ನಿಲ್ಲದ ವ್ಹೀಲಿಂಗ್ ಪುಂಡರ ಹಾವಳಿ; ಮಾರಕಾಸ್ತ್ರ ಹಿಡಿದು ಬೈಕ್ ರೈಡಿಂಗ್, ವಿಡಿಯೋ ವೈರಲ್
ವ್ಹೀಲಿಂಗ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇವರ ಹಾವಳಿಗೆ ಇನ್ನು ಪೊಲೀಸ್ ಇಲಾಖೆ ಬ್ರೇಕ್ ಹಾಕಿಲ್ಲ. ಹೌದು ಗೊರಗುಂಟೆ ಪಾಳ್ಯ ನೆಲಮಂಗಲ ಎಕ್ಸ್‌ಪ್ರೆಸ್ ವೇ ನಲ್ಲಿ ಪುಂಡರು ವ್ಹೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು: ವ್ಹೀಲಿಂಗ್(Wheeling) ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇವರ ಹಾವಳಿಗೆ ಇನ್ನು ಪೊಲೀಸ್(Police) ಇಲಾಖೆ ಬ್ರೇಕ್ ಹಾಕಿಲ್ಲ. ಹೌದು ಗೊರಗುಂಟೆ ಪಾಳ್ಯ ನೆಲಮಂಗಲ ಎಕ್ಸ್‌ಪ್ರೆಸ್ ವೇ ನಲ್ಲಿ ಪುಂಡರು ವ್ಹೀಲಿಂಗ್ ಮಾಡಿದ್ದಾರೆ. ಜೊತೆಗೆ ಮಾರಕಾಸ್ತ್ರಗಳನ್ನ ಹಿಡಿದು ವ್ಹೀಲಿಂಗ್ ಮಾಡಿದ್ದು, ರಸ್ತೆಗೆ ರಾಡ್ ತಾಗಿಸಿ ಸ್ಪಾರ್ಕ್ ಬರಿಸುವ ವಿಡಿಯೋವನ್ನ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಸ್ಟಂಟ್ ಮಾಡೋ ಪುಂಡರಿಂದ ಇತರ ಸವಾರರಿಗೆ ಆತಂಕವಾಗುತ್ತಿದ್ದು, ಈ ಕೂಡಲೇ ಈ ಪುಂಡರನ್ನ ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Published On - 11:04 am, Fri, 2 June 23