Threads: ಟ್ವಿಟರ್ಗೆ ಸ್ಪರ್ಧೆ ಒಡ್ಡಲು ಇನ್ಸ್ಟಾಗ್ರಾಂ ಪರಿಚಯಿಸಿದೆ ಥ್ರೆಡ್ಸ್
ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್ಲೋಡ್ಗೆ ಲಭ್ಯವಿದೆ. ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಥ್ರೆಡ್ಸ್ ಆ್ಯಪ್ ಲಭ್ಯ.
ಮಾರ್ಕ್ ಜುಕರ್ಬರ್ಗ್ ಒಡೆತನದ ಮೆಟಾ ಕಂಪನಿ, ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಆ್ಯಪ್ ಅನ್ನು ಭಾರತ ಸಹಿತ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್ಲೋಡ್ಗೆ ಲಭ್ಯವಿದೆ. ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಥ್ರೆಡ್ಸ್ ಆ್ಯಪ್ ಲಭ್ಯವಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 1 ಕೋಟಿಗೂ ಅಧಿಕ ಡೌನ್ಲೋಡ್ಸ್ ಕಂಡಿದೆ. ಇನ್ಸ್ಟಾಗ್ರಾಂ ಲಾಗಿನ್ ಬಳಸಿಕೊಂಡು, ಹೊಸ ಥ್ರೆಡ್ಸ್ ಆ್ಯಪ್ಗೆ ಸೈನ್ ಇನ್ ಆಗಬಹುದು. ಇದರೊಂದಿಗೆ ಟ್ವಿಟರ್ ಜತೆಗಿನ ಫೇಸ್ಬುಕ್ ಮೆಟಾ ಕಂಪನಿಯ ಸ್ಪರ್ಧೆ ಮತ್ತಷ್ಟು ಜೋರಾಗಿದೆ.
Latest Videos