ಮತ್ತೊಮ್ಮೆ ಕನ್ನಡಿಗರಿಗೆ ಅವಮಾನ, ಕೋರಮಂಗಲದ ಹೋಟೆಲೊಂದರ ವಿರುದ್ಧ ದೂರು ದಾಖಲು
ಬದುಕಲು ಕರ್ನಾಟಕಕ್ಕೆ ಬರುವ ಜನರಿಂದ ಕನ್ನಡಿಗರಿಗೆ ಅವಮಾನ ಆಗುತ್ತಿರುವ ಸಂಗತಿ ಹೊಸದೇನಲ್ಲ. ಇದು ಪದೇಪದೆ ಆಗುತ್ತಿದೆ. ಗಾಯಕ ಸೋನು ನಿಗಮ್ ವಿಷಯ ಕನ್ನಡಿಗರಿಗೆ ಗೊತ್ತಿದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಕನ್ನಡೇತರರು ಈ ವಿಷಯವನ್ನು ವಿಕ್ಟಿಮ್ ಕಾರ್ಡ್ ಆಗಿ ಬಳಸಿ ಸಹಾನುಭೂತಿ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರು, ಮೇ 17: ಮಡಿವಾಳ ಪೊಲೀಸ್ ಠಾಣೆ ಲಿಮಿಟ್ಸ್ ನಲ್ಲಿ ಬರುವ ಕೋರಮಂಗಲದಲ್ಲಿರುವ ಜಿಎಸ್ ಸೂಟ್ಸ್ ಹೋಟೆಲ್ (GS Suites Hotel) ಮಾಲೀಕ ನಿಸ್ಸಂದೇಹವಾಗಿ ಕನ್ನಡಿಗನಲ್ಲ. ಒಂದು ವೇಳೆ ಅವನು ಕನ್ನಡಿಗನಾಗಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲ. ಈ ಹೋಟೆಲ್ನ ಎಲ್ಈಡಿ ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಅವಮಾನವಾಗುವ ಪದಗಳನ್ನು ಬಳಸಲಾಗಿತ್ತು. ಅವಾಚ್ಯ ಪದಗಳ ಬಳಕೆಯಾಗಿರುವುದರಿಂದ ಅವುಗಳನ್ನು ಉಲ್ಲೇಖಿಸುವುದು ಸಾಧ್ಯವಿಲ್ಲ. ವಿಷಯ ಗೊತ್ತಾದ ಕೂಡಲೇ ಮಡಿವಾಳ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ ಮತ್ತು ಬೋರ್ಡನ್ನು ಕಿತ್ತು ಹಾಕಿಸಿದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಇಲ್ಲ ಕನ್ನಡ ಹಾಡು, ಇದೆಂಥಹಾ ಅವಮಾನ ಎಂದ ಅಭಿಮಾನಿಗಳು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

