Budget session: ಹಳೆ ದೋಸ್ತಿ ಚೆಲುವರಾಯಸ್ವಾಮಿ-ಹೆಚ್ ಡಿ ಕುಮಾರಸ್ವಾಮಿ ಹೊಸ ದುಶ್ಮನ್ ಗಳಾಗಿ ಸದನದಲ್ಲಿ ಕಾದಾಡಿದ್ದು ರೋಚಕ!
ಕುಮಾರಸ್ವಾಮಿ ಆರೋಪಗಳಿಗೆ ಸಿಡಿದೆದ್ದ ಸಚಿವರು ಅವರ ವಿಷಯದಲ್ಲಿ ಹಿಂದೆ ನಡೆದಿದ್ದನ್ನು ಕೆದಕಲಾರಂಭಸುತ್ತಾರೆ.
ಬೆಂಗಳೂರು: ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (N Cheluvarayaswamy) ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯ ಆಗಿದ್ದವರು, ಒಂದೇ ತಟ್ಟೆಯಲ್ಲಿ ಊಟ ಮಾಡಿದವರು; ಆದರೆ ಈಗ ಬದ್ಧ ವೈರಿಗಳಂತೆ ಆಡುತ್ತಿದ್ದಾರೆ. ನಾಗಮಂಗಲದ ಕೆಎಸ್ ಆರ್ ಟಿ ಸಿ ಡ್ರೈವರ (kSRTC bus driver) ಆತ್ಮಹತ್ಯೆ ಪ್ರಕರಣದಲ್ಲಿ ಚೆಲುವರಾಯಸ್ವಾಮಿ ಹೆಸರು ತೇಲಿ ಬಂದಿರುವುದರಿಂದ ಅವರು ರಾಜೀನಾಮೆ ನೀಡಬೇಕೆಂದು ಇಂದು ಸದನದಲ್ಲಿ ಕುಮಾರಸ್ವಾಮಿ ಆಗ್ರಹಿಸಿದರು. ಅವರ ಆರೋಪಗಳಿಗೆ ಸಿಡಿದೆದ್ದ ಸಚಿವರು ಕುಮಾರಸ್ವಾಮಿ ವಿಷಯದಲ್ಲಿ ಹಿಂದೆ ನಡೆದಿದ್ದನ್ನು ಕೆದಕಲಾರಂಭಿಸಿದರು. ಕುಮಾರಸ್ವಾಮಿ ನೆರವಿಗೆ ಬಂದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಜೊತೆಯಲ್ಲಿದ್ದಾಗ ಒಟ್ಟಿಗೆ ಸರಿ ಏನೇನೆಲ್ಲ ಮಾಡಿರುತ್ತೇವೆ, ನಿಮ್ಮದು ಅವರಿಗೆ ಗೊತ್ತಿರುತ್ತದೆ ಮತ್ತು ಅವರದ್ದು ನಿಮಗೆ, ಹಾಗಾಗಿ ಸದನದಲ್ಲಿ ಹಿಂದಿನ ಇತಿಹಾಸ ನೆನೆಯುವುದು ಬೇಡ ಅಂತ ಚಲುವರಾಯಸ್ವಾಮಿಗೆ ಹೇಳುತ್ತಾರೆ. ಕುಮಾರಸ್ವಾಮಿ ಎದ್ದು ನಿಂತಾಗ ಪುನಃ ಅವರ ಮತ್ತು ಸಚಿವರ ನಡುವೆ ಮಾತಿನ ಚಕಮಕಿ ಶುರುವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ