HD Kumaraswamy; ಗ್ಯಾರಂಟಿಗಳ ಜಾರಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಾತ್ರ ಹೇಳಿಕೆ ನೀಡಲು ಅರ್ಹರು: ಹೆಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ ರಾಜ್ಯದ ಅತಿದೊಡ್ಡ ಆರ್ಥಿಕ ತಜ್ಞರಾಗಿದ್ದಾರೆ, ಅದು ತಪ್ಪುವುದನ್ನು ಅವರು ನೋಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

|

Updated on: Jun 02, 2023 | 1:15 PM

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಬಳಿಕ ತೀವ್ರ ಸ್ವರೂಪದ ಹತಾಷೆಗೊಳಗಾಗಿ ಕೋಪದಲ್ಲಿ ಹೇಳಿಕೆಗಳನ್ನು ನೀಡಲಾರಂಭಿಸಿದ್ದ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕೊಂಚ ಚೇತರಿಸಿಕೊಂಡಂತೆ ಕಾಣುತ್ತಿದೆ. ನಗರದಲ್ಲಿಂದು ಟಿವಿ9 ಕನ್ನಡ ವರದಿಗಾರನೊಂದಿಗೆ ಅವರು ಬ್ಯಾಲನ್ಸ್ ಆಗಿ ಮಾತಾಡಿದರು. ಸರ್ಕಾರ ಜಾರಿಗೊಳಿಸಬೇಕಿರುವ 5 ಗ್ಯಾರಂಟಿಗಳ (5 guarantees) ಬಗ್ಗೆ ಸಿದ್ದರಾಮಯ್ಯ (Siddaramaiah) ಸಂಪುಟದ ಮಂತ್ರಿಗಳೆಲ್ಲ ತಾವೇ ಮುಖ್ಯಮಂತ್ರಿಗಳಂತೆ ಮಾತಾಡುತ್ತಿದ್ದಾರೆ, ಅವರ ಹೇಳಿಕೆಗಳಿಗೆ ಬೆಲೆ ನೀಡುವ ಅವಶ್ಯಕತೆಯಿಲ್ಲ ಎಂದು ಕುಮಾರಸ್ವಾಮಿಗಳು ಹೇಳಿದರು. ಜನರಿಗೆ 5 ಗ್ಯಾರಂಟಿಗಳನ್ನು ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗಾಗಿ ಅವುಗಳನ್ನು ಜಾರಿಗೊಳಿಸುವ ಬಗ್ಗೆ ಈ ತ್ರಿಮೂರ್ತಿಗಳೇ ಉತ್ತರ ನೀಡಬೇಕು ಎಂದು ಅವರು ಹೇಳಿದರು. ಗ್ಯಾರಂಟಿಗಳಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ, ಸಿದ್ದರಾಮಯ್ಯ ರಾಜ್ಯದ ಅತಿದೊಡ್ಡ ಆರ್ಥಿಕ ತಜ್ಞರಾಗಿದ್ದಾರೆ, ಅದು ತಪ್ಪುವುದನ್ನು ಅವರು ನೋಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ