ದೆಹಲಿ: ಯಾಕೆ ಮೇಡಂ ಇದ್ದಕ್ಕಿದ್ದಂತೆ ದೆಹಲಿಗೆ ಬಂದಿದ್ದೀರಿ, ಹೈಕಮಾಂಡ್ ನಿಂದ ಕರೆ ಬಂತಾ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೀಡಿದ ಉತ್ತರ ಆಶ್ಚರ್ಯ ಹುಟ್ಟಿಸುವಂಥಾಗಿತ್ತು. ತಾನು ಎರಡು ದಿನಗಳಿಂದ ದೆಹಲಿಯಲ್ಲೇ ಇರುವ ಬಗ್ಗೆ ಹೇಳಿದ ಅವರು ಆರೋಗ್ಯ ಸರಿಯಿಲ್ಲದ ಕಾರಣ ಎಐಸಿಸಿ ಕಚೇರಿ (AICC office) ಕಡೆ ಗುರುವಾರ ಬಂದಿರಲಿಲ್ಲ ಎಂದರು. ಸರಿ ಬಿಡಿ, ಅವರು ಹೇಳಿದ ಮಾತನ್ನು ಪತ್ರಕರ್ತರು ನಂಬಿದಂತೆ ಮಾಡಿದ್ದೂ ಆಯಿತು. ಆದರೆ, ನಿಮಗೆ ಯಾವ ಖಾತೆ (portfolio) ಸಿಗುವ ನಿರೀಕ್ಷೆಯಿದೆ ಅಂತ ಸುದ್ದಿಗಾರರು ಕೇಳಿದಾಗ ಅವರು ಜೋರಾಗಿ ನಗಲಾರಂಭಿಸಿದರು! ಯಾಕೆ ಅಂತ ಗೊತ್ತಾಗದೆ ಮಾದ್ಯಮ ಪ್ರತಿನಿಧಿಗಳು ಸಹ ಅವರೊಂದಿಗೆ ನಗಲಾರಂಭಿಸಿದರು!!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ