HD Kumaraswamy; ಚಲುವರಾಯಸ್ವಾಮಿ ಹೇಳಿದ್ದು ಕೇಳಿಸಿಕೊಂಡಿದ್ದೇನೆ, ಕಾಂಗ್ರೆಸ್ ಪಕ್ಷದ ನಿಜಬಣ್ಣ ಬಯಲಾಗುತ್ತಿದೆ: ಹೆಚ್ ಡಿ ಕುಮಾರಸ್ವಾಮಿ, ಶಾಸಕ
ಇನ್ನೂ ಯಾವ್ಯಾವ ಸಂಗತಿಗಳು ಬಯಲಿಗೆ ಬರಲಿವೆಯೋ ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ (Cheluvarayaswamy) ಯಾರೊಂದಿಗೆ ಮಾತಾಡುವಾಗ ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಗಳು ಚೀಪ್ ಪಾಪ್ಯುಲಾರಿಟಿಗೋಸ್ಕರ (cheap popularity) ಅಂತ ಹೇಳಿದ್ದು ವೈರಲ್ ಆಗಿದ್ದು, ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಪ್ರತಿಕ್ರಿಯೆ ನೀಡುತ್ತಾ ಕಾಂಗ್ರೆಸ್ ಪಕ್ಷದ ನಿಜಬಣ್ಣ ಕ್ರಮೇಣ ಬಯಲಾಗುತ್ತಿದೆ ಎಂದಿದ್ದಾರೆ. ಚಲುವರಾಯಸ್ವಾಮಿ ಆಡಿದ ಮಾತನ್ನು ಕೇಳಿಸಿಕೊಂಡಿರುವುದಾಗಿ ಹೇಳಿದ ಕುಮಾರಸ್ವಾಮಿ, ಗ್ಯಾರಂಟಿ ಈಡೇರಿಸುವ ನೆಪದಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಲಾಗಿದೆ ಎಂದರು. ಕೇವಲ ಜನರ ವೋಟು ಗಿಟ್ಟಿಸಲು ಕಾಂಗ್ರೆಸ್ ಪಕ್ಷದ ನಾಯಕರು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ, ಸತ್ಯಾಂಶಗಳು ಒಂದೊಂದಾಗಿ ಹೊರಬೀಳುತ್ತಿವೆ, ಇನ್ನೂ ಯಾವ್ಯಾವ ಸಂಗತಿಗಳು ಬಯಲಿಗೆ ಬರಲಿವೆಯೋ ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ