ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರ; ಜುಲೈ 18 ರಿಂದ ಸಹಿ ಅಭಿಯಾನ ಆರಂಭಿಸುತ್ತೇವೆಂದ ಪ್ರಮೋದ್ ಮುತಾಲಿಕ್
ಇಂದು(ಜು.14) ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರವಾಗಿ ಮಾತನಾಡಿದ ಅವರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ‘ಸಮಾನ ನಾಗರಿಕ ಸಂಹಿತೆಗೆ ನಾವು ಬೆಂಬಲ ಸೂಚಿಸುತ್ತೇವೆ, ಇದು ಜಾರಿಗೆ ಬರಬೇಕು. ಇದಕ್ಕಾಗಿ ಜುಲೈ 18ರಿಂದ ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ಆರಂಭಿಸುತ್ತೇವೆ ಎಂದರು.
ಧಾರವಾಡ, ಜು.14: ಇಂದು(ಜು.14) ಏಕರೂಪ ನಾಗರಿಕ ಸಂಹಿತೆ(Uniform Civil Code) ಜಾರಿ ವಿಚಾರವಾಗಿ ಮಾತನಾಡಿದ ಅವರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ‘ಸಮಾನ ನಾಗರಿಕ ಸಂಹಿತೆಗೆ ನಾವು ಬೆಂಬಲ ಸೂಚಿಸುತ್ತೇವೆ, ಇದು ಜಾರಿಗೆ ಬರಬೇಕು. ಇದಕ್ಕಾಗಿ ಜುಲೈ 18ರಿಂದ ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ಆರಂಭಿಸುತ್ತೇವೆ. 5 ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ಇದಕ್ಕೆ ಸ್ವಾಮೀಜಿ, ವಕೀಲರು, ವೈದ್ಯರು ಸೇರಿ ಅನೇಕ ಗಣ್ಯ ನಾಗರಿಕರಿಂದ ಉದ್ಘಾಟನೆ ಮಾಡಲಾಗುವುದು ಎಂದರು.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಸಂವಿಧಾನದ 44ನೇ ಕಲಂ ಸಮಾನತೆ ಕಾನೂನು ಉಲ್ಲೇಖ ಮಾಡುತ್ತದೆ. 72 ವರ್ಷವಾದರೂ ಸಮಾನ ಕಾನೂನು ಬಂದಿಲ್ಲ. ಇದಕ್ಕೆಲ್ಲ ಕಾಂಗ್ರೆಸ್ನ ಮುಸ್ಲಿಂ ತುಷ್ಠೀಕರವೇ ಕಾರಣವಾಗಿದೆ. ಸುಮಾರು 20 ವರ್ಷಗಳಿಂದ ಹೈಕೋರ್ಟ್, ಸುಪ್ರಿಂಕೋರ್ಟ್ ಸಹ ಇದರ ಜಾರಿ ಬಗ್ಗೆ ಹೇಳುತ್ತ ಬಂದಿವೆ, ಯಾವ ದೇಶದಲ್ಲಿಯೂ ಎರಡು ಕಾನೂನು ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಎರಡು ರೀತಿಯ ಕಾನೂನು ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ:PM Modi France Visit: ಭಾರತದ ಪ್ರಧಾನಿಗೆ ಫ್ರಾನ್ಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ, ಮೋದಿಗೆ ಮತ್ತೊಂದು ಗರಿ
ಶಹಬಾನು ಕೇಸ್‌ನಲ್ಲಿಯೂ ಕೋರ್ಟ್ ಈ ಬಗ್ಗೆ ಹೇಳಿದೆ
ಇವತ್ತು ಇಡೀ ದೇಶದಲ್ಲಿ ಈ ಕಾನೂನಿನ ಬಗ್ಗೆ ಸಕಾರಾತ್ಮಕ ಚರ್ಚೆ ಶುರುವಾಗಿದೆ. ಇದು ಒಳ್ಳೆಯ ಬೆಳವಣಿಗೆ, ಶಹಬಾನು ಕೇಸ್‌ನಲ್ಲಿಯೂ ಕೋರ್ಟ್ ಈ ಬಗ್ಗೆ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಆಕೆಗೆ ಜೀವನಾಂಶ ಕೊಡುವ ತೀರ್ಪು ನೀಡಿತ್ತು. ಆಗ ಇಡೀ ಮುಸ್ಲಿಂರು ತೀರ್ಪಿನ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಆಗ ರಾಜೀವ ಗಾಂಧಿ ಮುಸ್ಲಿಂರಿಗೆ ಅನುಕೂಲವಾಗುವ ಕಾನೂನು ಪಾಸು ಮಾಡಿದ್ದರು. ಷರಿಯಾ ಕಾನೂನು ಪ್ರಕಾರ ಜೀವನಾಂಶ ಸಾಧ್ಯವಿಲ್ಲ ಅಂತಾ ಕಾನೂನು ಮಾಡಿದರು. ಆಗ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಗಳನ್ನು ಓಲೈಸುವ ಕಾರ್ಯವನ್ನೂ ರಾಜೀವ ಗಾಂಧಿ ಮಾಡಿದ್ದರು, ಈ ಕಾರಣಕ್ಕಾಗಿ ರಾಮಜನ್ಮಭೂಮಿ ಮಂದಿರದ ಶಿಲಾನ್ಯಾಸಕ್ಕೆ ಅವಕಾಶ ಕೊಟ್ಟಿದ್ದರು ಎಂದರು.
ಇವತ್ತು ಅಸಮಾನತೆ ಎದ್ದು ಕಾಣುತ್ತಿದೆ. ಈ ಏಕರೂಪ ನಾಗರಿಕ ಸಂಹಿತೆ ಎಲ್ಲರೂ ಒಪ್ಪಬೇಕು. ಈಗಾಗಲೇ ಎಎಪಿ ಮತ್ತು ಮಾಯಾವತಿ ಅವರು ಇದಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಉಳಿದ ಪಕ್ಷಗಳು ಬೆಂಬಲಿಸಿಲ್ಲ. ಅವರೆಲ್ಲರೂ ಮುಸ್ಲಿಂ ತುಷ್ಠೀಕರಣಕ್ಕಾಗಿಯೇ ಬೆಂಬಲ ನೀಡುತ್ತಿಲ್ಲ. ಜೊತೆಗೆ ತಮ್ಮ ಹಿಡಿತದಲ್ಲಿ ಮುಸ್ಲಿಂ ಸಮಾಜ ಇರಬೇಕೆಂದು ಮುಸ್ಲಿಂ ಧರ್ಮ ಗುರುಗಳು ಇದಕ್ಕೆ ವಿರೋಧಿಸುತ್ತಿದ್ದಾರೆ. ಇವರಿಗೆ ಸ್ವಾತಂತ್ರ್ಯ, ಸಮಾನತೆ ಬೇಡವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಅಭಿಪ್ರಾಯ ಸಂಗ್ರಹ, ಇಂದು ಸಂಸದೀಯ ಸ್ಥಾಯಿ ಸಮಿತಿ ಸಭೆ
ಮುಸ್ಲಿಂ ಧರ್ಮಗುರುಗಳಿಗೆ ಪ್ರಶ್ನಿಸಿದ ಮುತಾಲಿಕ್
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಧರ್ಮಗುರುಗಳಿಗೆ ನನ್ನದೊಂದು ಪ್ರಶ್ನೆ ‘ ಷರಿಯಾ ಕಾನೂನು ಮುಖ್ಯ ಅಂತಾ ಇವರು ಹೇಳುತ್ತಾರೆ, ಷರಿಯಾ ಕಾನೂನು ಒಪ್ಪುವುದಾದರೆ ಸಂಪೂರ್ಣ ಒಪ್ಪಬೇಕು. ಷರಿಯಾ ಕಾನೂನಿನಲ್ಲಿ ಕಳ್ಳತನ ಮಾಡಿದರೆ ಕೈ ಕತ್ತರಿಸಬೇಕೆಂದು ಇದೆ. ಕೈ ಕತ್ತರಿಸುತ್ತೀರಾ?, ಅತ್ಯಾಚಾರ ಮಾಡಿದರೆ ಕಲ್ಲು ಎಸೆದು ಕೊಲ್ಲಬೇಕೆಂದು ಇದೆ, ಅದನ್ನು ಆಚರಣೆಗೆ ತರುತ್ತೀರಾ?. ಬ್ಯಾಂಕ್ ವ್ಯವಸ್ಥೆ ಇಲ್ಲ, ರಕ್ತ ಕೊಡುವುದು ಇಲ್ಲ. ಆದರೆ, ಇದು ಯಾವುದು ಇವರಿಗೆ ಬೇಕಿಲ್ಲ. ತಮಗೆ ಹೇಗೆ ಬೇಕೋ ಹಾಗೆ ಷರಿಯಾ ಬಳಸುತ್ತಿದ್ದಾರೆ. ಸಿನಿಮಾ, ಟಿವಿ, ಮೊಬೈಲ್ ಯಾವುದನ್ನೂ ಷರಿಯಾದಲ್ಲಿ ಬಳಕೆಗೆ ಇಲ್ಲ. ಮಹಿಳೆಯರು ಡ್ರೈವಿಂಗ್ ಮಾಡುವಂತಿಲ್ಲ. ಬ್ಯೂಟಿ ಪಾರ್ಲರ್‌ಗೆ ಹೋಗುವಂತಿಲ್ಲ. ಆಸ್ತಿ ಉತ್ತರಾಧಿಕಾರಿಯಲ್ಲಿ ಮಹಿಳೆಯರ ಪಾತ್ರ ಇಲ್ಲ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆಯಿಂದ ಮುಸ್ಲಿಂರಿಗೆ ಲಾಭ ಇದೆ ಎಂದು ಹೇಳಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Fri, 14 July 23