೂರು: ಸಾಯಿಲೇಔಟ್​​ ಜಲಾವೃತ
Image
ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಜೋರು
Image
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
Image
ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಜೋರು ಮಳೆ, ಟ್ರಾಫಿಕ್​ ಜಾಮ್​

ಈ ವೇಳೆ ತಕ್ಷಣ ಅಲರ್ಟ್ ಆದ ಮಡಿವಾಳ ಪೊಲೀಸರು ಹೋಟೆಲ್​ಗೆ ಬಂದು ಪರಿಶೀಲನೆ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಅಬ್ದುಲ್ ‌ಸಮಾದ್ ಹಾಗೂ ಮ್ಯಾನೇಜರ್​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಜೊತೆಗೆ ಡಿಸ್​ಪ್ಲೇ ಬೋರ್ಡ್ ವಶಕ್ಕೆ ಪಡೆದು, ಹೋಟೆಲ್ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.‌

ಕಳೆದ ಮೂರು ವರ್ಷದಿಂದ ಕೋರಮಂಗಲದ ಓರ್ವ ವ್ಯಕ್ತಿ ಈ ಡಿಸ್​ಪ್ಲೇ ಬೋರ್ಡ್ ನಿರ್ವಹಣೆ ಮಾಡ್ತಿದ್ದಾರಂತೆ. ಡಿಸ್​ಪ್ಲೇ ಕಂಟ್ರೋಲರ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ. ಆದರೆ ಪೊಲೀಸರ ತನಿಖೆ ನಂತರವೇ ಅಸಲಿ ಸತ್ಯ ಹೊರಬರಬೇಕಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಜೋರು, ಬೆಂಗಳೂರಿಗೆ ಯೆಲ್ಲೋ ಅಲರ್ಟ್​

ಒಟ್ಟಿನಲ್ಲಿ ಹೊಟ್ಟೆ ಪಾಡಿಗಾಗಿ ಕರ್ನಾಟಕಕ್ಕೆ ವಲಸೆ ಬಂದಿರುವ ಇಂತಹ ಜನರ ಸೊಕ್ಕು ಇಳಿಯಬೇಕಿದೆ. ಕನ್ನಡಿಗರಿ ಅವಮಾನ ಮಾಡಿದ ಕಿಡಿಗೇಡಿಗಳಿಗೆ ಕನ್ನಡದ ಪಾಠ ಮಾಡಬೇಕಿದೆ. ಜೊತೆಗೆ ಕನ್ನಡಿಗರ ಸ್ವಾಭಿಮಾನದ ಕಿಚ್ಚಿನ ಬಿಸಿ ತಾಕಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.