AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು; ತಪ್ಪಿದ ಭಾರೀ ದುರಂತ

ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು; ತಪ್ಪಿದ ಭಾರೀ ದುರಂತ

ಸುಷ್ಮಾ ಚಕ್ರೆ
|

Updated on: Aug 01, 2025 | 10:07 PM

Share

ಪಂಕಿ ನಿಲ್ದಾಣದಿಂದ ಭೌಲ್‌ಪುರದ ಕಡೆಗೆ ಹೋಗುತ್ತಿದ್ದ ಸಬರಮತಿ ಜನಸಾಧಾರಣ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 15269) ಹಳಿ ತಪ್ಪಿದೆ. ರೈಲು ಮಾರ್ಗ ಸಂಖ್ಯೆ 4ಕ್ಕೆ ಪ್ರವೇಶಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಅಥವಾ ಗಾಯಗಳ ವರದಿಯಾಗಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ರೈಲ್ವೆ ಅಧಿಕಾರಿಗಳು ಮತ್ತು ಪರಿಹಾರ ತಂಡಗಳು ಸ್ಥಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ರೈಲಿನ ಕೊನೆಯ ಎರಡು ಬೋಗಿಗಳು ಇಂದು ಸಂಜೆ 4.20ರ ಸುಮಾರಿಗೆ ಹಳಿ ತಪ್ಪಿದವು. ಈ ಸ್ಥಳದಿಂದ ಬೋಗಿಗಳನ್ನು ತೆರವುಗೊಳಿಸಲಾಗುತ್ತಿದೆ ಮತ್ತು ಹಳಿಗಳನ್ನು ಪುನಃಸ್ಥಾಪಿಸಲಾಗುತ್ತಿದೆ.

ನವದೆಹಲಿ, ಆಗಸ್ಟ್ 1: ಇಂದು ಪಂಕಿ ನಿಲ್ದಾಣದಿಂದ ಭೌಲ್‌ಪುರದ ಕಡೆಗೆ ಹೋಗುತ್ತಿದ್ದ ಸಬರಮತಿ (Sabarmati Express) ಜನಸಾಧಾರಣ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 15269) ಹಳಿ ತಪ್ಪಿದೆ. ರೈಲು ಮಾರ್ಗ ಸಂಖ್ಯೆ 4ಕ್ಕೆ ಪ್ರವೇಶಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಅಥವಾ ಗಾಯಗಳ ವರದಿಯಾಗಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ರೈಲ್ವೆ ಅಧಿಕಾರಿಗಳು ಮತ್ತು ಪರಿಹಾರ ತಂಡಗಳು ಸ್ಥಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ರೈಲಿನ ಕೊನೆಯ ಎರಡು ಬೋಗಿಗಳು ಇಂದು ಸಂಜೆ 4.20ರ ಸುಮಾರಿಗೆ ಹಳಿ ತಪ್ಪಿದವು. ಈ ಸ್ಥಳದಿಂದ ಬೋಗಿಗಳನ್ನು ತೆರವುಗೊಳಿಸಲಾಗುತ್ತಿದೆ ಮತ್ತು ಹಳಿಗಳನ್ನು ಪುನಃಸ್ಥಾಪಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ