HD Kumaraswamy: ಸೋತಿದ್ದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳುವ ಬದಲು ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ಹತಾಷೆ ವ್ಯಕ್ತಪಡಿಸುತ್ತಿದ್ದಾರೆ!
ಚುನಾವಣೆ ಆಯೋಗದ ಮುಂದೆ ನೀಡಬೇಕಾದ ದೂರನ್ನು ಸುದ್ದಿಗೋಷ್ಟಿಗಳನ್ನು ನಡೆಸುತ್ತಾ ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳುತ್ತಿದ್ದಾರೆ.
ಬೆಂಗಳೂರು: ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಯಾವುದೇ ಪಕ್ಷದ ನೆರವಿಲ್ಲದೆ ಸರ್ಕಾರ ರಚಿಸುವ ಮಾತಾಡುತ್ತಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜನ ನೀಡಿದ ತೀರ್ಪಿನಿಂದ ಕಂಗಾಲಾಗಿದ್ದಾರೆ. 2018 ರಲ್ಲಿ ಜೆಡಿಎಸ್ ಗೆ 37 ಸ್ಥಾನ ಸಿಕ್ಕಿದ್ದರೆ ಈ ಬಾರಿ ಅದರ ಅರ್ಧದಷ್ಟು (19) ಮಾತ್ರ ಸಿಕ್ಕಿವೆ. ಖುದ್ದು ಅವರ ಮಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಮನಗರ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ತಮ್ಮ ಹತಾಷೆಯನ್ನು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ತೆಗೆಯುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಚುನಾವಣೆ ಆಯೋಗದ ಮುಂದೆ ನೀಡಬೇಕಾದ ದೂರನ್ನು ಸುದ್ದಿಗೋಷ್ಟಿಗಳನ್ನು ನಡೆಸುತ್ತಾ ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರು ಪಾರದರ್ಶಕ ಚುನಾವಣೆ ಹೇಗೆ ನಡೆಸುತ್ತಾರೆ ಅಂತ ಅರ್ಥವಾಗಲಿಲ್ಲ. ಕುಮಾರಸ್ವಾಮಿ ತಾವು ಕೂಡ ಮತದಾರರಿಗೆ ದುಡ್ಡು ಹಂಚಿದ್ದನ್ನು ಅಂಗೀಕರಿಸುತ್ತಾರೆ ಮತ್ತು ಅದೇ ವೇಳೆ ಡೆಬಿಟ್ ಕಾರ್ಡ್ ಗಳಂತೆ ಕಾಣುವ ಕಾರ್ಡ್ ಗಳನ್ನು ತೋರಿಸಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಹಂಚಿದೆ ಎಂದು ಹೇಳುತ್ತಾರೆ. ಅವರ ಮಾತುಗಳು ಗೊಂದಲಕ್ಕೆ ದೂಡುವುದರಲ್ಲಿ ಸಂದೇಹವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ