Hubballi Power Cut: ನಾಳೆ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಡಿತ

| Updated By: Rakesh Nayak Manchi

Updated on: Jul 13, 2023 | 7:33 PM

ಕಿಮ್ಸ್ ವಿದ್ಯುತ್ ವಿತರಣಾ ಉಪಕೇಂದ್ರದ ವ್ಯಾಪ್ತಿಯಲ್ಲಿ ಜುಲೈ 14ರಂದು ನಿರ್ವಹಣಾ ಕಾರ್ಯ ನಡೆಯಲಿದೆ. ಹೀಗಾಗಿ ಹುಬ್ಬಳ್ಳಿಯ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Hubballi Power Cut: ನಾಳೆ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಡಿತ
ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಡಿತ (ಸಾಂದರ್ಭಿಕ ಚಿತ್ರ)
Follow us on

ಹುಬ್ಬಳ್ಳಿ: ಕಿಮ್ಸ್ ವಿದ್ಯುತ್ ವಿತರಣಾ ಉಪಕೇಂದ್ರದ (33/11 ಕೆ.ವಿ.) ವ್ಯಾಪ್ತಿಯಲ್ಲಿ ನಾಳೆ (ಜುಲೈ 14) ನಿರ್ವಹಣಾ ಕಾರ್ಯ ನಡೆಯಲಿರುವ ಹಿನ್ನೆಲೆ ಹುಬ್ಬಳ್ಳಿಯ (Hubballi) ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸ್ಥಗಿತವಾಗಲಿದೆ. ಅದರಂತೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ಗ್ರಾಹಕರು ಪವರ್ ಕಟ್ ಎದುರಿಸಲಿದ್ದಾರೆ.

ಭವಾನಿ ನಗರ, ಕಾಡಸಿದ್ದೇಶ್ವರ ಕಾಲೊನಿ, ದಯಾನಂದ ಕಾಲೊನಿ, ಆಕೃತಿ ಗಾರ್ಡನ್, ತಳವಾರ್ ಓಣಿ, ಬಾರಾಕೋಟ್ರಿ, ಗುಜರಾತ ಭವನ, ಸವಾಯಿ ಗಂಧರ್ವ ಹಾಲ್, ಪೈ ಹೋಟೆಲ್, ದೇಶಪಾಂಡೆ ನಗರ, ನ್ಯೂ ಕಾಟನ್ ಮಾರ್ಕೆಟ್, ಹೊಸೂ‌ ಜೈನ್ ಮಂದಿರ, ಸ್ವಿಮಿಂಗ್ ಪೂಲ್ ಕಾಂಪ್ಲೆಕ್ಸ್, ಪಿ.ಬಿ. ರಸ್ತೆ, ಹೊಸೂರ್, ಕ್ಲಬ್ ರಸ್ತೆ, ವಾಮನ ರಸ್ತೆ, ಕೋರ್ಟ್ ವೃತ್ತ, ರಾಣಿ ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣದ ಎದುರು, ನೀಲಿಜನ್ ರಸ್ತೆ, ಬೈಲಪ್ಪನವರ ನಗರ, ಕುಂಭಕೋನಂ ಪ್ಲಾಟ್, ಕೇಶ್ವಾಪುರ ಕಾನ್ವೆಂಟ್ ಸ್ಕೂಲ್ ಹಾಗು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಗಿತವಾಗಲಿದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ನಾನೇ ಡಾನ್ ಎಂದು ರೀಲ್ಸ್ ಮಾಡುತ್ತಿದ್ದ ಯುವಕನ ಅಪಹರಣ, ಬೆತ್ತಲೆ ಮಾಡಿ ಹಲ್ಲೆ

ಕಿಮ್ಸ್ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಯಲಿರುವ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಉಪಕೇಂದ್ರವು ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ