KPCC takes on HDK; ಕುಮಾರಸ್ವಾಮಿ ಬಿಜೆಪಿಯ ಪೇರೋಲ್ ನಲ್ಲಿದ್ದರು, ಕಾಂಗ್ರೆಸ್ ಪಕ್ಷದಲ್ಲಿ ಅಂಥ ಪರಿಪಾಠವಿಲ್ಲ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಕುಮಾರಸ್ವಾಮಿ ಬಳಸುವ ಪದ ‘ವರ್ಗಾವಣೆ ದಂಧೆ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಸಿದ್ದರಾಮಯ್ಯ ಯಾವತ್ತೂ ಇನ್ವಾಲ್ವ್ ಆದವರಲ್ಲ ಎಂದು ಲಕ್ಷ್ಮಣ್ ಹೇಳಿದರು.
ಬೆಂಗಳೂರು: ಪೋಸ್ಟಿಂಗ್ ರೂ.10 ಕೋಟಿ ಲಂಚ, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ, ಪೆನ್ ಡ್ರೈವ್ನಲ್ಲಿದೆ ಎಲ್ಲ ಪುರಾವೆ ಅಂತ ಸದನದಲ್ಲಿ ಮತ್ತು ಮಾಧ್ಯಮಗಳ ಮುಂದೆ ಹೇಳುತ್ತಿರುವ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ (M Laxman) ಆರೋಪಗಳನ್ನು ಸಾಬೀತು ಮಾಡುವಂತೆ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿಯವರು ಬಿಜೆಪಿಯ ಪೇರೋಲ್ ನಲ್ಲಿದ್ದರು (pyaroll) ಹಾಗಾಗಿ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಸದನದಲ್ಲಿ ಬಾಯಿಮುಚ್ಚಿಕೊಂಡು ಕೂರುತ್ತಿದ್ದರು. ಬಾಯಿ ತೆರೆಯದಿರಲು ಬಿಜೆಪಿ ಅವರಿಗೆ ಪ್ರತಿ ತಿಂಗಳು ಇಂತಿಷ್ಟು ಅಂತ ನೀಡುತಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅಂಥ ಪರಿಪಾಠವಿಲ್ಲ, ಪೆನ್ ಡ್ರೈವ್ ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡಿದರೆ ಕಾಂಗ್ರೆಸ್ ನಾಯಕರು ಹೆದರಿ ಪೇ ರೋಲ್ ಗೆ ಸೇರಿಸಿಕೊಳ್ಳುತ್ತಾರೆ ಅಂತ ಕುಮಾರಸ್ವಾಮಿ ಭಾವಿಸಿದ್ದರೆ ಅವರ ಭ್ರಮೆಯಲ್ಲಿದ್ದಾರೆ, ಅವರು ಬಳಸುವ ಪದ ‘ವರ್ಗಾವಣೆ ದಂಧೆ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಸಿದ್ದರಾಮಯ್ಯ ಯಾವತ್ತೂ ಇನ್ವಾಲ್ವ್ ಆದವರಲ್ಲ ಎಂದು ಲಕ್ಷ್ಮಣ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ