Hubballi: ಕೇವಲ ವಿರೋಧ ಪಕ್ಷ ನಾಯಕನಾಗಲು ಕುಮಾರಸ್ವಾಮಿ ಬಿಜೆಪಿ ಸೇರುತ್ತಾರೆಯೇ? ಗೊತ್ತಿಲ್ಲವೆಂದರು ಕಾರ್ಮಿಕ ಸಚಿವ ಸಂತೋಷ್ ಲಾಡ್!

Hubballi: ಕೇವಲ ವಿರೋಧ ಪಕ್ಷ ನಾಯಕನಾಗಲು ಕುಮಾರಸ್ವಾಮಿ ಬಿಜೆಪಿ ಸೇರುತ್ತಾರೆಯೇ? ಗೊತ್ತಿಲ್ಲವೆಂದರು ಕಾರ್ಮಿಕ ಸಚಿವ ಸಂತೋಷ್ ಲಾಡ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 11:30 AM

ಒಂದು ಮೂಲದ ಪ್ರಕಾರ ಒಂಭತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ. ಅದು ಕುಮಾರಸ್ವಾಮಿಗೆ ಗೊತ್ತಿಲ್ಲದಿಲ್ಲ

ಹುಬ್ಬಳ್ಳಿ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ, ಒಲವಿದೆ ಅಂತ ಕಳೆದ ಕೆಲದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಆದರೆ ಅದು ನಿಜವೇ ಅಥವಾ ಹಾಗಾಗೋದಿಕ್ಕೆ ಸಾಧ್ಯವೇ? ಅಂತ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರನ್ನು ಸುದ್ದಿಗಾರರು ಕೇಳಿದರೆ, ಅದರ ಬಗ್ಗೆ ತಮಗೇನೂ ಮಾಹಿತಿ ಇಲ್ಲ ಅನ್ನುತ್ತಾರೆ. ಗಮನಿಸಬೇಕಿರುವ ಸಂಗತಿಯೆಂದರೆ, ವಿರೋಧ ಪಕ್ಷ ನಾಯಕನಾಗಲು ಕುಮಾರಸ್ವಾಮಿ ಬಿಜೆಪಿ ಸೇರುತ್ತಾರಂತೆ! ರಾಜ್ಯದಲ್ಲಿ ಬಿಜೆಪಿ ಅಷ್ಟು ಬರಗೆಟ್ಟು ಹೋಗಿದೆಯೇ? ಅದಕ್ಕೂ ಗಮನಾರ್ಹ ಸಂಗತಿಯೆಂದರೆ ಹೊಸ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದರೂ ಬಿಜೆಪಿ ಹೈಕಮಾಂಡ್ ಲೀಡರ್ ಅಫ್ ಅಪೋಸಿಷನ್ (Leader of Opposition) ಆಯ್ಕೆ ಮಾಡಿಲ್ಲ. ಆರ್ ಅಶೋಕ, ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ ಬೊಮ್ಮಾಯಿ ಮೊದಲಾದ ಸಮರ್ಥ ನಾಯಕರು ಬಿಜೆಪಿ ಪಾಳೆಯದಲ್ಲಿದ್ದರೂ ಕುಮಾರಸ್ವಾಮಿಗೆ ಮಣೆ ಹಾಕಬೇಕಿದೆಯೇ? ಅಥವಾ ಜೆಡಿಎಸ್ ಪಕ್ಷದ ಅಸ್ತಿತ್ವ ಉಳಿಯುವ ಬಗ್ಗೆ ಕುಮಾರಸ್ವಾನುಯವರಲ್ಲಿ ಶಂಕೆ ಶುರುವಾಗಿದೆಯೇ? ಒಂದು ಮೂಲದ ಪ್ರಕಾರ ಒಂಭತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ. ಅದು ಕುಮಾರಸ್ವಾಮಿಗೆ ಗೊತ್ತಿಲ್ಲದಿಲ್ಲ. ಹಾಗೆ ಆಗಿದ್ದೇಯಾದರೆ, ಕುಮಾರಸ್ವಾಮಿ ಜೊತೆ ಅವರು ಸೇರಿದಂತೆ ಕೇವಲ 10 ಶಾಸಕರು ಉಳಿದುಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ