CM Siddaramaiah: ಗ್ಯಾರಂಟಿಗಳ ಜಾರಿ ಬಗ್ಗೆ ಇಂದು ಘೋಷಣೆ ನಿರೀಕ್ಷೆ, ಶಾಂತ ಮುಖಭಾವದೊಂದಿಗೆ ವಿಧಾನಸೌಧಕ್ಕೆ ಬಂದ ಸಿಎಂ ಸಿದ್ದರಾಮಯ್ಯ
5 ಗ್ಯಾರಂಟಿಗಳ ಜಾರಿಗೆ ಅವರು ಈಗಾಗಲೇ ಸಂಬಂಧಪಟ್ಟ ಖಾತೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರಕ್ಕೆ ಇಂದು ಬಹಳ ಮಹತ್ವದ ದಿನ. ಜನತೆಗೆ ನೀಡಿದ 5 ಗ್ಯಾರಂಟಿಗಳ (guarantees) ಬಗ್ಗೆ ಒಂದು ನಿರ್ಧಾರವನ್ನು ಸರ್ಕಾರ ಇಂದು ಪ್ರಕಟಿಸಲಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಈಗ ನಡೆಯುತ್ತಿದೆ. ಕ್ಯಾಬಿನೆಟ್ ಸಭೆಗೆ ಮೊದಲು ಮುಖ್ಯಮಂತ್ರಿ ವಿಧಾನ ಸೌಧಕ್ಕೆ (Vidhana Soudha) ಆಗಮಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ಮುಖದಲ್ಲಿ ಆತಂಕ ದುಗುಡವೇನೂ ಕಾಣಿತ್ತಿಲ್ಲ. ಅವರು ಶಾಂತಮುಖಭಾವದೊಂದಿಗೆ ನಡೆದು ಬರುತ್ತಿದ್ದಾರೆ. 5 ಗ್ಯಾರಂಟಿಗಳ ಜಾರಿಗೆ ಅವರು ಈಗಾಗಲೇ ಸಂಬಂಧಪಟ್ಟ ಖಾತೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸಭೆಯ ನಂತರ ಗ್ಯಾರಂಟಿಗಳ ಜಾರಿ ಬಗ್ಗೆ ಘೋಷಣೆಯಾಗಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos