ನಾನೀಗ ಸೋತಿದ್ದೇನೆ, ಇನ್ಮುಂದೆ ಮದ್ವೆಗೆ ಬಂದ್ರೂ ಮುಯ್ಯಿ ಹಾಕಲ್ಲ; ಸಹಾಯ ಕೇಳ್ಕೊಂಡು ಯಾರು ಬರಬೇಡಿ ಎಂದ ಮಾಜಿ ಶಾಸಕ
: ಇನ್ಮುಂದೆ ಸಹಾಯ ಕೇಳಿಕೊಂಡು ಯಾರೂ ನನ್ನ ಬಳಿ ಬರಬೇಡಿ. ಇನ್ಮೇಲೆ ನಾನು ಯಾವುದೇ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಇನ್ಮುಂದೆ ಸಹಾಯ ಕೇಳಿಕೊಂಡು ಯಾರೂ ನನ್ನ ಬಳಿ ಬರಬೇಡಿ. ಇನ್ಮೇಲೆ ನಾನು ಯಾವುದೇ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರು, ನಂಬಿದವರಿಂದಲೇ ನನಗೆ ಮೋಸ ಆಗಿದೆ. ನಾನೀಗ ಸೋತಿದ್ದೇನೆ. ಈ ಚುನಾವಣೆ ಸೋಲಿನಿಂದ ಬೇಸರವಾಗಿದ್ದು, ನನ್ನ ಮನಸ್ಸು ಕಲ್ಲಾಗಿದೆ. ವೈಯಕ್ತಿಕ ಕಷ್ಟ ಹೇಳಿಕೊಂಡು ನನ್ನ ಬಳಿ ಯಾರು ಕೂಡ ಬರಬೇಡಿ ಎಂದು ಸುರೇಶ್ ಗೌಡ ಅಸಮಾಧಾನ ಹೊರ ಹಾಕಿದ್ದಾರೆ.