ಬೆಂಗಳೂರಿನಲ್ಲಿ ವೀಸಾಗಾಗಿ ಅಕ್ರಮ ಡಯಾಗ್ನೋಸ್ಟಿಕ್ ಸೆಂಟರ್! ಕರ್ನಾಟಕ ವೈದ್ಯಕೀಯ ಪರಿಷತ್ ದಾಳಿ
ಬೆಂಗಳೂರಿನಲ್ಲಿ ವೀಸಾಗಾಗಿ ನಕಲಿ ಮೆಡಿಕಲ್ ಸರ್ಟಿಫಿಕೇಟ್ ನೀಡುತ್ತಿದ್ದ ಶಂಕೆ ವ್ಯಕ್ತವಾದ ಹಿನ್ನಲೆ ಸಹಕಾರ ನಗರದಲ್ಲಿರುವ ಅಸ್ತ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ಕರ್ನಾಟಕ ವೈದ್ಯಕೀಯ ಪರಿಷತ್ತು ದಾಳಿ ನಡೆಸಿದೆ. ದಾಳಿ ವೇಳೆ ಸೆಂಟರ್ನಲ್ಲಿ ವೈದ್ಯರು ಇರಲಿಲ್ಲ. ಸದ್ಯ ಕಾನೂನು ಕ್ರಮಕ್ಕೆ ಮೆಡಿಕಲ್ ಕೌನ್ಸಿಲ್ ಮುಂದಾಗಿದೆ.

ಬೆಂಗಳೂರು, ಆಗಸ್ಟ್ 02: ವಿದೇಶಕ್ಕೆ ಹೋಗುವವರಿಗೆ ನಕಲಿ ಮೆಡಿಕಲ್ ಸರ್ಟಿಫಿಕೇಟ್ (Fake medical certificate) ನೀಡುತ್ತಿದ್ದ ಶಂಕೆ ಹಿನ್ನಲೆ ನಗರದ ಅಸ್ತ ಡಯಾಗ್ನೋಸ್ಟಿಕ್ ಸೆಂಟರ್ (Diagnostic Center) ಮೇಲೆ ಕರ್ನಾಟಕ ವೈದ್ಯಕೀಯ ಪರಿಷತ್ ದಾಳಿ ಮಾಡಿದೆ. ಮೆಡಿಕಲ್ ಕೌನ್ಸಿಲ್ ಉಲ್ಲಂಘನೆ ಮತ್ತು ವೀಸಾ ಹಗರಣ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಮೆಡಿಕಲ್ ಕೌನ್ಸಿಲ್ ಕಾನೂನು ಕ್ರಮಕ್ಕೆ ಮುಂದಾಗಿದೆ.
ಡಾ.ಭರತ್ ಕುಮಾರ್ ಹೇಳಿದ್ದಿಷ್ಟು
ಈ ಬಗ್ಗೆ ಕರ್ನಾಟಕ ವೈದ್ಯಕೀಯ ಪರಿಷತ್ ಸದಸ್ಯ ಡಾ.ಭರತ್ ಕುಮಾರ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, ರಾಜಸ್ಥಾನದ ವೈದ್ಯರ ಹೆಸರಲ್ಲಿರುವ ಡಯಾಗ್ನೋಸ್ಟಿಕ್ ಸೆಂಟರ್ ತೆರೆಯಲಾಗಿದೆ. ಇಲ್ಲಿಂದ ರಕ್ತ ತೆಗೆದುಕೊಂಡು ರಾಜಸ್ಥಾನದಲ್ಲಿ ಪರೀಕ್ಷೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿದ್ದಾರೆ 1 ಸಾವಿರಕ್ಕೂ ಅಧಿಕ ನಕಲಿ ವೈದ್ಯರು: ಆರೋಗ್ಯ ಇಲಾಖೆಗೆ ದೂರು
ದಾಳಿ ವೇಳೆ ಯಾವುದೇ ವೈದ್ಯರಾಗಲಿ, ಸಲಕರಣೆಗಳು ಪತ್ತೆ ಆಗಿಲ್ಲ. ರೋಗಿಗಳ ಪರಿಶೀಲನೆ ಮತ್ತು ಬಿಲ್ ಯಾವುದು ಸಿಕ್ಕಿಲ್ಲ. ಬೇರೆ ರಾಜ್ಯದ ಜನ ಬಂದು ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಬೇರೆ ರಾಜ್ಯದವರೇ ಬರುತ್ತಾರೆ: ಚಂದ್ರು
ಇನ್ನು ಓರ್ವ ಸ್ಥಳೀಯ ವ್ಯಕ್ತಿ ಚಂದ್ರು ಎಂಬುವವರು ಮಾತನಾಡಿ, ಇಲ್ಲಿಗೆ ಸ್ಥಳೀಯ ರೋಗಿಗಳು ಯಾರು ಬರಲ್ಲ, ಬೇರೆ ರಾಜ್ಯದವರೇ ಬರುತ್ತಾರೆ. ಇಲ್ಲಿ ಸರ್ಟಿಫಿಕೇಟ್ ಕೊಟ್ಟರೆ ವಿದೇಶಕ್ಕೆ ಹೋಗುವುದಕ್ಕೆ ಆಗುತ್ತದೆ ಅಂತಾರೆ. ಒಬ್ಬರು ಡಾಕ್ಟರ್ ಇರುವುದನ್ನ ಮತ್ತು ರಕ್ತ ಪರೀಕ್ಷೆ ಮಾಡುತ್ತಿರುವುದನ್ನು ನಾನು ನೋಡಿಲ್ಲ. ಪ್ರತಿದಿನ ಬೆಳಗ್ಗೆ 20 ಜನ ಬಂದು ಹೋಗುತ್ತಾರೆ. 5 ನಿಮಿಷಕ್ಕೆ ವಾಪಸ್ ಬರುತ್ತಾರೆ ಎಂದಿದ್ದಾರೆ.
ಸ್ವತಃ ವೈದ್ಯರೇ ರೋಗಿಗಳಿಂದ ಹಣ ವಸೂಲಿ
ಬೀದರ್ ಜಿಲ್ಲೆಯ ಔರಾದ್ ತಾಲೂಕು ಆಸ್ಪತ್ರೆಯಲ್ಲಿ ಸ್ವತಃ ವೈದ್ಯರೇ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಔರಾದ್ ಪಟ್ಟಣದಲ್ಲಿ ರಾಷ್ಟ್ರೀಯ ಅಹಿಂದಾ ಸಂಘಟನೆ ರಾಜ್ಯಯುವ ಘಟಕದ ವತಿಯಿಂದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಹೆರಿಗೆಗೆಂದು ದಾಖಲಾಗುವ ಪ್ರತಿ ಮಹಿಳೆಯಿಂದ 3ರಿಂದ 4 ಸಾವಿರ ರೂ. ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಉಚಿತವಾಗಿ ರಕ್ತ ಪರಿಕ್ಷೆ, ಸ್ಕ್ಯಾನಿಂಗ್ ಹೀಗೆ ನಾನಾ ಪರಿಕ್ಷೇಗಳಿಗೆ ಹಣವನ್ನ ವಸೂಲಿ ಮಾಡುತ್ತಿದ್ದಾರೆಂದು ಪ್ರತಿಭಟಿಸಲಾಗಿತ್ತು.
ಇದನ್ನೂ ಓದಿ: ಆರೋಗ್ಯ ಇಲಾಖೆ ವಿರುದ್ಧ 108 ಆಂಬುಲೆನ್ಸ್ ನೌಕರರ ಕಿಡಿ: ಆಗಸ್ಟ್ 1 ರಿಂದ ಮುಷ್ಕರದ ಎಚ್ಚರಿಕೆ
ಇಲ್ಲಿ ನಡೆದ ಹಣ ವಸೂಲಿ ದಂಧೆಯನ್ನ ನಿಲ್ಲಿಸುವಂತೆ ತಹಶಿಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು. ಔರಾದ್ ತಾಲೂಕು ಆಸ್ಪತ್ರೆಗೆ ಅತಿ ಹೆಚ್ಚಾಗಿ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳು ಚಿಕಿತ್ಸೆಗೆಂದು ಆಗಮಿಸುತ್ತಾರೆ. ಹೆಸರಿಗೆಗಾಗಿ ಉಚಿತ ಚಿಕಿತ್ಸೆ ಸಿಗುತ್ತದೆಂದು ದಾಖಲಾಗುತ್ತಾರೆ. ಆದರೆ ಇಲ್ಲಿಗೆ ಬರುವ ರೋಗಿಗಳಿಂದಲೇ ಹಣ ವಸೂಲಿ ಮಾಡಲಾಗುತ್ತಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








