AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Rains: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಜೋರು ಮಳೆ, ಟ್ರಾಫಿಕ್​ ಜಾಮ್​

ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ, ಇದರಿಂದಾಗಿ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಇಂದು ರಾತ್ರಿ ನಡೆಯಬೇಕಿರುವ ಆರ್‌ಸಿಬಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿದೆ. ಹಲವು ಪ್ರದೇಶಗಳಲ್ಲಿ ಮಳೆನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಬೆಂಗಳೂರು ಸಂಚಾರ ಪೊಲೀಸರು ನಿಧಾನವಾಗಿ ಚಾಲನೆ ಮಾಡುವಂತೆ ಮನವಿ ಮಾಡಿದ್ದಾರೆ.

Bangalore Rains: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಜೋರು ಮಳೆ, ಟ್ರಾಫಿಕ್​ ಜಾಮ್​
ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ಜೋರು ಮಳೆ
ವಿವೇಕ ಬಿರಾದಾರ
|

Updated on:May 17, 2025 | 7:12 PM

Share

ಬೆಂಗಳೂರು, ಮೇ 17: ಬೆಂಗಳೂರಿನಲ್ಲಿ (Bengaluru) ಪೂರ್ವ ಮುಂಗಾರು ಮಳೆಯಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಳೆರಾಯ (Rain) ಆರ್ಭಟಿಸುತ್ತಿದ್ದಾನೆ. ಶನಿವಾರ (ಮೇ.17) ಸಂಜೆ ಬೆಂಗಳೂರಿನ ಶಾಂತಿನಗರ, ರಿಚ್ಮಂಡ್​ ಸರ್ಕಲ್​, ಕಾರ್ಪೊರೇಷನ್, ಕಬ್ಬನ್​ಪಾರ್ಕ್, ಚಿನ್ನಸ್ವಾಮಿ ಮೈದಾನ, ವಿಧಾನಸೌಧ, ಕೆ.ಆರ್​.ಮಾರ್ಕೆಟ್, ಮೆಜೆಸ್ಟೆಕ್​, ರಾಜಾಜಿನಗರ, ಲಾಲ್​ಬಾಗ್​, ಜಯನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.

ಇಂದು ರಾತ್ರಿ 7:30ಕ್ಕೆ ಆರ್​ಸಿಬಿ ವರ್ಸಸ್​ ಕೆಕೆಆರ್ ಪಂದ್ಯ ಆರಂಭವಾಗಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಮಳೆಯಾಗುತ್ತಿರುವುದರಿಂದ ಆರ್​ಸಿಬಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ. ಬೇಗ ಮಳೆ ನಿಲ್ಲಲಿ ಎಂದು ಅಭಿಮಾನಿಗಳು ದೇವರಲ್ಲಿ ಪಾರ್ಥಿಸುತ್ತಿದ್ದಾರೆ. ಆರ್​ಸಿಬಿ ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ ಎಂದ ಅಭಿಮಾನಿಗಳ ಪಾರ್ಥನೆಯಾಗಿದೆ.

ಮಳೆಯಿಂದ ಸಂಚಾರ ದಟ್ಟಣೆ

ಭಾರಿ ಮಳೆಯಾಗುತ್ತಿರುವುದರಿಂದ ನಗರದ ಹಲವು ರಸ್ತೆಗಳ ಮೇಲೆ ನೀರು ನಿಂತಿದೆ. ಹೆಬ್ಬಾಳದಲ್ಲಿ ಮಳೆ ಬರುತ್ತಿರುವುದರಿಂದ ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳ ಕಡೆ ಹೋಗುವ ರಸ್ತೆಯಲ್ಲಿ ತೀವ್ರ ಸಂಚಾರದಟ್ಟಣೆ ಉಂಟಾಗಿದೆ. ಹಾಗೆ, ವರ್ತೂರು ಕಡೆಯಿಂದ, ವೈಟಫಿಲ್ಡ್ ಕಡೆಗೆ ಹೋಗುವ ಮಾರ್ಗದಲ್ಲಿ, ಕಸ್ತೂರಿನಗರ ಕಡೆಯಿಂದ ಹೆಬ್ಬಾಳ ಮುಖ್ಯ ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ, ಬಾಗಲೂರು ಕಡೆಯಿಂದ ನಗರ ಮತ್ತು ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮತ್ತು ನ್ಯಾಷನಲ್ ಗೇಮ್ಸ್ ವಿಲೇಜ್ ಗೆಟ್​ನಿಂದ ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಿಧಾನವಾಗಿ ಚಲಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಿಗರೇಟ್​ ತಂದು ಕೊಡದಿದ್ದಕ್ಕೆ ಕಾರಿನಿಂದ ಗುದ್ದಿ ಯುವಕನ ಕೊಲೆ

ಟ್ವಿಟರ್ ಪೋಸ್ಟ್​

ಕೆ.ಆರ್‌ ಪುರದಿಂದ ಟಿನ್‌ಫ್ಯಾಕ್ಟರಿ ಕಡೆಗೆ, ನಾಗಾವಾರ ಸರ್ವೀಸ್‌ ರಸ್ತೆಯಿಂದ ಹೆಬ್ಬಾಳ ಕಡೆಗೆ, ಗುಂಜೂರು ಕಡೆಯಿಂದ ವರ್ತೂರು ಕಡೆಗೆ, ವರ್ತೂರು ಕೋಡಿಯಿಂದ ಗುಂಜೂರು ಕಡೆಗೆ, ಹುಣಸಮಾರನಹಳ್ಳಿ ಸರ್ವೀಸ್‌ ರಸ್ತೆಯಿಂದ ಏರ್‌ಪೋರ್ಟ್‌ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಹಲವು ರಸ್ತೆಗಳಲ್ಲಿ ನಿಧಾನಗತಿ ಸಂಚಾರ

  • ಪಣತ್ತೂರು ,ಪಣತ್ತೂರು ರೈಲ್ವೆ ಸೇತುವೆ ಎರಡು ಬದಿ ರಸ್ತೆಯಕಡೆಗೆ
  • ದೇವರ ಬಿಸನಹಳ್ಳಿ ಕಡೆಯಿಂದ,ಸಕ್ರ ಆಸ್ಪತ್ರೆಯಕಡೆಗೆ.
  • ಜೆ ಬಿ ನಗರ ರೈಲ್ವೆ ಸೇತುವೆ ಕಡೆಯಿಂದ ಭದ್ರಪ್ಪ ಲೇಔಟ್​ಕಡೆಗೆ
  • ವಿಂಡ್ಸನ್ ಮ್ಯಾನರ್ ರೈಲ್ವೆ ಸೇತುವೆ ಕಡೆಯಿಂದ ಪಿ ಜಿ ಹಳ್ಳಿ ಕಡೆಗೆ.
  • ರೂಬಿ 2 ಕಡೆಯಿಂದ, ಜಿ ಡಿ ಮತ್ತು ಜೆ ಪಿ ನಗರದ ಕಡೆಗೆ.
  • ಸೋನಿ ವರ್ಲ್ಡ್ ಕಡೆಯಿಂದ ಶ್ರೀನಿವಾಗಿಲು ಕಡೆಗೆ.
  • ಜೆ ಡಿ ಮರ ಕಡೆಯಿಂದ ಗೋಪಾಲನ್ ಮಾಲ್ ಕಡೆಗೆ
  • ಕಮಾಂಡೋ ಆಸ್ಪತ್ರೆ ಕಡೆಯಿಂದ ಎಎಸಸಿ ಜಂಕ್ಷನ್ ಕಡೆಗೆ.
  • ಅಯೋಧ್ಯ ಜಂಕ್ಷನ್ ಕಡೆಯಿಂದ,ಟ್ಯಾನರಿ ರಸ್ತೆಯ ಕಡೆಗೆ.
  • ವೀರಣ್ಣಪಾಳ್ಯ ಜಂಕ್ಷನ್ ಕಡೆಯಿಂದ ಹೆಬ್ಬಾಳ ವೃತ್ತದ ಕಡೆಗೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Sat, 17 May 25