ಪೇಡಾ ನಗರದಲ್ಲಿ ಸ್ತ್ರೀಯರ ಭುಜಬಲದ ಪರಾಕ್ರಮ, ಅಖಾಡದಲ್ಲಿ ಮಹಿಳಾಮಣಿಗಳ ಪಟ್ಟು

|

Updated on: Feb 24, 2020 | 8:28 PM

ಧಾರವಾಡ: ಮುಟ್ಟಿದ್ರೆ ಕಲ್ಲಿನಂತ ಮೈಕಟ್ಟು. ಉಕ್ಕಿನಂತೆ ಹುರಿಗೊಳಿಸಿರೋ ತೋಳು. ಮೈತುಂಬಾ ಮದಗಜದಂಥ ತಾಕತ್ತು. ತೊಡೆತಟ್ಟಿ ಅಖಾಡಕ್ಕಿಳಿದ್ರು ಅಂದ್ರೆ ಹಾಕೋ ಒಂದೊಂದು ಪಟ್ಟು ಕೂಡ ನೋಡುಗರನ್ನ ತುದಿಗಾಲಲ್ಲಿ ನಿಲ್ಲಿಸ್ಬೇಕು. ಇವ್ರ ಖದರ್​ ನೋಡಿ ಜನ ಕುಂತಲ್ಲೇ ಶಿಳ್ಳೆ, ಕೇಕೆ ಹಾಕ್ಬೇಕು. ಅಖಾಡದಲ್ಲಿ ಧೂಳೆಬ್ಬಿಸ್ತಿರೋ ಜಗಜಟ್ಟಿಗಳು. ಎದುರಾಳಿಯನ್ನ ಮಣ್ಣು ಮುಕ್ಕಿಸೋಕೆ ಮಹಿಳಾ ಮಣಿಗಳ ಡಿಫರೆಂಟ್ ಡಿಫರೆಂಟ್ ಪಟ್ಟು. ಕಣದಲ್ಲಿ ಖದರ್ ತೋರಿಸ್ತಿರೋ ಲೇಡಿಸ್​. ಲೈವ್​ ಫೈಟ್​ ನೋಡ್ತಾ ಜನರಿಂದ ಶಿಳ್ಳೆ. ಚಪ್ಪಾಳೆ. ಕೇಕೆ. ಕುಸ್ತಿಗಿರೋ ಪವರೇಽ ಅಂಥಾದ್ದು.. ಅಲ್ಲೇನಿದ್ರೂ ತಾಕತ್ತಿದ್ದೋನಿಗಷ್ಟೇ […]

ಪೇಡಾ ನಗರದಲ್ಲಿ ಸ್ತ್ರೀಯರ ಭುಜಬಲದ ಪರಾಕ್ರಮ, ಅಖಾಡದಲ್ಲಿ ಮಹಿಳಾಮಣಿಗಳ ಪಟ್ಟು
Follow us on

ಧಾರವಾಡ: ಮುಟ್ಟಿದ್ರೆ ಕಲ್ಲಿನಂತ ಮೈಕಟ್ಟು. ಉಕ್ಕಿನಂತೆ ಹುರಿಗೊಳಿಸಿರೋ ತೋಳು. ಮೈತುಂಬಾ ಮದಗಜದಂಥ ತಾಕತ್ತು. ತೊಡೆತಟ್ಟಿ ಅಖಾಡಕ್ಕಿಳಿದ್ರು ಅಂದ್ರೆ ಹಾಕೋ ಒಂದೊಂದು ಪಟ್ಟು ಕೂಡ ನೋಡುಗರನ್ನ ತುದಿಗಾಲಲ್ಲಿ ನಿಲ್ಲಿಸ್ಬೇಕು. ಇವ್ರ ಖದರ್​ ನೋಡಿ ಜನ ಕುಂತಲ್ಲೇ ಶಿಳ್ಳೆ, ಕೇಕೆ ಹಾಕ್ಬೇಕು.

ಅಖಾಡದಲ್ಲಿ ಧೂಳೆಬ್ಬಿಸ್ತಿರೋ ಜಗಜಟ್ಟಿಗಳು. ಎದುರಾಳಿಯನ್ನ ಮಣ್ಣು ಮುಕ್ಕಿಸೋಕೆ ಮಹಿಳಾ ಮಣಿಗಳ ಡಿಫರೆಂಟ್ ಡಿಫರೆಂಟ್ ಪಟ್ಟು. ಕಣದಲ್ಲಿ ಖದರ್ ತೋರಿಸ್ತಿರೋ ಲೇಡಿಸ್​. ಲೈವ್​ ಫೈಟ್​ ನೋಡ್ತಾ ಜನರಿಂದ ಶಿಳ್ಳೆ. ಚಪ್ಪಾಳೆ. ಕೇಕೆ.

ಕುಸ್ತಿಗಿರೋ ಪವರೇಽ ಅಂಥಾದ್ದು.. ಅಲ್ಲೇನಿದ್ರೂ ತಾಕತ್ತಿದ್ದೋನಿಗಷ್ಟೇ ಗೆದ್ದು ಬೀಗೋ ಅವಕಾಶ. ಧಾರವಾಡ ನಗರದ ಕೆಸಿಡಿ ಮೈದಾನದಲ್ಲಿ 2ನೇ ದಿನವೂ ಕುಸ್ತಿ ಅಖಾಡ ರಂಗೇರಿತ್ತು. ರಣಕಣದಲ್ಲಿ ಮಹಿಳಾ ಜೋಡಿ ತಮ್ಮದೇ ಪಟ್ಟು ಹಾಕಿ ಶಕ್ತಿಪ್ರದರ್ಶಿಸಿದ್ರು. ಎದರುರಾಳಿಯನ್ನ ತೋಳ್ಬಲದ ಮೂಲಕ ಅಲ್ಲೇ ಮಣ್ಣು ಮುಕ್ಕಿಸಿದ್ರು. ನಾನಾ ನೀನಾ ಅಂತಾ ಪಟ್ಟಿನ ಮೇಲೆ ಪಟ್ಟು ಹಾಕಿದ್ರು. ಮಹಿಳಾ ಮಣಿಗಳ ಕಾದಾಟ ಕಂಡು ಜನ್ರು ಖುಷಿ ಪಟ್ಟಿದ್ದೇ ಪಟ್ಟಿದ್ದು.

ಇನ್ನು, ಕುಸ್ತಿ ಹಬ್ಬದಲ್ಲಿ ಸುಮಾರು 1100 ಕ್ಕೂ ಹೆಚ್ಚು ಜಗಜಟ್ಟಿಗಳು ಭಾಗವಹಿಸಿದ್ರು. 86 ಕೆಜಿ ಪುರುಷರ ವಿಭಾಗದಲ್ಲಿ ನಡೆದ ಕುಸ್ತಿಯಲ್ಲಿ ಕಲಿಗಳು ಮದಗಜಗಳಂತೆ ಕಾದಾಡಿದ್ರು. ಜಯದ ನಗಾರಿ ಬಾರಿಸೋಕೆ ಭುಜಬಲದ ಜೊತೆ ನಾನಾ ಪಟ್ಟು ಹಾಕಿದ್ರು. ನಾಳೆ ಸಂಜೆ ವೇಳೆಗೆ ಅಖಾಡದಲ್ಲಿ ಅಬ್ಬರಿಸಿದ ಬಲಭೀಮರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಎಲ್ಲರಿಗೂ ಸಿಕ್ಕಾಪಟ್ಟೆ ಎಂಜಾಯ್​​ಮೆಂಟ್ ನೀಡಿದೆ.

 

 

Published On - 8:26 pm, Mon, 24 February 20