AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತ: ಸ್ಟೆಮಿ ಯೋಜನೆಯ ಸರ್ವೆಯಲ್ಲಿ ಆತಂಕಕಾರಿ ಅಂಶ ಬಯಲು

Stemi Scheme: ಕರ್ನಾಟಕ ಆರೋಗ್ಯ ಇಲಾಖೆ ಸ್ಟೆಮಿ ಯೋಜನೆಯ ಸರ್ವೆಯಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ. ಎದೆನೋವು ಅಂತಾ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಹೃದಯಾಘಾತ ಖಾಯಿಲೆ ಪತ್ತೆಯಾಗಿದೆ.ಇನ್ನು ಏನಿದು ಸ್ಟೆಮಿ ಯೋಜನೆ? ಹೇಗೆ ಸರ್ವೆ? ರಾಜ್ಯದಲ್ಲಿ ಹೃದಯಾಘಾತ ಟ್ರೆಂಡ್ ಹೇಗಿದೆ ಏನು ಎನ್ನುವುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹೃದಯಾಘಾತ: ಸ್ಟೆಮಿ ಯೋಜನೆಯ ಸರ್ವೆಯಲ್ಲಿ ಆತಂಕಕಾರಿ ಅಂಶ ಬಯಲು
Heart Attack
Vinay Kashappanavar
| Updated By: ರಮೇಶ್ ಬಿ. ಜವಳಗೇರಾ|

Updated on: Jul 23, 2025 | 10:07 PM

Share

ಬೆಂಗಳೂರು, (ಜುಲೈ 23): ಕರ್ನಾಟಕದಲ್ಲಿ ಕೊವಿಡ್ (Covid) ಬಳಿಕ ಸಾಲು ಸಾಲು ಹೃದಯಾಘಾತ (Heat Attack) ಪ್ರಕರಣಗಳು ದಾಖಲಾಗುತಿವೆ . ಅದರಲ್ಲೂ ಹಾಸನದಲ್ಲಿನ ಹೃದಯಾಘಾತದ ಟ್ರೆಂಡ್ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಈ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಆರೋಗ್ಯ ಇಲಾಖೆಯ ಸ್ಟೆಮಿ ಯೋಜನೆಯಲ್ಲಿ (Stemi Scheme) ಬಯಲಾಗಿದೆ. ಎದೆ ನೋವು ಎಂದು ತಾಲ್ಲೂಕು ಆಸ್ಫತ್ರೆಗೆ ಬಂದ ಜನರನ್ನ ಟೆಸ್ಟ್ ಮಾಡಿದಾಗ ಹೃದಯಾಘಾತ ಆಗಿರುವುದು ಸಾಕಷ್ಟು ಕೇಸ್ ಪತ್ತೆಯಾಗಿವೆ. ಅಷ್ಟೇ ಅಲ್ಲ ಸಾವಿನ ಪ್ರಮಾಣವು ಆತಂಕ ಮೂಡಿಸಿದೆ.

ಹೃದಯಘಾತದಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಆರೋಗ್ಯ ಇಲಾಖೆ ಜಯದೇವ ಆಸ್ಪತ್ರೆ ಸಹಯೋಗದಡಿ ರಾಜ್ಯದ 75 ತಾಲ್ಲೂಕು ಆಸ್ಫತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿಗೆ ತಂದಿದೆ. ಹೃದಯಾಘಾತವಾದಾಗ ತ್ವರಿತ ಚಿಕಿತ್ಸೆ ನೀಡಲು‌ ಈ ಸ್ಟೆಮಿ ಯೋಜನೆ ತುಂಬಾ ಸಹಕಾರಿಯಾಗುತ್ತಿದೆ. ರೋಗಿಗಳು ಎದೆನೋವು ಅಂತಾ ಬಂದರೆ ಅವರಿಗೆ ಇಸಿಜಿ ಮಾಡಿ ಅದರ ಮಾಹಿತಿಯನ್ನ ಜಯದೇವ ಆಸ್ಫತ್ರೆ ವೈದ್ಯರಿಗೆ ಕಳಿಸುತ್ತಾರೆ. ಬಳಿಕ ಟೆಸ್ಟ್ ಮಾಡಿ ಹೃದಯದಲ್ಲಿ ಸಮಸ್ಯೆ ಏನಿದೆ ಎನ್ನುವುದನ್ನು ತಿಳಿಸುತ್ತಾರೆ. ಆ ರೀತಿ ಎದೆ ನೋವು ಅಂತಾ ತಾಲ್ಲೂಕು ಆಸ್ಫತ್ರೆಗೆ ಬಂದ ಜನರನ್ನ ಟೆಸ್ಟ್ ಮಾಡಿದಾಗ ಹೃದಯಾಘಾತ ಆಗಿರುವುದು ಸಾಕಷ್ಟು ಕೇಸ್ ಪತ್ತೆಯಾಗಿವೆ. ಅಷ್ಟೇ ಅಲ್ಲ ಸಾವಿನ ಪ್ರಮಾಣವು ಆತಂಕ ಮೂಡಿಸಿದೆ.

ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವು: ತಜ್ಞರ ಅಂತಿಮ ವರದಿಯಲ್ಲಿದೆ ಮಹತ್ವದ ಮಾಹಿತಿ

ಸ್ಟೆಮಿ ಯೋಜನೆ ಅಡಿ ಸುಮಾರು 75 ಕ್ಕೂ ಹೆಚ್ಚು ತಾಲ್ಲೂಕು ಆಸ್ಪತ್ರೆಗಳಲ್ಲಿ 2023 ಮಾರ್ಚ್ ನಿಂದ 30 ಜೂನ್ 2025 ರವರೆಗೆ ಸ್ಟೆಮಿ ಜಾರಿ ಇರುವ 75 ತಾಲ್ಲುಕಗಳಲ್ಲಿ 722,305 ಜನರು ಎದೆನೋವು ಎಂದು ಆಸ್ಪತ್ರೆಗೆ ಬಂದಿದ್ದಾರೆ. ಇದರಲ್ಲಿ 7ಲಕ್ಷಕ್ಕೂ ಹೆಚ್ಚು ಜನರಿಗೆ ECG ಮಾಡಲಾಗಿದ್ದು, ಈ ಪೈಕಿ 3,90,797 ಜನರಿಗೆ ಇಸಿಜಿ ಅಬನಾರ್ಮಲ್ ಎಂದು ಕಂಡಬಂದಿದೆ. ಇನ್ನು 6574 ರೋಗಿಗಳಲ್ಲಿ ಹೃದಯಾಘಾತವಾಗಿರುವುದು ಪತ್ತೆಯಾಗಿದೆ. ಹೃದಯಾಘಾತವಾದ 6574 ಪೈಕಿ 5524 ಜನರ ಜೀವವನ್ನ ಸ್ಟೆಮಿ ಯೋಜನೆ ಮೂಲಕ ಉಳಿಸಲಾಗಿದದ್ದು, ಇನ್ನುಳಿದ 1050 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ.

ಏನಿದು ಸ್ಟೆಮಿ ಯೋಜನೆ?

ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಹಬ್ ಅ್ಯಂಡ್ ಸ್ಪೋಕ್ ಮಾಡಲ್ ಇದ್ದು, ಇದರ ಅಡಿಯಲ್ಲಿ ಸ್ಟೆಮಿ ಯೋಜನೆ ಜಾರಿ ಮಾಡಲಾಗಿದೆ. ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಯೋಜನೆ ಇದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಡಿ ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಸರ್ಕಾರ ಸ್ಟೆಮಿ ಯೋಜನೆಯನ್ನು ಜಾರಿಗೆ ತಂದಿದೆ.

ತುರ್ತು ಚಿಕಿತ್ಸಾ ವಿಭಾಗದಲ್ಲಿ ಹೃದಯಾಘಾತಕ್ಕೆ ತ್ವರಿತ ಚಿಕಿತ್ಸೆಗೆ ಸ್ಟೆಮಿ ಸಹಾಯಕವಾಗಲಿದೆ. ರೋಗಿಗಳು ಎದೆನೋವು ಎಂದು ಆಸ್ಪತ್ರೆಗೆ ಬಂದಾಗ ಅವರಿಗೆ ಮೊದಲು ಇಸಿಜಿ ಮಾಡಿ ಮಾಹಿತಿಯನ್ನು ಜಯದೇವ ಹೃದ್ರೋಗ ಹಬ್‌ಗೆ ರವಾನಿಸಲಾಗುತ್ತದೆ. ಅಲ್ಲಿನ ನುರಿತ ವೈದ್ಯರು ಕಾಯಿಲೆ ಗುರುತಿಸಿ ಚಿಕಿತ್ಸೆ ಕುರಿತು ತಾಲೂಕು ಆಸ್ಪತ್ರೆ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.

ಒಟ್ಟಿನಲ್ಲಿ ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನ ತ್ವರಿತ ಗತಿಯಲ್ಲಿ ಕಂಟ್ರೋಲ್ ಗೆ ಆರೋಗ್ಯ ಇಲಾಖೆ ಮುಂದಾಗಿದೆ. ಇಸಿಜಿ ಮಾಡಿ ಹೃದಯದ ಸಮಸ್ಯೆ ಪತ್ತೆ ಬೆನ್ನಲ್ಲೇ ಟ್ರೀಟ್ ಮೆಂಟ್ ಶುರು ಮಾಡಿ ಹೃದಯಾಘಾತದಿಂದ ಸಾವನ್ನಪ್ಪುವವರನ್ನ ವೈದ್ಯರು ಬದುಕಿಸಿದ್ದಾರೆ. ಈ ಸ್ಟೆಮಿ ಯೋಜನೆ 75 ತಾಲ್ಲೂಕುಗಳಲ್ಲಿ ಮಾತ್ರ ಸದ್ಯ ಇದ್ದು ಈ ಯೋಜನೆಯನ್ನ ಸರ್ಕಾರ ಮತ್ತಷ್ಟು ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಲ್ಲಿ ತುರ್ತು ಜಾರಿ ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಬಿಹಾರದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದೇಕೆ? ಡಿಕೆಶಿ ಅಚ್ಚರಿಯ ಹೇಳಿಕೆ
ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದೇಕೆ? ಡಿಕೆಶಿ ಅಚ್ಚರಿಯ ಹೇಳಿಕೆ
ಸರ್ಕಾರೀ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ: ಸುರೇಶ್ ಕುಮಾರ್
ಸರ್ಕಾರೀ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ: ಸುರೇಶ್ ಕುಮಾರ್
ಸೇತುವೆ ಇಕ್ಕೆಲಗಳಲ್ಲಿ ರಸ್ತೆ ಸಂಚಾರ ಬಂದ್, ಶಾಲಾ ಮಕ್ಕಳಿಗೆ ಸಮಸ್ಯೆ
ಸೇತುವೆ ಇಕ್ಕೆಲಗಳಲ್ಲಿ ರಸ್ತೆ ಸಂಚಾರ ಬಂದ್, ಶಾಲಾ ಮಕ್ಕಳಿಗೆ ಸಮಸ್ಯೆ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಗೇಮಿಂಗ್​ ಆ್ಯಪ್​ಗಳಿಗೆ ಹಣ ವರ್ಗಾವಣೆ? ಕೈ​ ಶಾಸಕನ ಮನೆ ಮೇಲೆ ಇಡಿ ದಾಳಿ
ಗೇಮಿಂಗ್​ ಆ್ಯಪ್​ಗಳಿಗೆ ಹಣ ವರ್ಗಾವಣೆ? ಕೈ​ ಶಾಸಕನ ಮನೆ ಮೇಲೆ ಇಡಿ ದಾಳಿ
Video: ಮಹಿಳೆಯನ್ನು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದ ಸಾಕು ನಾಯಿಗಳು
Video: ಮಹಿಳೆಯನ್ನು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದ ಸಾಕು ನಾಯಿಗಳು
Daily Devotional: ಕವಡೆ ಇಟ್ಟುಕೊಳ್ಳುವುದರಿಂದ ಏನೇನು ಲಾಭ ತಿಳಿಯಿರಿ
Daily Devotional: ಕವಡೆ ಇಟ್ಟುಕೊಳ್ಳುವುದರಿಂದ ಏನೇನು ಲಾಭ ತಿಳಿಯಿರಿ